ರಟ್ಟಿನ ಬಾಕ್ಸ್ನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ; ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ
ಬಾಕ್ಸ್ನಲ್ಲಿ ಶಿಶುವಿನ ಶವವಿದ್ದ ಬಗ್ಗೆ ಗೊತ್ತಿಲ್ಲ ಎಂದು ಸಿಬ್ಬಂದಿಗಳು ಹೇಳುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ: ರಟ್ಟಿನ ಬಾಕ್ಸ್ನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ಕೊಪ್ಪಳ ಜಿಲ್ಲೆಯ ಕಿಮ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ರೋಗಿಗಳ ಸಂಬಂಧಿಕರು ಎನ್ಐಸಿಯು ವಾರ್ಡ್ನ ಮೂಲೆಯಲ್ಲಿದ್ದ ಬಾಕ್ಸ್ ತೆರೆದಾಗ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಬಾಕ್ಸ್ನಲ್ಲಿ ಶಿಶುವಿನ ಶವವಿದ್ದ ಬಗ್ಗೆ ಗೊತ್ತಿಲ್ಲ ಎಂದು ಸಿಬ್ಬಂದಿಗಳು ಹೇಳುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಕೆರೆಗೆ ಬಿದ್ದ ಬಾಲಕನ ರಕ್ಷಣೆಗೆ ಹೋದ ಯುವಕನೂ ನೀರುಪಾಲು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಬಾಲಕ ಮತ್ತು ಯುವಕ ನೀರುಪಾಲಾಗಿದ್ದಾರೆ. ಬಹಿರ್ದೆಸೆಗೆ ಹೋದ ಬಾಲಕ ನೀರಿನಲ್ಲಿ ಮುಳುಗಿದ್ದು, ರಕ್ಷಣಗೆಗಾಗಿ ಯುವಕ ಕೆರೆಗೆ ಹಾರಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ಕಾಂತೇಶ್ ಬಡಿಗೇರ(25) ಮತ್ತು ಕಾರ್ತಿಕ ಬಡಿಗೇರ(8) ಶವ ಪತ್ತೆಯಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ: ಬೀದಿನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿ ಬೀದಿನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಸಂತೋಷನಗರದಲ್ಲಿ ನಡೆದಿದೆ. ಕಲಂದರ್ (11) ಮೃತ ಬಾಲಕ. ಮನೆ ಬಳಿ ಆಟವಾಡುತ್ತಿದ್ದ ವೇಳೆ ನಾಯಿಗಳು ಕಚ್ಚಿ ಕೊಲೆ ಮಾಡಿವೆ. ಶಿಡ್ಲಘಟ್ಟ ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿನಾಯಿಗಳ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿದ್ದಾರೆ. ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಚ್ಚಲಲ್ಲೇ ಹೆತ್ತು, ಮಗುವನ್ನು ನೇಣಿಗೆ ಹಾಕಿದ ತಾಯಿ; ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಕಿಟಕಿಯಲ್ಲಿ ನವಜಾತ ಶಿಶು ಪತ್ತೆ
ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಕಾಲೇಜಿನ ಬಳಿ 2 ದಿನದ ಹೆಣ್ಣು ಶಿಶು ಬಿಟ್ಟುಹೋಗಿರುವ ದುರುಳರು
Published On - 1:16 pm, Sun, 31 October 21