Chandrashekhar Guruji Murder: ಚಂದ್ರಶೇಖರ ಗುರೂಜಿ ಹತ್ಯೆ ಮನಸ್ಸಿಗೆ ನೋವು ತಂದಿದೆ: ಸಚಿವ ಸಿಸಿ ಪಾಟೀಲ್​​ ಸಂತಾಪ

| Updated By: ವಿವೇಕ ಬಿರಾದಾರ

Updated on: Jul 05, 2022 | 5:57 PM

ಚಂದ್ರಶೇಖರ ಗುರುಜಿ ಹತ್ಯೆ ಮನಸ್ಸಿಗೆ ನೋವು ತಂದಿದೆ. ಯಾವುದೇ ವ್ಯವಹಾರ ಇರಬಹುದು ಕಾನೂನು ಇದೆ. ವೈಯಕ್ತಿಕ ಕಾರಣಕ್ಕಾಗಿ ಹತ್ಯೆ ಸರಿಯಲ್ಲ ಎಂದು ಗದಗನಲ್ಲಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.

Chandrashekhar Guruji Murder: ಚಂದ್ರಶೇಖರ ಗುರೂಜಿ ಹತ್ಯೆ ಮನಸ್ಸಿಗೆ ನೋವು ತಂದಿದೆ: ಸಚಿವ ಸಿಸಿ ಪಾಟೀಲ್​​ ಸಂತಾಪ
ಸಚಿವ ಸಿಸಿ ಪಾಟೀಲ
Follow us on

ಗದಗ: ಚಂದ್ರಶೇಖರ ಗುರುಜಿ  ಹತ್ಯೆ (Chandrashekhar Guruji Murder) ಮನಸ್ಸಿಗೆ ನೋವು ತಂದಿದೆ. ಯಾವುದೇ ವ್ಯವಹಾರ ಇರಬಹುದು ಕಾನೂನು (Law) ಇದೆ. ವೈಯಕ್ತಿಕ ಕಾರಣಕ್ಕಾಗಿ ಹತ್ಯೆ ಸರಿಯಲ್ಲ ಎಂದು ಗದಗನಲ್ಲಿ (Gadag) ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ (CC Patil) ಹೇಳಿದ್ದಾರೆ. ನಾಲ್ಕು ಜನ ಹಿರಿಯರು ಇರ್ತಾರೆ ಕುಳಿತುಕೊಂಡು ಬಗೆಹರಿಸಿಕೊಳ್ಳಬೇಕು. ಲೇವಾದೇವಿ ವ್ಯವಹಾರ ಅಂತ ಮಾಧ್ಯಮದಲ್ಲಿ ಬರ್ತಾಯಿದೆ. ಒಂದು ವ್ಯಕ್ತಿ ಜೀವ ಹೋಯ್ತು. ಹಂತಕರು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ ಅವರು ಕಾನೂನು ಕ್ರಮ ಎದುರಿಸುತ್ತಾರೆ ಎಂದು ತಿಳಿಸಿದರು.

ಇದನ್ನು ಓದಿ: Chandrashekhar Guruji Murder: ಇಲ್ಲಿದೆ ನೋಡಿ ಸರಳವಾಸ್ತು ಚಂದ್ರಶೇಖರ್‌ ಗುರೂಜಿ ಹತ್ಯೆಯಾಗಿರುವ ಹೋಟೆಲ್​

ಈ ರೀತಿ ಮಾಡೋದರಿಂದ ಏನು ಸಾಧಿಸದಂತಾಯ್ತು. ಚಂದ್ರಶೇಖರ ಗುರೂಜಿಯಿಂದ ಯಾರಿಗಾದರು ಅನ್ಯಾಯವಾಗಿದ್ದರೆ ಕೋರ್ಟ್ ಕಚೇರಿ ಹೋಗಬಹುದು. ಮರ್ಡರ್ ಮಾಡಿದವರ ಜೀವನವೂ ಹಾಳು ಒಂದು ವ್ಯಕ್ತಿ ಜೀವವೂ ಹೋಯಿತು. ಪೊಲೀಸರು ತನಿಖೆ ನಡೆಸಿದ್ದಾರೆ. ಕಾರಣ ತನಿಖೆಯಿಂದ ಹೊರಬರಬೇಕು. ನಾಗರಿಕ ಸಮಾಜದಲ್ಲಿ ಈ ರೀತಿ ಆಗಬಾರದು ಎಂದು ವಿಷಾದ ವ್ಯಕ್ತಪಡಿಸಿದರು.

ಇದನ್ನು ಓದಿ: ಸ್ಟಾರ್ಟ್​ಅಪ್​ಗಳಿಗೆ ಅತ್ಯುತ್ತಮ ರಾಜ್ಯ ಎಂಬ ಪ್ರಮಾಣಪತ್ರ ಮುಖ್ಯಮಂತ್ರಿಗೆ ಹಸ್ತಾಂತರಿಸಿದ ಸಚಿವ ಅಶ್ವತ್ಥನಾರಾಯಣ್

ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ; ತನಿಖೆಯ ಬಳಿಕ ಹತ್ಯೆಗೆ ಕಾರಣ ತಿಳಿಯುತ್ತೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿ ಅವರ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಬಹಳ ಹೀನಾಯವಾಗಿ ಗುರೂಜಿ‌ಯನ್ನು ಹತ್ಯೆ ಮಾಡಿದ್ದಾರೆ. ನಾನು ಹು-ಧಾ ಪೊಲೀಸ್ ಆಯುಕ್ತರ ಜತೆ ‌ಮಾತಾಡಿದ್ದೇನೆ. ಹಂತಕರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಲು ಸೂಚಿಸಿದ್ದೇನೆ. ತನಿಖೆಯ ಬಳಿಕ ಹತ್ಯೆಗೆ ಕಾರಣ ಗೊತ್ತಾಗುತ್ತೆ. ಬಹಿರಂಗವಾಗಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ಕೊಲೆ ಮಾಡಿದವರು ಯಾರೇ ಆದರು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.