ಕೌಟುಂಬಿಕ ಕಲಹ ಶಂಕೆ: ವಿಷ ಸೇವಿಸಿ ಅಕ್ಕ-ತಮ್ಮ ಆತ್ಮಹತ್ಯೆ

ಕೌಟುಂಬಿಕ ಕಲಹ ಶಂಕೆ: ವಿಷ ಸೇವಿಸಿ ಅಕ್ಕ-ತಮ್ಮ ಆತ್ಮಹತ್ಯೆ

ಗದಗ: ಕೌಟುಂಬಿಕ ಕಲಹ ಶಂಕೆ ಹಿನ್ನೆಲೆಯಲ್ಲಿ ವಿಷ ಸೇವಿಸಿ ಅಕ್ಕ-ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ರಿಂಗ್ ರೋಡ್ ಬಳಿ ನಡೆದಿದೆ. ಅಕ್ಕ ಅನಸೂಯಾ ತುಬಾಕಿ(38), ತಮ್ಮ ಈರಣ್ಣ ಗಂಟಿ(35) ಮೃತರು.

ರಿಂಗ್ ರೋಡ್ ಬಳಿಯ ಮುಂಡರಗಿ ರಸ್ತೆಯ ಜಮೀನಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜಮೀನು ಮಾಲೀಕರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಪ್ರಲ್ಹಾದ್, ಪಿಎಸ್ಐ ಎಂ.ಜಿ.ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Click on your DTH Provider to Add TV9 Kannada