ಗದಗ: ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಈ ಬಗ್ಗೆ ನಿಗಾವಹಿಸಲಾಗುತ್ತಿದೆ. ಕೊವಿಡ್ ಲಕ್ಷಣಗಳಿದ್ದರೆ ಟೆಸ್ಟ್ ಮಾಡಲು ಸೂಚನೆ ಕೊಡಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಕಡೆ ನಿಗಾ ವಹಿಸಲಾಗುವುದು ಎಂದು ಗದಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಶಾಲೆ, ಕಾಲೇಜು ಬಂದ್ ಮಾಡುವ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿಲ್ಲ. ವಿದ್ಯಾರ್ಥಿಗಳಲ್ಲಿ ಕೊರೊನಾ ಕಂಡುಬರುತ್ತಿರುವ ಹಿನ್ನೆಲೆ ಹಾಗೂ ಒಮಿಕ್ರಾನ್ ಹೊಸ ರೂಪಾಂತರಿ ಕೊವಿಡ್19 ತಳಿ ಪತ್ತೆಯಾದ ಹಿನ್ನೆಲೆ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಮಹದಾಯಿ ಹೋರಾಟಗಾರರಿಗೆ ಸಮನ್ಸ್ ವಿಚಾರವಾಗಿ ಈ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಜೆಡಿಎಸ್ ಕೂಡ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ. ಎಲ್ಲಿ ಜೆಡಿಎಸ್ ಸ್ಪರ್ಧೆ ಮಾಡಿಲ್ಲ ಅಲ್ಲಿ ಬೆಂಬಲಕೊಡಿ ಎಂದು ನಮ್ಮ ನಾಯಕರು ಕೇಳಿದ್ದಾರೆ. ಅದರ ಬಗ್ಗೆ ಅಂತಿಮ ತೀರ್ಮಾನ ಜೆಡಿಎಸ್ ಮಾಡಬೇಕಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇಡೀ ರಾಜ್ಯದಲ್ಲಿ 15 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವು ಸಾಧಿಸುತ್ತಾರೆ. ವಿಧಾನ ಪರಿಷತ್ನಲ್ಲಿ ನಮಗೆ ಸ್ಪಷ್ಟ ಬಹುಮತ ಇರಲ್ಲಿಲ್ಲ. ಈ ಭಾರಿ ನಮಗೆ ಸ್ಪಷ್ಟ ಬಹುಮತ ಬರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅತೀ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆರಿಸಿ ಬರುತ್ತಾರೆ. ಇಡೀ ರಾಜ್ಯಾದ್ಯಂತ 45 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರು ಬಿಜೆಪಿಯವರಿದ್ದಾರೆ.
ಕಾಂಗ್ರೆಸ್ನವರು ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ ಎಂದು ಮಾತ್ರ ಹೇಳಲು ಸಾಧ್ಯವಿಲ್ಲ. ಮೋದಿ ಅಲೆ ನಿರಂತರವಾಗಿ ಇರುತ್ತೇ, ಅದನ್ನು ಎದರುರಿಸಲು ಕಾಂಗ್ರೆಸ್ ನವರಿಗೆ ಸಾಧ್ಯವಿಲ್ಲ. ಕಾಂಗ್ರೆಸ್ ಈಗಾಗಲೇ ಡೆಮಾಲಿಷ್ ಆಗುತ್ತಿದೆ. ಪ್ರತಿಪಕ್ಷ ಸ್ಥಾನವನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ನಲ್ಲಿ ನರೇಂದ್ರ ಮೋದಿಯವರ ಸರಿ ಸಮಾನ ನಾಯಕನಿಲ್ಲ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದು ನಿಂತ್ರು: ಬಿಬಿ ಚಿಮ್ಮನಕಟ್ಟಿ ಭಾಷಣ; ಸಿದ್ದರಾಮಯ್ಯಗೆ ಮುಜುಗರ!
Published On - 3:51 pm, Mon, 6 December 21