ಗದಗಿನಲ್ಲಿ ಆನ್​ಲೈನ್ ಗೇಮಿಂಗ್​​ಗೆ ವ್ಯಕ್ತಿ ಬಲಿ: ಬ್ಯಾನ್​ ಮಾಡುವಂತೆ ಡೆತ್ ನೋಟ್​ನಲ್ಲಿ ಮನವಿ

ಗದಗದಲ್ಲಿ ಆನ್​ಲೈನ್ ಗೇಮಿಂಗ್​​ನಿಂದ ಹಣ ಕಳೆದುಕೊಂಡು ಮನನೊಂದು​​ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಇನ್ನು ಮೃತ ವ್ಯಕ್ತಿ ಡೆತ್ ನೋಟ್‌ನಲ್ಲಿ ಆನ್‌ಲೈನ್‌ ಗೇಮಿಂಗ್​ ನಿಷೇಧಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಗದಗ ಶಹರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.‌

ಗದಗಿನಲ್ಲಿ ಆನ್​ಲೈನ್ ಗೇಮಿಂಗ್​​ಗೆ ವ್ಯಕ್ತಿ ಬಲಿ: ಬ್ಯಾನ್​ ಮಾಡುವಂತೆ ಡೆತ್ ನೋಟ್​ನಲ್ಲಿ ಮನವಿ
ಗದಗಿನಲ್ಲಿ ಆನ್​ಲೈನ್ ಗೇಮಿಂಗ್​​ಗೆ ವ್ಯಕ್ತಿ ಬಲಿ: ಬ್ಯಾನ್​ ಮಾಡುವಂತೆ ಡೆತ್ ನೋಟ್​ನಲ್ಲಿ ಮನವಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 02, 2024 | 5:40 PM

ಗದಗ, ಡಿಸೆಂಬರ್​​ 02: ಇದು ಡಿಜಿಟಲ್ ಯುಗ. ಕ್ಷಣ ಕ್ಷಣವೂ ಮೊಬೈಲ್ ಬಿಟ್ಟು ಇರುವುದಿಲ್ಲ. ಅದರಲ್ಲೂ ಯುವ ಪೀಳಿಗೆ ಬೊಬೈಲ್​ನಲ್ಲಿ ಹುಳುವಾಗಿಬಿಟ್ಟಿದ್ದಾರೆ. ಅಷ್ಟೊಂದು ಮೊಬೈಲ್​ಗೆ ಅಡಿಕ್ಟ್ ಆಗಿದ್ದಾರೆ. ಡಿಜಿಟಲ್ ಯುಗ ಎಷ್ಟು ಒಳೆಯದೋ ಅಷ್ಟೇ ಮಾರಕವಾಗಿದೆ. ಆನ್ ಲೈನ್​​ ಗೇಮ್​ಗಳಿಗೆ (Online Gaming) ದುಡಿದ ಹಣವನ್ನ ಹೂಡಿಕೆ ಮಾಡಿ ಕಳೆದುಕೊಳ್ಳುತ್ತಿದ್ದಾರೆ. ಇದೀಗ ನಗರದಲ್ಲಿ ಆನ್ ಲೈನ್ ಗೇಮ್​ಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಅಧಿವೇಶನದಲ್ಲಿ ಶಾಸಕರು ಚರ್ಚಿಸಿ ಆನ್ ಲೈನ್ ಗೇಮ್ ಬ್ಯಾನ್ ಮಾಡಿಸಬೇಕು ಅಂತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೇಣು ಹಾಕಿಕೊಂಡು ಆತ್ಮಹತ್ಯೆ

ಆನ್ ಲೈನ್ ಗೇಮ್​ನಿಂದ ಹಣ ಕಳೆದುಕೊಂಡ ಜಗದೀಶ್ ಹಳೇಮನಿ ಎಂಬುವವರು ಮನನೊಂದು ನಗರದ ಹೊಟೇಲ್ ವಿಶ್ವದಲ್ಲಿ ಪ್ಯಾನ್​ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೆಂಬರ್ 30 ರ ರಾತ್ರಿ ವಿಶ್ವ ಹೊಟೇಲ್​ನಲ್ಲಿ ಜಗದೀಶ್ ಹಳೇಮನಿ ರೂಮ್ ಮಾಡಿಕೊಂಡಿದ್ದು, ಬೆಳಗ್ಗೆಯಿಂದ ಕುಟುಂಬಸ್ಥರು ಫೋನ್ ಮಾಡಿದರೂ ಪಿಕ್​​ ಮಾಡಿಲ್ಲವಂತೆ. ಹೀಗಾಗಿ ಕುಟುಂಬಸ್ಥರಿಗೆ ಆತಂಕ ಎದುರಾಗಿದೆ.

ಇದನ್ನೂ ಓದಿ: ಲವರ್​ನ ಕೊಂದು ಆತ್ಮಹತ್ಯೆಗೆ ಆನ್​ಲೈನ್​ನಲ್ಲಿ ಹಗ್ಗ ಆರ್ಡರ್​: ಪ್ರೀತಿ ಕೊಂದ ಕೊಲೆಗಾರನ ಸ್ಫೋಟಕ ಅಂಶ ಬೆಳಕಿಗೆ

ಪೊಲೀಸರ ಮೂಲಕ ಜಗದೀಶ್ ವಿಶ್ವ ಹೊಟೇಲ್​ನಲ್ಲಿ ರೂಮ್ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೊಟೇಲ್​ಗೆ ಹೋಗಿ ನೋಡಿದ್ದಾಗ ಜಗದೀಶ್ ಪ್ಯಾನ್​ಗೆ ನೇಣು ಹಾಕಿಕೊಂಡಿದ್ದಾರೆ. ಜಗದೀಶ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಸಹ ಬರೆದು ಇಟ್ಟಿದ್ದು, ಆನ್ ಲೈನ್ ಗೇಮ್​ನಿಂದ ಸಾಕಷ್ಟು ಹಣ ಕಳೆದುಕೊಂಡಿದೇನೆ. ಸರ್ಕಾರ ಆನ್ ಲೈನ್ ಗೇಮ್ ಬ್ಯಾನ್ ಮಾಡಬೇಕು. ಅಧಿವೇಶನದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಆನ್ ಲೈನ್ ಗೇಮ್ ಬ್ಯಾನ್ ಬಗ್ಗೆ ಚರ್ಚೆ ನಡಿಸಬೇಕು ಅಂತ ಒತ್ತಾಯಿಸಿದ್ದಾರೆ.

ಕುಟುಂಬಸ್ಥರು ಕಣ್ಣೀರು

ಆನ್ ಲೈನ್ ಗೇಮ್​ಗೆ ಬಹಳಷ್ಟು ಯುವಕರು ಹಾಳಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ಆನ್ ಲೈನ್ ಗೇಮ್ ಬ್ಯಾನ್ ಮಾಡಲು ಕ್ರಮ ಕೈಗೊಳ್ಳಬೇಕೆಂದು ಡೆತ್ ನೋಟ್​ನಲ್ಲಿ ಬರೆದಿದ್ದಾನೆಂದು ಕುಟುಂಬಸ್ಥರು ಹೇಳಿದ್ದಾರೆ. ಜಗದೀಶ್​ನಿಗೆ ಮದುವೆಯಾಗಿ ಏಳು ವರ್ಷ ಕಳೆದಿದೆ. ಇಬ್ಬರು ಮಕ್ಕಳು ಇದ್ದಾರೆ. ಆನ್ ಲೈನ್ ಗೇಮ್ ಗೆ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಸದ್ಯ ಜಗದೀಶ್​ನ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಉಡುಪಿ: ಡ್ಯಾಮ್​ನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಜಗದೀಶ್ ಶಿರಹಟ್ಟಿಯಲ್ಲಿ ಬಾಂಡೆ ಅಂಗಡಿ ಇಟ್ಟಿಕೊಂಡಿದ್ದರು. ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಆದರೆ ಜಗದೀಶ್​ಗೆ ಆನ್ ಲೈನ್ ಗೇಮ್ ಭೂತ ಹೊಕ್ಕು ಆತನ ಜೀವವನ್ನೆ ಕಿತ್ತುಕೊಂಡಿದೆ. ಆನ್ ಲೈನ್ ಮೂಲ ಆಟವಾಡಿ ದುಡಿದ ಹಣವನ್ನು ಕಳೆದುಕೊಂಡಿದ್ದಾರೆ. ಆನ್ ಲೈನ್ ಗೇಮ್​ನಲ್ಲಿ ಹಣ ಕಳೆದುಕೊಂಡಿರೋದು ಮನೆಯಲ್ಲಿ ಗೊತ್ತಾದರೆ ಸಮಸ್ಯೆ ಆಗುತ್ತೇ ಅಂತಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಆನ್ ಲೈನ್ ಗೇಮ್​ ಬ್ಯಾನ್​ಗೆ ಮನವಿ

ಕುಟುಂಬಸ್ಥರು ಜಗದೀಶ್​ನಿಗೆ ಬಂದ ಪರಿಸ್ಥಿತಿ ಬೇರೆಯವರಿಗೆ ಬರಬಾರದು. ದಿನ ನಿತ್ಯ ನೂರಾರು ಯುವಕರು ಆನ್ ಲೈನ್ ಗೇಮ್​ಗೆ ಮಾರುಹೋಗುತ್ತಿದ್ದಾರೆ. ಕುಟುಂಬಸ್ಥರ ಮಾತು ಕೇಳುತ್ತಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಆನ್ ಲೈನ್ ಗೇಮ್ ಗಳನ್ನು ಬ್ಯಾನ್ ಮಾಡಬೇಕೆಂದು ಮೃತನ ಸಂಬಂಧಿಕರು ಮನವಿ ಮಾಡಿಕೊಂಡಿದ್ದಾರೆ. ಇನ್ನು ಗದಗ ಶಹರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.‌

ಒಟ್ಟಿನಲ್ಲಿ ಡಿಜಿಟಲ್ ಯುಗದಲ್ಲಿ ಯುವಕರು ದಾರಿ ತಪ್ಪಿ ಆನ್ ಲೈನ್ ಗೇಮ್ ಭೂತಕ್ಕೆ ಅಡಿಕ್ಟ್​ ಆಗಿ ತಾವು ದುಡಿದ ಹಣವನ್ನು ಕಳೆದುಕೊಂಡ ಬಲಿಯಾಗಿತ್ತಿದ್ದಾರೆ. ಇನ್ನಾದರೂ ಯವಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!
ರಸ್ತೆಯಲ್ಲೇ ಲೇಡಿ ಕಾನ್​ಸ್ಟೆಬಲ್​ ಕೆನ್ನೆಗೆ ಹೊಡೆದು, ಚುಂಬಿಸಿದ ಬೈಕ್ ಸವಾರ
ರಸ್ತೆಯಲ್ಲೇ ಲೇಡಿ ಕಾನ್​ಸ್ಟೆಬಲ್​ ಕೆನ್ನೆಗೆ ಹೊಡೆದು, ಚುಂಬಿಸಿದ ಬೈಕ್ ಸವಾರ
ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
‘ಚೈತ್ರಾ ಯಾರಿಗೆ ಹಾಲು ಕೊಡ್ತಾರೆ ಅಂತ ಗೊತ್ತಾಗಲ್ಲ’: ಐಶ್ವರ್ಯಾ ನೇರ ಮಾತು
‘ಚೈತ್ರಾ ಯಾರಿಗೆ ಹಾಲು ಕೊಡ್ತಾರೆ ಅಂತ ಗೊತ್ತಾಗಲ್ಲ’: ಐಶ್ವರ್ಯಾ ನೇರ ಮಾತು
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ