ಹೌದಾ! ಸೋಮಣ್ಣ ಜನತಾ ಬಜಾರ್ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ದರಾ?
ಬೆಂಗಳೂರು: ಹೆಚ್.ಡಿ.ದೇವೇಗೌಡರ ಮುಂದೆ ಸೋಮಣ್ಣ ಬಚ್ಚಾ. ಸೋಮಣ್ಣ ಯಾರ್ಯಾರಿಗೆ ಯಾವಾಗೆಲ್ಲಾ ಕಾಲಿಗೆ ಬಿದ್ದಿದ್ದಾರೆ ಅನ್ನೋದು ಗೊತ್ತಿದೆ. ನಿಮಗೆ ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ವಯಸ್ಸಿನಲ್ಲೂ ದೇವೇಗೌಡರು ಪಕ್ಷಕ್ಕಾಗಿ ಹೋರಾಟ ಮಾಡ್ತಾ ಇದ್ದಾರೆ. ಕೊನೆಯವರೆಗೂ ಅನ್ಯಾಯಗಳ ವಿರುದ್ಧ ದೇವೇಗೌಡರು ಹೋರಾಟ ಮಾಡ್ತಾರೆ. ಅವರು ಸೋಲು ಗೆಲುವು ಎರಡೂ ನೋಡಿದ್ದಾರೆ. ಸೋಮಣ್ಣ ಜನತಾ ಬಜಾರ್ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ದರು. ಸೋಮಣ್ಣ ಯಾರ್ಯಾರ ಕಾಲಿಗೋ ಬೀಳ್ತಾರೆ. ಅವತ್ತಿನ ದಿನಗಳಲ್ಲಿ […]
ಬೆಂಗಳೂರು: ಹೆಚ್.ಡಿ.ದೇವೇಗೌಡರ ಮುಂದೆ ಸೋಮಣ್ಣ ಬಚ್ಚಾ. ಸೋಮಣ್ಣ ಯಾರ್ಯಾರಿಗೆ ಯಾವಾಗೆಲ್ಲಾ ಕಾಲಿಗೆ ಬಿದ್ದಿದ್ದಾರೆ ಅನ್ನೋದು ಗೊತ್ತಿದೆ. ನಿಮಗೆ ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ವಯಸ್ಸಿನಲ್ಲೂ ದೇವೇಗೌಡರು ಪಕ್ಷಕ್ಕಾಗಿ ಹೋರಾಟ ಮಾಡ್ತಾ ಇದ್ದಾರೆ. ಕೊನೆಯವರೆಗೂ ಅನ್ಯಾಯಗಳ ವಿರುದ್ಧ ದೇವೇಗೌಡರು ಹೋರಾಟ ಮಾಡ್ತಾರೆ. ಅವರು ಸೋಲು ಗೆಲುವು ಎರಡೂ ನೋಡಿದ್ದಾರೆ. ಸೋಮಣ್ಣ ಜನತಾ ಬಜಾರ್ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ದರು. ಸೋಮಣ್ಣ ಯಾರ್ಯಾರ ಕಾಲಿಗೋ ಬೀಳ್ತಾರೆ. ಅವತ್ತಿನ ದಿನಗಳಲ್ಲಿ ಏನೇನು ಮಾಡಿದ್ದಾರೆಂದು ನೆನಪಿಸಿಕೊಳ್ಳಲಿ. ಅವರ ಹಾಗೆ ಪಕ್ಷದಲ್ಲಿ ಬೆಳೆದು ಆ ಮೇಲೆ ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸತ್ತವರ ಮನೆಯಲ್ಲೂ ಡಿವಿಎಸ್ ನಗ್ತಾರೆ: ಕೇಂದ್ರ ಸಚಿವ ಸದಾನಂದ ಗೌಡರು ಸತ್ತ ಮನೆಗೆ ಹೋಗಿ ನಗ್ತಾರೆ. ಹೀ ಅಂತಾ ನಗ್ತಾ ಇರ್ತಾರೆ. ಅದಕ್ಕೆ ಸತ್ತವರ ಮನೆಗೆ ಕರ್ಕೊಂಡು ಹೋಗ್ಬೇಡಿ ಅಂತ ನಾನು ಹೇಳಿದ್ದೇನೆ. ಅಲ್ಲೂ ಹೋಗಿ ಸತ್ತಿದ್ದಾರಾ ಅಂತ ನಗ್ತಾ ಕೇಳ್ತಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
Published On - 1:19 pm, Fri, 29 November 19