ಮೊಮ್ಮಕ್ಕಳ ಮದುವೆಗಾಗಿ ಮಾಡಿಸಿಟ್ಟಿದ್ದ ಚಿನ್ನಾಭರಣ ಕೊಳ್ಳೆ ಹೊಡೆದ ಖದೀಮರು!

ಮೊಮ್ಮಕ್ಕಳ ಮದುವೆಗಾಗಿ ಮಾಡಿಸಿಟ್ಟಿದ್ದ ಚಿನ್ನಾಭರಣ ಕೊಳ್ಳೆ ಹೊಡೆದ ಖದೀಮರು!

ಗದಗ: ಅವರು ಮೊಮ್ಮಕ್ಕಳ ಮದುವೆಗೆ ಅಂತ ಕಷ್ಟಪಟ್ಟು ಗೋವಾದಲ್ಲಿ ದುಡಿದು ಕೂಡಿಟ್ಟ ಹಣದಲ್ಲಿ ಅಷ್ಟೋ ಇಷ್ಟೋ ಚಿನ್ನ ಖರೀದಿಸಿದ್ರು. ಆದ್ರೆ ಆ ಮನೆ ಯಜಮಾನಿ ಗೋವಾಕ್ಕೆ ಹೋಗಿದ್ದೇ ತಡ. ಖತರ್ನಾಕ್‌ಗಳು ಭರ್ಜರಿ ಸ್ಕೇಚ್ ಹಾಕಿದ್ರು. ಗೋವಾದಿಂದ ಬಂದು ನೋಡಿದ್ರೆ ಮನೆ ಫುಲ್ ಖಾಲಿ ಖಾಲಿಯಾಗಿತ್ತು. ಮನೆಯಲ್ಲಿ ಇಟ್ಟಿರೋದನ್ನೆಲ್ಲಾ ಗುಡಿಸಿ ಗುಂಡಾಂತರ ಮಾಡಿದ್ದಾರೆ. ನಯಾಪೈಸೆ ಕೂಡ ಬಿಡದಂಗೆ ಕೊಳ್ಳೆ ಹೊಡೆದಿದ್ದಾರೆ. ದರೋಡೆಕೋರರ ಅಟ್ಟಹಾಸಕ್ಕೆ ಎಲ್ರೂ ನಡುಗಿ ಹೋಗಿದ್ದಾರೆ. ಮನೆಯಲ್ಲಿಟ್ಟಿದ್ದ ಚಿನ್ನಾಭರಣ. ಹಣ ಕಳೆದ್ಕೊಂಡು ದಂಗು ಬಡಿದು ಕೂತಿದ್ದಾರೆ. ತಾಂಡಾ […]

sadhu srinath

|

Jan 10, 2020 | 7:53 PM

ಗದಗ: ಅವರು ಮೊಮ್ಮಕ್ಕಳ ಮದುವೆಗೆ ಅಂತ ಕಷ್ಟಪಟ್ಟು ಗೋವಾದಲ್ಲಿ ದುಡಿದು ಕೂಡಿಟ್ಟ ಹಣದಲ್ಲಿ ಅಷ್ಟೋ ಇಷ್ಟೋ ಚಿನ್ನ ಖರೀದಿಸಿದ್ರು. ಆದ್ರೆ ಆ ಮನೆ ಯಜಮಾನಿ ಗೋವಾಕ್ಕೆ ಹೋಗಿದ್ದೇ ತಡ. ಖತರ್ನಾಕ್‌ಗಳು ಭರ್ಜರಿ ಸ್ಕೇಚ್ ಹಾಕಿದ್ರು. ಗೋವಾದಿಂದ ಬಂದು ನೋಡಿದ್ರೆ ಮನೆ ಫುಲ್ ಖಾಲಿ ಖಾಲಿಯಾಗಿತ್ತು.

ಮನೆಯಲ್ಲಿ ಇಟ್ಟಿರೋದನ್ನೆಲ್ಲಾ ಗುಡಿಸಿ ಗುಂಡಾಂತರ ಮಾಡಿದ್ದಾರೆ. ನಯಾಪೈಸೆ ಕೂಡ ಬಿಡದಂಗೆ ಕೊಳ್ಳೆ ಹೊಡೆದಿದ್ದಾರೆ. ದರೋಡೆಕೋರರ ಅಟ್ಟಹಾಸಕ್ಕೆ ಎಲ್ರೂ ನಡುಗಿ ಹೋಗಿದ್ದಾರೆ. ಮನೆಯಲ್ಲಿಟ್ಟಿದ್ದ ಚಿನ್ನಾಭರಣ. ಹಣ ಕಳೆದ್ಕೊಂಡು ದಂಗು ಬಡಿದು ಕೂತಿದ್ದಾರೆ.

ತಾಂಡಾ ಜನರನ್ನ ಬೆಚ್ಚಿ ಬೀಳಿಸಿದೆ ಆ ಕಳ್ಳರ ಗ್ಯಾಂಗ್! ಜನರು ಮನೆಯಲ್ಲಿದ್ರೇನೆ ದರೋಡೆಕೋರು ಇರೋ ಬರೋದನ್ನೆಲ್ಲಾ ದೋಚಿ ಜೂಟ್ ಆಗ್ತಾರೆ. ಅಂತದ್ರಲ್ಲಿ ಮನೆಯಲ್ಲಿ ಯಾರು ಇಲ್ಲ ಅಂದ್ರೆ ಕೇಳ್ಬೇಕಾ? ಅಂದಹಾಗೆ ಗದಗ ತಾಲೂಕಿನ ನಾಗಾವಿ ತಾಂಡಾದ ಜನ 6 ತಿಂಗಳು ಮನೆಯಲ್ಲಿ ವಾಸಿಸಿದ್ರೆ, ಶೇ.70ರಷ್ಟು ಜನ 6 ತಿಂಗಳು ಗೋವಾಕ್ಕೆ ಕೆಲಸಕ್ಕೆ ತೆರಳ್ತಾರೆ. ಹೀಗೆ ಪಾರವ್ವ ದೊಡ್ಡಮನಿ ಮಕ್ಕಳು ಗೋವಾದಲ್ಲಿರೋದ್ರಿಂದ ಕಳೆದ 10 ದಿನದ ಹಿಂದೆ ಗೋವಾಕ್ಕೆ ತೆರಳಿದ್ರಂತೆ.

ಆದ್ರೆ, ಲೂಟಿ ಹೊಡೆಯೋಕೆ ಹೊಂಚು ಹಾಕಿದ್ದ ಖದೀಮರು, ಪಾರವ್ವ ದೊಡ್ಡಮನಿ ಮನೆ ಲಾಕ್​​ ಮುರಿದಿದ್ದಾರೆ. ಮನೆಯಲ್ಲಿಟ್ಟು ಹೋಗಿದ್ದ 150 ಗ್ರಾಂ ಚಿನ್ನಾಭರಣ, 1 ಲಕ್ಷ ನಗದು ದೋಚಿ ಜೂಟ್ ಆಗಿದ್ದಾರೆ. ಆದ್ರೆ, ಪಾರವ್ವ ಮರಳಿ ಊರಿಗೆ ಬಂದಾಗ ಶಾಕ್ ಆಗತ್ತು. ಮೊಮ್ಮಕ್ಕಳ ಮದುವೆಗಾಗಿ ಮಾಡಿಸಿದ್ದ ಚಿನ್ನಾಭರಣ, ಕೂಡಿಟ್ಟಿದ್ದ ಹಣ ದರೋಡೆಯಾಗಿರೋದು ಕಂಡು ಅಲ್ಲೇ ಕುಸಿದು ಬಿದ್ದಿದ್ದಾರೆ.

ಈರುಳ್ಳಿ ಆಯ್ತು.. ಈಗ ಚಿನ್ನಾಭರಣಕ್ಕೆ ಹಾಕಿದ್ರು ಕನ್ನ! ಇನ್ನು, ಇದೀಗ ಪಾರವ್ವ ಮನೆಯಲ್ಲಿ ಕಳ್ಳರು ಕೈಚಳಕ ತೋರಿರೋದು ಇಡೀ ತಾಂಡಾ ಜನರನ್ನೇ ದಂಗು ಬಡಿಸಿದೆ. ಪೊಲೀಸರು ಕೂಡ ಎಂಟ್ರಿ ಕೊಟ್ಟಿದ್ದು ಕಳ್ಳರ ಗ್ಯಾಂಗ್​ಗೆ ಬಲೆ ಬೀಸಿದ್ದಾರೆ. ಇಷ್ಟು ದಿನ ಗದಗದಲ್ಲಿ ಈರುಳ್ಳಿಗೆ ಕನ್ನ ಹಾಕ್ತಿದ್ದಿದ್ದು ಜನರ ನಿದ್ದೆಗೆಡಿಸಿತ್ತು. ಆದ್ರೀಗ ಚಿನ್ನದ ಬೆಲೆ ಗಗನಕ್ಕೇರಿರೋದ್ರಿಂದ ಮನೆಯಲ್ಲಿ ಹೇಗಿಡೋದು ಅಂತ ತಾಂಡಾ ನಿವಾಸಿಗಳ ದಂಗಾಗಿದ್ದಾರೆ. ಒಟ್ನಲ್ಲಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಖದೀಮರು ಕೈಚಳಕ ತೋರಿರೋದು ಜನರ ನಿದ್ದೆಗೆಡಿಸಿದೆ. ಇತ್ತ ಪೊಲೀಸ್ರು ಕೂಡ ದರೋಡೆಕೋರ ಪತ್ತೆಗೆ ಬಲೆ ಬೀಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada