AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ; ಯಾವ ಯಾವ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎಷ್ಟಿದೆ?

ಡಿಸೆಂಬರ್ 25 ರಿಂದ ನವೆಂಬರ್ 05 ರವರೆಗೆ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ ಅಂತ ಇಲ್ಲಿ ತಿಳಿಸಲಾಗಿದೆ. ಮೈಸೂರಿನಲ್ಲಿ ನಿನ್ನೆವರೆಗೆ 291 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ; ಯಾವ ಯಾವ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎಷ್ಟಿದೆ?
ಪ್ರಾತಿನಿಧಿಕ ಚಿತ್ರ
TV9 Web
| Updated By: sandhya thejappa|

Updated on:Dec 06, 2021 | 3:21 PM

Share

ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂರನೇ ಅಲೆ ಆತಂಕ ಶುರುವಾಗಿದೆ. ತಜ್ಞರು ಹೇಳಿದಂತೆ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀಳುತ್ತಾ ಎಂಬ ಭೀತಿ ಹೆಚ್ಚಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದರೆ ಶಾಲೆ, ಕಾಲೇಜುಗಳನ್ನು ಬಂದ್ ಮಾಡಲು ಸರ್ಕಾರ ಕೂಡಾ ಸಿದ್ಧವಾಗಿದೆ. ಈಗಾಗಲೇ ಮಕ್ಕಳ ಬಗ್ಗೆ ಮುಂಜಾಗ್ರತ ಕ್ರಮಗಳನ್ನ ಕೈಗೊಳ್ಳಲಾಗಿದ್ದು, ತೀವ್ರ ನಿಗಾವಹಿಸಲಾಗಿದೆ. ಹೀಗಿದ್ದು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ತಗುಲುತ್ತಿದೆ.

ಡಿಸೆಂಬರ್ 25 ರಿಂದ ನವೆಂಬರ್ 05 ರವರೆಗೆ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ ಅಂತ ಇಲ್ಲಿ ತಿಳಿಸಲಾಗಿದೆ. ಮೈಸೂರಿನಲ್ಲಿ ನಿನ್ನೆವರೆಗೆ 291 ಜನರಿಗೆ ಕೊರೊನಾ ಸೋಂಕು ತಗುಲಿದೆ. ಎರಡು ಖಾಸಗಿ ನರ್ಸಿಂಗ್ ಕಾಲೇಜಿನ 72 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಕೊಡಗಿನಲ್ಲಿ ಕಳೆದ 10 ದಿನಗಳಲ್ಲಿ 54 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಮಡಿಕೇರಿ ನಗರದ ಕೊಡಗು ವಿದ್ಯಾಲಯ ಶಾಲೆಯ 9 ಮಕ್ಕಳಿಗೆ ಪಾಸಿಟಿವ್ ಇದೆ.

ಹಾವೇರಿಯಲ್ಲಿ ಹತ್ತು ದಿನಗಳಲ್ಲಿ ಒಟ್ಟು ಒಂಬತ್ತು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಯಾವುದೇ ಶಾಲಾ ಕಾಲೇಜುಗಳಲ್ಲಿ ಪಾಸಿಟಿವ್ ಕೇಸ್​ಗಳು ಕಾಣಿಸಿಕೊಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 159 ಪಾಸಿಟಿವ್ ಕೇಸ್​ಗಳಿವೆ. 21 ಜನ ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಒಂದೇ ಕಾಲೇಜಿನ 15 ಜನ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದೆ.

ಇನ್ನು ಕೊಪ್ಪಳದಲ್ಲಿ 6 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಯಾವುದೇ ಶಾಲಾ, ಕಾಲೇಜಿನಲ್ಲಿ ಪಾಸಿಟಿವ್ ಕಾಣಿಸಿಕೊಂಡಿಲ್ಲ. ಇಲ್ಲಿವರೆಗೆ ಯಾದಗಿರಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಮಂಡ್ಯ 19 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಗದಗ ಜಿಲ್ಲೆಯಲ್ಲಿ 3 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಂದು ಮುಂಡರಗಿ ಪಟ್ಟಣ ಹಾಗೂ ಎರಡು ಗದಗ ನಗರದಲ್ಲಿ ದೃಢವಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಸೋಂಕು ತಗುಲಿಲ್ಲ.

ಬಾಗಲಕೋಟೆ, ಬೀದರ್ ಮತ್ತು ರಾಮನಗರದಲ್ಲಿ ತಲಾ ಎರಡು ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಆದರೆ ಈ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿಲ್ಲ. ಬೆಳಗಾವಿ ಈವರೆಗೆ 37 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇಬ್ಬರು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಸೋಂಕು ದೃಢಪಟ್ಟಿದೆ.

ಚಿತ್ರದುರ್ಗದಲ್ಲಿ 20 ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿವೆ. ಆದರೆ ಶಾಲೆ, ಕಾಲೇಜುಗಳಲ್ಲಿ ಕೊರೊನಾ ಪತ್ತೆ ಆಗಿಲ್ಲ ಅಂತ ಡಿಹೆಚ್ಓ ಡಾ.ರಂಗನಾಥ್ ಮಾಹಿತಿ ನೀಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ 20 ಜನರಿಗೆ ಸೋಂಕು ತಗುಲಿದ್ದು, ಎಲ್ಲವೂ ನಗರ ಪ್ರದೇಶದಲ್ಲಿ ಪತ್ತೆಯಾಗಿದೆ. ಯಾವುದೇ ಕಾಲೇಜು ಹಾಗೂ ಶಾಲೆಗಳಲ್ಲಿ ಸೋಂಕು ಕಾಣಿಸಿಕೊಂಡಿಲ್ಲ.

ಕಲಬುರಗಿ ಜಿಲ್ಲೆಯಲ್ಲಿ 9 ಜನರಿಗೆ ಕೊರೊನಾ ಪಾಜಿಟಿವ್ ಬಂದಿದೆ. ಆದರೆ ಯಾವುದೇ ಶಾಲೆ, ಕಾಲೇಜು, ಹಾಸ್ಟೆಲ್ಳಲ್ಲಿ ಸೋಂಕಿತರು ಪತ್ತೆಯಾಗಿಲ್ಲ. ತುಮಕೂರಿನಲ್ಲಿ ಒಟ್ಟು 42 ಮಕ್ಕಳಿಗೆ ಸೋಂಕು ತಗಲಿದೆ. 10 ದಿನಗಳಲ್ಲಿ ಧಾರವಾಡದಲ್ಲಿ 311 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಪೈಕಿ 9 ನೇ ತರಗತಿ ಬಾಲಕನಿಗೆ ಮಾತ್ರ ಸೋಂಕು ದೃಢಪಟ್ಟಿದೆ. ವಿಜಯಪುರ ಕಳೆದ ಹತ್ತು ದಿನಗಳಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಿಲ್ಲ.

ಹಾಸನದಲ್ಲಿ ಒಟ್ಟು 99 ಪಾಸಿಟಿವ್ ಕೇಸ್ ಬಂದಿದೆ. ಇದರಲ್ಲಿ 26 ವಿದ್ಯಾರ್ಥಿಗಳಿಗೆ ಸೋಂಕು ದೃಡಪಟ್ಟಿದೆ. ಚನ್ನರಾಯಪಟ್ಟಣ ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 13 ಮಕ್ಕಳಿಗೆ ಹಾಗು ಸಕಲೇಶಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ 4 ವಿದ್ಯಾರ್ಥಿಗಳಿಗೆ ಸೋಂಕು ದೃಡಪಟ್ಟಿದೆ.

ದಾವಣಗೆರೆ ಜಿಲ್ಲೆಯಲ್ಲಿ‌ 19 ಜನಕ್ಕೆ ಕೊವಿಡ್ ಸೋಂಕು ಕಾಣಿಸಿಕೊಂಡಿದೆ. ಯಾವುದೇ ಸಾವು ಸಂಭವಿಸಿಲ್ಲ. ಆರು ಜನ ಗುಣ ಮುಖರಾಗಿದ್ದಾರೆ. ಉಳಿದ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಶಾಲೆ ಕಾಲೇಜುಗಳಲ್ಲಿ ಪ್ರಕರಣಗಳು ಪತ್ತೆಯಾಗಿಲ್ಲ.

ಉಡುಪಿಯಲ್ಲಿ 91 ಜನರಿಗೆ ಕೊರೊನಾ ದೃಢಪಟ್ಟಿದ್ದು, ಇಬ್ಬರು ಮಕ್ಕಳಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

ಇದನ್ನೂ ಓದಿ

IND vs NZ: ಕಿವೀಸ್ ಕಿವಿ ಹಿಂಡಿದ ಕೊಹ್ಲಿ ಪಡೆ; ಟೀಂ ಇಂಡಿಯಾದ ಗೆಲುವಿನ ರೂವಾರಿಗಳು ಇವರೆ ನೋಡಿ

ರಷ್ಯಾ ರಕ್ಷಣಾ ಸಚಿವರೊಂದಿಗೆ ರಾಜನಾಥ್​ ಸಿಂಗ್​ ಸಭೆ; ಕಲಾಶ್ನಿಕೋವ್ ತಿದ್ದುಪಡಿ ಸೇರಿ 4 ರಕ್ಷಣಾ ಒಪ್ಪಂದಗಳಿಗೆ ಎರಡೂ ದೇಶಗಳ ಸಹಿ

Published On - 3:11 pm, Mon, 6 December 21