ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ (Shirahatti Town) ಒಂದೂವರೆ ತಿಂಗಳ ಹಸುಗೂಸು (Child) ಪತ್ತೆಯಾಗಿದೆ. ಮಗುವಿನ ಜೊತೆಗಿದ್ದವರ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ತಹಶೀಲ್ದಾರ್ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಕಲ್ಲನಗೌಡ ಪಾಟೀಲ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಮಗುವನ್ನು ಹೀಗೆ ರಸ್ತೆಬದಿ ಬಿಟ್ಟು ಹೋದವರ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಘಟನೆ ಕುರಿತು ಆಸ್ಪತ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ ತಹಶೀಲ್ದಾರ್ ಕಲ್ಲನಗೌಡ, ‘ಯಾರೋ ಪಾಪುವನ್ನು ಜೋಪಾನ ಮಾಡ್ತಿದ್ದಾರೆ ಎಂದು ಕೆಲವರು ಮಾಹಿತಿ ನೀಡಿದರು. ಅದರಂತೆ ನಾನು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅವರ ಬಳಿ ಮಗು ಇದ್ದುದು ಕಂಡುಬಂತು. ಅವರು ಇದನ್ನೂ ತಮ್ಮದೇ ಮಗು ಎಂದು ಹೇಳುತ್ತಿದ್ದರು. ಇದರ ಜೊತೆಗೆ ಇನ್ನೂ ಎರಡು ಮಕ್ಕಳಿದ್ದವು. ಅನುಮಾನ ಬಂದು ಮಗುವನ್ನು ಆಸ್ಪತ್ರೆಗೆ ಕರೆತಂದೆ. ಮಗುವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ವಶಕ್ಕೆ ಕೊಡುತ್ತೇವೆ. ಮಗುವಿನ ತಾಯಿ ಪತ್ತೆಯಾಗಿದ್ದಾರೆ. ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ಆಗಿದೆ. ಅವರು ಬಂದ ನಂತರ ಮುಂದಿನ ಮಾಹಿತಿ ತಿಳಿಸುತ್ತೇವೆ’ ಎಂದು ಹೇಳಿದರು.
(ಮತ್ತಷ್ಟು ಮಾಹಿತಿ ಶೀಘ್ರ ಅಪ್ಡೇಟ್ ಆಗಲಿದೆ)
ಇದನ್ನೂ ಓದಿ: ರಟ್ಟಿನ ಬಾಕ್ಸ್ನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ; ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ
ಗದಗ ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:58 am, Tue, 29 November 22