ಹಾಸನ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಶಾಲಾ ಕಟ್ಟಡ ಸುಮಾರು 5 ವರ್ಷವಾದರೂ ಉದ್ಘಾಟನೆ ಭಾಗ್ಯ ಸಿಗದೆ ಹಾಳಾಗುತ್ತಿದೆ. ಕಟ್ಟಡಕ್ಕೆ ಕಟ್ಟಡವೆಲ್ಲ ಕಸದ ರಾಶಿ ತುಂಬಿದೆ. ಅದುವೇ ಹಾಸನದ ಸಕಲೇಶಪುರದ ಹೆತ್ತೂರು ಗ್ರಾಮದಲ್ಲಿನ ಪದವಿಪೂರ್ವ ಕಾಲೇಜು ಕಟ್ಟಡ.
ಸುಮಾರು 52 ಹಳ್ಳಿಗಳ ಸಾವಿರಾರು ಮಕ್ಕಳಿಗೆ ಅನುಕೂಲವಾಗಲಿ ಅಂತ ಈ ಕಾಲೇಜನ್ನ ನಿರ್ಮಾಣ ಮಾಡಲಾಯ್ತು. ಆದ್ರೆ, ಕಟ್ಟಡ ನಿರ್ಮಾಣವಾಗಿ ಐದು ವರ್ಷ ಕಳೆದ್ರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಇನ್ನು, ಹಳೇ ಕಟ್ಟಡದ ಕೊಠಡಿಗಳಲ್ಲಿ ಕೂತು ಪಾಠ ಕೇಳುತ್ತಿರೋ ವಿದ್ಯಾರ್ಥಿಗಳು ಶೌಚಾಲಯವೂ ಇಲ್ಲದೇ ಪರದಾಡ್ತಿದ್ದಾರೆ.
ತಾಲೂಕು ಕೇಂದ್ರ ದೂರ ಇರೋದ್ರಿಂದ ಇಲ್ಲಿನ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರ್ತಾರೆ. ಇದೀಗ ಹೊಸದಾಗಿ ಕರ್ನಾಟಕ ಪಬ್ಲಿಕ್ ಶಾಲೆಯೂ ಆರಂಭಗೊಂಡಿದ್ದು, ಇರೋ ಕೆಲವೇ ಕೊಠಡಿಗಳಲ್ಲಿ ಹೊಂದಾಣಿಕೆ ಕಷ್ಟವಾಗಿದೆ. ಇನ್ನು ಕಟ್ಟಡ ಕಟ್ಟಿದ ಹಣ ಬಿಡುಗಡೆಯಾಗಿಲ್ಲ ಅಂತ ಗುತ್ತಿಗೆದಾರ ಕಟ್ಟಡವನ್ನ ಹಸ್ತಾಂತರಿಸುವುದಿಲ್ಲ ಎಂದಿದ್ದಾನೆ. ಒಟ್ನಲ್ಲಿ, ಕಾಲೇಜು ಕಟ್ಟಡ ಇದ್ದೂ ಇಲ್ಲದಂತಾಗಿದೆ.
Published On - 2:10 pm, Fri, 29 November 19