ಗದಗಿನ ಬಹುತೇಕ ಮನೆಗಳಿಗೆ ದುಪ್ಪಟ್ಟು ಬಿಲ್: ಉಚಿತ ವಿದ್ಯುತ್ ಯೋಜನೆ ವಿರುದ್ಧ ಮಹಿಳೆಯರು ಆಕ್ರೋಶ

| Updated By: ಗಂಗಾಧರ​ ಬ. ಸಾಬೋಜಿ

Updated on: May 16, 2024 | 2:51 PM

ಗದಗ ನಗರದ ಗಂಗೀಮಡಿ ಬಡಾವಣೆಯ ಬಹುತೇಕ ಮನೆಗಳಿಗೆ ದುಪ್ಪಟ್ಟು ವಿದ್ಯುತ್​ ಬಿಲ್ ನೀಡುವ ಮೂಲಕ​​ ಬಡ ಕುಟುಂಬಗಳಿಗೆ ಹೆಸ್ಕಾಂ ಬಿಗ್ ಶಾಕ್ ನೀಡಿದೆ. ಉಚಿತ ಯೋಜನೆ ಜಾರಿಗೂ ಮೊದಲು 80-100 ರೂ. ಬಿಲ್ ಬರುತ್ತಿತ್ತು. ಆದರೆ ಈಗ ಎರಡು, ಮೂರು ಪಟ್ಟು ಬಿಲ್ ಹೆಚ್ಚಿಗೆ ಬರುತ್ತಿದೆ ಅಂತ ಕಿಡಿಕಾಡಿದ್ದಾರೆ. ಗದಗನಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಹಳ್ಳ ಹಿಡಿದಿದೆ.

ಗದಗಿನ ಬಹುತೇಕ ಮನೆಗಳಿಗೆ ದುಪ್ಪಟ್ಟು ಬಿಲ್: ಉಚಿತ ವಿದ್ಯುತ್ ಯೋಜನೆ ವಿರುದ್ಧ ಮಹಿಳೆಯರು ಆಕ್ರೋಶ
ಗದಗ: ಬಹುತೇಕ ಮನೆಗಳಿಗೆ ದುಪ್ಪಟ್ಟು ಬಿಲ್, ಉಚಿತ ವಿದ್ಯುತ್ ಯೋಜನೆ ವಿರುದ್ಧ ಮಹಿಳೆಯರು ಆಕ್ರೋಶ
Follow us on

ಗದಗ, ಮೇ 16: ನಗರದ ಗಂಗೀಮಡಿ ಬಡಾವಣೆಯ ಬಹುತೇಕ ಮನೆಗಳಿಗೆ ದುಪ್ಪಟ್ಟು ವಿದ್ಯುತ್​ ಬಿಲ್ (Electricity bill) ನೀಡುವ ಮೂಲಕ​​ ಬಡ ಕುಟುಂಬಗಳಿಗೆ ಹೆಸ್ಕಾಂ (Hescom) ಬಿಗ್ ಶಾಕ್ ನೀಡಿದೆ. ಕಡು ಬಡವರ ಮನೆಗಳಿಗೆ ಪ್ರತಿ ತಿಂಗಳು 400, 500, 600 ರೂ. ಬಿಲ್​ ಬರುತ್ತಿದ್ದು, ಹೀಗಾಗಿ 200 ಯೂನಿಟ್​ ಉಚಿತ ವಿದ್ಯುತ್ ಯೋಜನೆ ವಿರುದ್ಧ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ವಿದ್ಯುತ್ ಬಿಲ್ ನೋಡಿದ ಬಡ ಕುಟುಂಬಗಳು ಕಂಗಾಲಾಗಿವೆ.

ಚುನಾವಣೆಯಲ್ಲಿ ಭರವಸೆ ನೀಡಿ‌ ಕಾಂಗ್ರೆಸ್ ಮೋಸ ಮಾಡಿದೆ ಅಂತ ಅಜ್ಜಿಯರು ಆಕ್ರೋಶ ಹೊರಹಾಕಿದ್ದು, ಬಡವರ ಬದುಕಿನ ಜೊತೆ ಆಟವಾಡಬಾದು ಆಂತ ಕಣ್ಣೀರು ಹಾಕಿದ್ದಾರೆ. ನಾವು ಸುಮ್ನೆ ಇರಲ್ಲ. ಮುಂದೆ ಕಪಾಳಗೆ ಹೊಡಿತೀವಿ. ಬರೋಬ್ಬರಿ ಬುದ್ಧಿ ಕಲಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೆಸರಿಗಷ್ಟೇ ಉಚಿತ ವಿದ್ಯುತ್ – ಆ ಕಡೆ ಮಳೆಯೂ ಇಲ್ಲ, ಈ ಕಡೆ ಬೋರ್​ವೆಲ್​ಗೆ ವಿದ್ಯುತ್​​​ ಕನೆಕ್ಷನ್ನೂ ಕೊಡುತ್ತಿಲ್ಲ- ಸರ್ಕಾರದ ವಿರುದ್ಧ ರೈತರು ಗರಂ

ಉಚಿತ ಯೋಜನೆ ಜಾರಿಗೂ ಮೊದಲು 80-100 ರೂ. ಬಿಲ್ ಬರುತ್ತಿತ್ತು. ಆದರೆ ಈಗ ಎರಡು, ಮೂರು ಪಟ್ಟು ಬಿಲ್ ಹೆಚ್ಚಿಗೆ ಬರುತ್ತಿದೆ ಅಂತ ಕಿಡಿಕಾಡಿದ್ದಾರೆ. ಗದಗನಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಹಳ್ಳ ಹಿಡಿದಿದೆ.

ಬಹುತೇಕ ಮನೆಗಳಲ್ಲಿ ಟಿವಿ, ಫ್ರಿಡ್ಜ್ ಇಲ್ಲ. ಆದರೂ ಭರ್ಜರಿ ವಿದ್ಯುತ್​ ಬಿಲ್ ‌ಬರುತ್ತಿದೆ. ಇನ್ನು ಬಿಲ್ ತುಂಬದ ಮನೆಗಳ ವಿದ್ಯುತ್​ ಅನ್ನು ಹೆಸ್ಕಾಂ ಕಟ್ ಮಾಡಿದೆ.

1.37 ಲಕ್ಷ ರೂ. ಅಧಿಕ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡ ಕನ್ನಡ ವಿವಿ 

ಬಳ್ಳಾರಿ: ಕನ್ನಡ ನಾಡ ನುಡಿ ಅಭಿವೃದ್ಧಿಗಾಗಿ ಸ್ಥಾಪನೆಯಾದ ವಿವಿಗೆ ಪದೆ – ಪದೆ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂಬುದು ಎದ್ದು ಕಾಣುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ವಿವಿ ಕರೆಂಟ್ ಬಿಲ್ ಪಾವತಿ ಮಾಡಿಲ್ಲ ಈ ವರಗೆ 1.37 ಕೋಟಿ ರೂ ಬಿಲ್ ಬಾಕಿ ಇದೆ.

ಇದನ್ನೂ ಓದಿ: ಉಚಿತ ವಿದ್ಯುತ್ ಆಸೆಯಲ್ಲಿದ್ದವರಿಗೆ ಹೆಸ್ಕಾಂ ಶಾಕ್! ದುಪ್ಪಟ್ಟು ದರದ ಬಿಲ್ ನೋಡಿ ಉತ್ತರ ಕನ್ನಡ ಜನತೆ ತಲ್ಲಣ

ಬಾಕಿ ಇರುವ ಬಿಲ್ ಪಾವತಿ ಮಾಡುವಂತೆ ಸರ್ಕಾರಕ್ಕೆ ಸಾಕಷ್ಟು ಬಾರಿ ವಿವಿ ಮನವಿ ಮಾಡಿದ್ರು ಡೋಂಟ್ ಕೇರ್ ಎಂದಿದೆ. ಹೀಗಾಗಿ ಇಷ್ಟೊಂದು ಹಣ ಬಾಕಿ ಇರುವ ಹಿನ್ನಲೆ ವಿದ್ಯುತ್ ಪೂರೈಕೆಯನ್ನ ಬಂದ್ ಮಾಡುತ್ತೆವೆ ಅಂತಾ ಜೆಸ್ಕಾಂ ನೋಟೀಸ್ ನೀಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:50 pm, Thu, 16 May 24