ಹೆಸರಿಗಷ್ಟೇ ಉಚಿತ ವಿದ್ಯುತ್ – ಆ ಕಡೆ ಮಳೆಯೂ ಇಲ್ಲ, ಈ ಕಡೆ ಬೋರ್​ವೆಲ್​ಗೆ ವಿದ್ಯುತ್​​​ ಕನೆಕ್ಷನ್ನೂ ಕೊಡುತ್ತಿಲ್ಲ- ಸರ್ಕಾರದ ವಿರುದ್ಧ ರೈತರು ಗರಂ​

500 ಮೀಟರ್ ಒಳಗೆ ವಿದ್ಯುತ್ ಕಲ್ಪಿಸಿಕೊಳ್ಳೋದಾದರೆ ರೈತರೆ ವಿದ್ಯುತ್ ಕಂಬ ಟಿಸಿಗೆ ಖುದ್ದಾಗಿ ಹಣ ಖರ್ಚು ಕಟ್ಟಬೇಕು. ಅದೇ 500 ಮೀಟರ್ ದಾಟಿದರೆ ಅಲ್ಲಿ ಉಚಿತವಾಗಿ ಸೋಲಾರ್ ಸೌಲಭ್ಯ ಕಲ್ಪಿಸಿಕೊಡೋದಾಗಿ ಹೇಳಿದೆ. ಇದು ರೈತವಿರೋಧಿಯಾಗಿದೆ. ಇದನ್ನು ಹಿಂಪಡೆಯಬೇಕು. ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿರುವಾಗ ಇದು ರೈತರಿಗೆ ಹೊರೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಸರಿಗಷ್ಟೇ ಉಚಿತ ವಿದ್ಯುತ್ - ಆ ಕಡೆ ಮಳೆಯೂ ಇಲ್ಲ, ಈ ಕಡೆ ಬೋರ್​ವೆಲ್​ಗೆ ವಿದ್ಯುತ್​​​ ಕನೆಕ್ಷನ್ನೂ ಕೊಡುತ್ತಿಲ್ಲ- ಸರ್ಕಾರದ ವಿರುದ್ಧ ರೈತರು ಗರಂ​
ಆ ಕಡೆ ಮಳೆಯೂ ಇಲ್ಲ, ಈ ಕಡೆ ಬೋರ್​ವೆಲ್​ಗೆ ವಿದ್ಯುತ್​​​ ಕನೆಕ್ಷನ್ನೂ ಕೊಡುತ್ತಿಲ್ಲ
Follow us
| Updated By: ಸಾಧು ಶ್ರೀನಾಥ್​

Updated on:Nov 16, 2023 | 10:58 AM

ಸರಕಾರ ರಾಜ್ಯದ ಜನರಿಗೆ 200 ಯುನಿಟ್ ಉಚಿತ ವಿದ್ಯುತ್ (electricity) ನೀಡುತ್ತಿದೆ.ನಾವು ಮನೆಗೆ ಬೆಳಕನ್ನು ನೀಡಿದ್ದೇವೆ ಎಂದು ಸರಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ.ಆದರೆ ರೈತರ ಬೋರವೆಲ್ ಗಳಿಗೆ ಸಮರ್ಪಕ ವಿದ್ಯುತ್ ನೀಡದೆ ಕೃಷಿಗೆ ಕಂಟಕ ತಂದಿದೆ.ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ರೈತರ ಬೋರ್ ವೆಲ್ ವಿದ್ಯುತ್ನ ಕನೆಕ್ಷನ್ ಗೂ ಕಂಟಕ ತಂದಿದೆ.ಬೋರವೆಲ್ (borewell) ಗಳಿಗೆ ವಿದ್ಯುತ್ ಕನೆಕ್ಷನ್ ಗೆ ಇದ್ದ ಆಕ್ರಮ ಸಕ್ರಮ, ಶೀಘ್ರ ಸಂಪರ್ಕ ಸೌಲಭ್ಯವನ್ನೇ ತಡೆ ಹಿಡಿದಿದೆ. ಇದರಿಂದ ಬೊರವೆಲ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೈತರು ಲಕ್ಷಾಂತರ ರೂ ಖರ್ಚು ಮಾಡಬೇಕಾಗಿದೆ. ಹಚ್ಚ ಹಸಿರಾದ ಕಬ್ಬಿನ ಬೆಳೆ ,ಹೊಲದಲ್ಲಿ ನೀರಾವರಿಗೆ ಅಂತ ಕೊರೆಸಿರುವ ಬೋರವೆಲ್ ಗಳು,ಮೋಟರ್. ಇನ್ನೊಂದು ಕಡೆ ಬೋರ್ ವೆಲ್ ಕೊರೆಸಿ ಕರೆಂಟ್ ಸೌಲಭ್ಯ ಕಲ್ಪಿಸದೆ ಹಾಗೆ ಬಿಟ್ಟಿರುವ ರೈತರು.ಅಂದ ಹಾಗೆ ಈ ದೃಶ್ಯಗಳು ಕಂಡುಬಂದ್ದು ಬಾಗಲಕೋಟೆ (Bagalkot) ಜಿಲ್ಲೆಯ ರೈತರ ಹೊಲದಲ್ಲಿ.

ಪ್ರಸ್ತುತ ಬರಗಾಲದ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲೂ ಮುಂಗಾರು ಹಿಂಗಾರು ಮಳೆ ಎರಡೂ ಕಾಲದ ಮಳೆ ಕೈಕೊಟ್ಟು ರೈತರು ಕಂಗಾಲಾಗಿದ್ದಾರೆ.ಜಿಲ್ಲಾದ್ಯಂತ ಬರಗಾಲ ತಾಂಡವವಾಡುತ್ತಿದೆ.ರೈತರ ಜೀವನ ಅಧೋಗತಿಗೆ ತಲುಪಿದೆ.ಈ ವೇಳೆ ಸರಕಾರ ರೈತರಿಗೆ ಮತ್ತೊಂದು ಶಾಕ್ ನೀಡಿ ಗಾಯದ ಮೇಲೆ ಬರೆ ಎಳೆದರು ಎಂಬಂತೆ ಮಾಡಿದೆ.ಹೌದು ನೂತನವಾಗಿ ಬೋರ್ವೆಲ್ ಕೊರೆಸಿದ ರೈತರಿಗೆ ಕರೆಂಟ್ ಸೌಲಭ್ಯ ಕಲ್ಪಿಸಲು ಬಾರದ ಸ್ಥಿತಿ ರೈತರಿಗೆ ಬಂದಿದೆ.

ಸರರಕಾರ ಆಕ್ರಮ ಸಕ್ರಮ ಶೀಘ್ರ ಸಂಪರ್ಕ ಸೌಲಭ್ಯ ಎರಡನ್ನು ಸ್ಥಗಿತಗೊಳಿಸಿದೆ. ಇದರಿಂದ ರೈತರಿಗೆ ಬೋರ್ವೆಲ್ ವಿದ್ಯುತ್ ಸಂಪರ್ಕ ಕಲ್ಪಿಸಲು ಎರಡುವರೆ ಲಕ್ಷದಷ್ಟು ಖರ್ಚು ಮಾಡಬೇಕಾಗಿದೆ.ಸರಕಾರ ಐದುನೂರು ಮೀಟರ್ ಒಳಗೆ ವಿದ್ಯುತ್ ಕಲ್ಪಿಸಿಕೊಳ್ಳೋದಾದರೆ ರೈತರೆ ವಿದ್ಯುತ್ ಕಂಬ ಟಿಸಿಗೆ ಖುದ್ದಾಗಿ ಹಣ ಖರ್ಚು ಮಾಡಬೇಕು .ಐದು ನೂರು ಮೀಟರ್ ದಾಟಿದರೆ ಅಲ್ಲಿ ಉಚಿತವಾಗಿ ಸೋಲಾರ್ ಸೌಲಭ್ಯ ಕಲ್ಪಿಸಿಕೊಡೋದಾಗಿ ಹೇಳಿದೆ.ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು ಇದು ರೈತವಿರೋಧಿಯಾಗಿದೆ. ಇದನ್ನು ಹಿಂಪಡೆಯಬೇಕು. ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿರುವಾಗ ಇದು ರೈತರಿಗೆ ಹೊರೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೊದಲೇ ಸರಿಯಾಗಿ ರೈತರ ಪಂಪ್ಸೆಟ್ ಗಳಿಗೆ ವಿದ್ಯುತ್ ಸಿಗುತ್ತಿಲ್ಲ.ಮಳೆ ಬೇರೆ ಇಲ್ಲ ಇದರಿಂದ ಕೃಷಿಗೆ ನೀರಿಲ್ಲದೆ ರೈತರು ತೊಂದರೆಗೆ ಸಿಲುಕಿದ್ದಾರೆ.ಈ ಮಧ್ಯೆ ನೂತನವಾಗಿ ಬೋರವೆಲ್ ಕೊರೆಸಿಕೊಳ್ಳಬೇಕೆಂದರೆ ಇದೊಂದು ಸಂಕಟ ಶುರುವಾಗಿದೆ.ಮೊದಲು ಬೋರವೆಲ್ ಕನೆಕ್ಷನ್ ಗೆ ಹೆಚ್ ಪಿ ಸಾಮರ್ಥ್ಯದಂತೆ ಒಂದು ಹೆಚ್ ಪಿ ಗೆ 1400 ರೂ. ನಂತರ ಅಭಿವೃದ್ದಿ ಚಾರ್ಜ್ ಅಂತ ಹತ್ತು ಸಾವಿರ ಪೀಜ್ ಕಟ್ಟಿದರೆ ಹೆಸ್ಕಾಮ್ ನವರು ಬೋರವೆಲ್ ವಿದ್ಯುತ್ ಕನೆಕ್ಷನ ಕೊಡುತ್ತಿದ್ದರು.

also read: ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್: ಹಲವು ಸಚಿವರ ಕೆಂಗಣ್ಣಿಗೂ ಗುರಿಯಾದ ಈ ಮಹದೇವ್ ಯಾರು?

ವಿದ್ಯುತ್ ಕಂಬ ಟಿಸಿ ಎಲ್ಲವನ್ನೂ ಅವರೆ ಅಳವಡಿಸುತ್ತಿದ್ದರು.ಆಕ್ರಮ ಸಕ್ರಮ ಯೋಜನೆಯಡಿ ಈ ಸೌಲಭ್ಯವಿತ್ತು.ಇನ್ನು ತ್ವರಿತ ಸಂಪರ್ಕದ ಮೂಲಕ ರೈತರು ತಾವೆ ಕಂಬ ಅಳವಡಿಸಿಕೊಂಡರೆ ಅದಕ್ಕೆ ಹೆಸ್ಕಾಮ್ ಟಿಸಿಯ್ನು ಅಳವಡಿಸಿಕೊಡುತ್ತಿತ್ತು.ಆದರೆ ಈಗ ಆ ಎರಡೂ ಸೌಲಭ್ಯವನ್ನು ಬಂದ್​ ಮಾಡಿದ್ದು, ರೈತರು ಬೋರ್ವೆಲ್ ಗೆ ಕನೆಕ್ಷನ್ ಪಡೆದುಕೊಳ್ಳಬೇಕಾದರೆ ತಾವೇ ಹಣ ಖರ್ಚು ಮಾಡಬೇಕಾಗಿದೆ.

ವಿದ್ಯುತ್ ಕಂಬ, ಟಿಸಿ ಎಲ್ಲ ಅಳವಡಿಸಿಕೊಂಡರೆ ಹೆಸ್ಕಾಮ್ ನಿಂದ ನೊಂದಣಿ ಮಾಡಿಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸುತ್ತಾರಂತೆ.ಇನ್ನು ಈ ಬಗ್ಗೆ ಹೆಸ್ಕಾಮ್ ಅಧಿಕಾರಿಗಳನ್ನು ಕೇಳಿದರೆ ಈ ಮೊದಲಿದ್ದ ಆಕ್ರಮ ಸಕ್ರಮ,ಶೀಘ್ರ ಸಂಪರ್ಕ ಸೌಲಭ್ಯ ಬಂದ್ ಆಗಿದೆ.ಹೊಸದಾಗಿ ಕನೆಕ್ಷನ್ ಮಾಡಿಕೊಳ್ಳುವವರು ಹಾಗೂ ಆಕ್ರಮ ಸಕ್ರಮದ ವ್ಯಾಪ್ತಿಗೆ ಬರುವವರು ನಿಮ್ಮ ದಾಖಲಾತಿ ರೆಡಿ ಮಾಡಿಟ್ಟುಕೊಂಡು ನಿಗಮದ ಸುತ್ತೋಲೆ ಬರುವವರೆಗೂ ಕಾಯಿರಿ.ಅವಶ್ಯ ಅವಸರ ಇರುವವರು ನೀವೆ ಖುದ್ದಾಗಿ ಹಣ ಖರ್ಚು ಮಾಡಿ ವಿದ್ಯುತ್ ಕಂಬ ಟಿಸಿ ಎಲ್ಲ ಅಳವಡಿಸಿಕೊಂಡರೆ ನಾವು ಕನೆಕ್ಷನ್ ಕೊಡುತ್ತೇವೆ.ನಾವು ನಿಗಮದ ಸುತ್ತೋಲೆಗಾಗಿ ಕಾಯುತ್ತಿದ್ದೇವೆ. ಸುತ್ತೋಲೆ ಆದೇಶ ಯಾವ ಪ್ರಕಾರ ಬರುತ್ತೋ ಆ ಪ್ರಕಾರ ನೂತನ ಬೋರ್ವೆಲ್ ಗಳಿಗೆ ಹೊಸ ಕನೆಕ್ಷನ್ ಕೊಡುತ್ತೇವೆ ಅಂತಾರೆ.

ಒಟ್ಟಿನಲ್ಲಿ ಬರಗಾಲದ ಮಧ್ಯೆ ರೈತರಿಗೆ ಹೆಸ್ಕಾಮ್ ಮತ್ತೊಂದ ಬರೆ ಎಳೆದಿದೆ.ಇದು ರೈತವಿರೋಧಿ ಅಂತ ರೈತರು ಹೇಳುತ್ತಿದ್ದಾರೆ.ಹೆಸ್ಕಾಮ್ ಅಧಿಕಾರಿಗಳು ನಿಗಮದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಸುತ್ತೋಲೆ ಪ್ರಕಾರ ಕ್ರಮ ಅಂತಿದ್ದಾರೆ.ಸುತ್ತೋಲೆ ರೈತಪರ ಇರುತ್ತೋ ಕಣ್ಣೊರೆಸುವ ತಂತ್ರದ ರೀತಿ ಇರುತ್ತೋ ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:13 am, Thu, 16 November 23

ತಾಜಾ ಸುದ್ದಿ