ದಸರಾ ಉದ್ಘಾಟಕರ ಬಗ್ಗೆ ಸಚಿವ ಹೆಚ್​ಸಿ ಮಹದೇವಪ್ಪ ಹೇಳಿದ್ದಿಷ್ಟು?

ಈಗಾಗಲೇ ದಸರಾ ಆಚರಣೆ ಕುರಿತು 19 ದಸರಾ ಉಪ ಸಮಿತಿಗಳ ತಂಡದ ಜತೆ ಸಭೆ ಮಾಡಿದ್ದೇನೆ. ಅದ್ಧೂರಿಯಾಗಿ ದಸರಾ ಆಚರಣೆಗೆ ಬೇಕಾದ ಎಲ್ಲಾ ರೂಪು ರೇಷಗಳ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹದೇವಪ್ಪ ಹೇಳಿದರು.

ದಸರಾ ಉದ್ಘಾಟಕರ ಬಗ್ಗೆ ಸಚಿವ ಹೆಚ್​ಸಿ ಮಹದೇವಪ್ಪ ಹೇಳಿದ್ದಿಷ್ಟು?
|

Updated on: Sep 04, 2024 | 10:19 PM

ಮೈಸೂರು, ಸೆ.04: ಈಗಾಗಲೇ ದಸರಾ ಆಚರಣೆ ಕುರಿತು 19 ದಸರಾ ಉಪ ಸಮಿತಿಗಳ ತಂಡದ ಜತೆ ಸಭೆ ಮಾಡಿದ್ದೇನೆ. ಅದ್ಧೂರಿಯಾಗಿ ದಸರಾ ಆಚರಣೆಗೆ ಬೇಕಾದ ಎಲ್ಲಾ ರೂಪು ರೇಷಗಳ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹದೇವಪ್ಪ(HC Mahadevappa) ಹೇಳಿದರು. ಕಳೆದ ಬಾರಿ ಆಗಿರುವ ನ್ಯೂನತೆ ಸರಿ ಪಡಿಸಿಕೊಂಡು ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಲಾಗುವುದು. ಜೊತೆಗೆ ಅರಮನೆ ಆವರಣದಲ್ಲಿ 4 ಗಂಟೆಯಿಂದಲೇ ಸಂಗೀತ ಕಾರ್ಯಕ್ರಮ ನಡೆಯಬೇಕು ಎಂದು ಹೇಳಿದ್ದೇನೆ. ಈ ಬಾರಿ ದಸರಾ ಉದ್ಘಾಟಕರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ, ಅದರ ಬಗ್ಗೆ ತೀರ್ಮಾನ ಮಾಡುವುದು ಸಿಎಂ ಸಿದ್ದರಾಮಯ್ಯ, ಅವರ ವಿವೇಚನೆಗೆ ಬಿಟ್ಟಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us