ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಸಂಸ್ಕೃತಿ: ಗದಗದಲ್ಲಿ ಕಾಂಗ್ರೆಸ್​ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 19, 2022 | 2:41 PM

ಅಗ್ನಿಪಥ ಯೋಜನೆ ಜಾರಿಯಿಂದ ಕಾಂಗ್ರೆಸ್​ಗೆ ಉರಿ ಉರಿಯುಂಟಾಗಿದೆ. ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ಆರೋಪ ಮಾಡಿದರು.

ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಸಂಸ್ಕೃತಿ: ಗದಗದಲ್ಲಿ ಕಾಂಗ್ರೆಸ್​ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ
ಸಾರಿಗೆ ಸಚಿವ ಬಿ. ಶ್ರೀರಾಮುಲು
Follow us on

ಗದಗ: 40% ಕಮೀಷನ್​ನಲ್ಲಿ‌ ಪ್ರಧಾನಿ ನರೇಂದ್ರ ಮೋದಿಗೂ ಪಾಲು ಎಂದು ಕಾಂಗ್ರೆಸ್ (Congress) ಈ ಹಿಂದು ಆರೋಪಿಸಿದ್ದು, ಈ ಕುರಿತಾಗಿ ನಗರದಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಭ್ರಷ್ಟಾಚಾರದ ದೊಡ್ಡ ಪಿತಾಮಹ ಅಂದರೆ ಅದು ಕಾಂಗ್ರೆಸ್ ಪಕ್ಷ. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಎಂದು ಕಾಂಗ್ರೆಸ್​ಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡು ಈ ರೀತಿ ಆರೋಪ‌ಮಾಡುತ್ತಿದೆ. ಬಿಜೆಪಿ ಸರ್ಕಾರ ಸಂಪೂರ್ಣ ಪಾರದರ್ಶಕ ಆಡಳಿತ ನೀಡುತ್ತಿದೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಲಾಭಕ್ಕೆ ಆಗಮನ ಕಾಂಗ್ರೆಸ್ ಆರೋಪ ವಿಚಾರಕ್ಕೆ, ರಾಜ್ಯದಲ್ಲಿ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗುವುದು ಅದು ರಾಜ್ಯಕ್ಕೆ ಶಕ್ತಿ. ಇಂಥ ವಿಚಾರದಲ್ಲಿ ಕಾಂಗ್ರೆಸ್ ಈ ರೀತಿಯ ಟೀಕೆ ಮಾಡುವ ಕೆಲಸ ನೋಡಿ ನೈತಿಕ ದಿವಾಳಿ ತೋರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಶ್ರೀ ರಾಮುಲು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: Dinesh Karthik: 16 ವರ್ಷಗಳಲ್ಲಿ ಸಿಕ್ಕಿದ್ದು ಮೂರೇ ಮೂರು ಪಂದ್ಯಶ್ರೇಷ್ಠ ಪ್ರಶಸ್ತಿ…ಆದರೆ

ಕಾಂಗ್ರೆಸ್ ಇಷ್ಟು ವರ್ಷ ಕೆಲಸ‌ ಮಾಡಿಲ್ಲಾ. ಕಾಂಗ್ರೆಸ್​ನ ಸಾಕಷ್ಟು ಪ್ರಧಾನಿಗಳು ಇದ್ದರು ರಾಜ್ಯದ ಬಗ್ಗೆ ಕೇಳಿಲ್ಲ. ಬೀದಿಗಿಳಿದು ರಂಪಾಟ ಮಾಡುವ ವಿಚಾರದಲ್ಲಿ ರಾಹುಲ್‌ ಗಾಂಧಿ ಹೋರಾಟ ಮಾಡಿದರು. ಕಾನೂನಿಗಿಂತ ರಾಹುಲ್ ಗಾಂಧಿ ದೊಡ್ಡವರಲ್ಲ. ತನಿಖೆ ವಿಚಾರದಲ್ಲಿ ಬೀದಿಗಿಳಿದು ಹೋರಾಟ ಇಂಥವ್ರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಅಗ್ನಿಪಥ್​ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ

ಅಗ್ನಿಪಥ ಯೋಜನೆ ಜಾರಿಯಿಂದ ಕಾಂಗ್ರೆಸ್​ಗೆ ಉರಿ ಉರಿಯುಂಟಾಗಿದೆ. ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿರ್ಧಾರಕ್ಕೆ ಬಿಜೆಪಿ ಬದ್ಧವಾಗಿದೆ. ಅಗ್ನಿಪಥ ವಿಚಾರದಲ್ಲಿ ಬಹಳ ಜನರು ರಾಜಕೀಯ ನಡೆಸಿದ್ದಾರೆ. ಇಸ್ರೇಲ್ ದೇಶ ಹೋಲಿಸಿ ನೋಡಿದರೆ ಅಲ್ಲಿ ಪ್ರತಿಯೊಂದು ‌ಮನೆಯಲ್ಲಿ ಸೇನೆಗೆ ಸೇರ್ತಾರೆ. ನಮ್ಮ ಪ್ರಧಾನಿಗಳು 18 ವರ್ಷದ ಯುವಕರಿಗೆ ಆಸಕ್ತಿ ಇದ್ದರೆ
ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಮಾಡಬೇಕು ಅಂದರೆ ಇವರಿಗೆ ಯಾಕೇ ಇಷ್ಟೊಂದು ಉರಿ ಅಂತ ಗೋತ್ತಾಗುತ್ತಿಲ್ಲವೆಂದು ಕಿಡಿ ಕಾರಿದರು.

ಪ್ರತಿಯೊಬ್ಬರಿಗೂ ದೇಶದ ಮೇಲೆ ಪ್ರೀತಿ, ಅಭಿಮಾನ, ಗೌರವ ಇರಬೇಕು. ಅಗ್ನಿಪಥ ಯೋಜನೆ ಒಳ್ಳೆಯ ಕಾರ್ಯಕ್ರಮ. ದೇಶದ ಯುವಕರಲ್ಲಿ ದೇಶ ಪ್ರೇಮ ಮುಡಿಸುವ ಕೆಲಸ ಮಾಡುತ್ತಿರುವುದು ಇವರಿಗೆ ಸಹಿಸೋಕೆ ಆಗ್ತಾಯಿಲ್ಲ. ಯುವಕರಿಗೆ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ಬೀದಿಗಿಳಿಸುವ ಕೆಲಸ ಮಾಡಲಾಗುತ್ತಿದೆ. ಸಾಕಷ್ಟು ಅನಕೂಲ ಈ‌ ಯೋಜನೆಯಲ್ಲಿದೆ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ ಮಾಡಿ.