ಗದಗ, ಫೆಬ್ರವರಿ 19: ಭಾವೈಕ್ಯತೆ ದಿನಾಚರಣೆ ವಿಚಾರಕ್ಕೆ ಗದಗ ತೋಂಟದಾರ್ಯ ಮಠ (Tontadarya Matha) ಮತ್ತು ಶಿರಹಟ್ಟಿ ಫಕೀರೇಶ್ವರ ಮಠದ (Shirahatti Fakkireshwar Mutt) ನಡುವೆ ಸಂಘರ್ಷ ಉಂಟಾಗಿದೆ. ಸದ್ಯ ಈ ವಿಚಾರವಾಗಿ ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಪ್ರತಿಕ್ರಿಯಿಸಿದ್ದು, ಲಿಂಗಾಯತ ಪ್ರತ್ಯೇಕ ಧರ್ಮವೇ ಅದನ್ನು ಯಾರೂ ಒಡೆಯಬೇಕಿಲ್ಲ. ವೀರಶೈವ ಎನ್ನುವುದು ಲಿಂಗಾಯತ ಧರ್ಮದ ಒಂದು ಭಾಗ ಎಂದು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಭಾವೈಕ್ಯತೆ ದಿನ ಘೋಷಿಸಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸುಮ್ಮನಾಗಿದ್ದರು. ರಾಜಕಾರಣಿಗಳು ಯಾರ್ಯಾರಿಗೆ ಮಣಿಯುತ್ತಾರೆ ಗೊತ್ತಿಲ್ಲ. ಯಾರೋ ಒಬ್ಬರಿಗೆ ಮಣಿದು ಆಚರಣೆ ಕೈಬಿಟ್ಟರು. ಹಿಂದೂ ಧರ್ಮದ ಸಂಸ್ಥಾಪಕ ಯಾರು? ಪರ್ಷಿಯನ್ನರು ಹಿಂದೂ ಅಂತಾ ಕರೆದರು ಎಂದು ಹೇಳಿದ್ದಾರೆ.
ಭಾವೈಕ್ಯತೆ ದಿನ ಆಚರಿಸಿದರೆ ಫಕೀರೇಶ್ವರ ಮಠದ ಭಕ್ತರಿಂದ ಕರಾಳ ದಿನಾಚರಣೆ ವಿಚಾರವಾಗಿ ಮಾತನಾಡಿದ ಅವರು, ಅವರ ಕರಾಳ ದಿನಾಚರಣೆಗೆ ನಾವು ಏನೂ ಮಾಡಕ್ಕಾಗಲ್ಲ. ನಮಗೆ ರಕ್ಷಣೆ ಬೇಕು ಅಂತಾ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಕರಾಳ ದಿನಾಚರಣೆ ಮಾಡುವವರಿಗೆ ಸರ್ಕಾರ ಪ್ರತಿಬಂಧ ಹೇರಬೇಕು. ಭಾವೈಕ್ಯತೆ ದಿನಾಚರಣೆ ಮಾಡುವುದು ಸರ್ಕಾರ ತಪ್ಪು ಅಂದರೆ ಕೈಬಿಡುತ್ತೇವೆ ಎಂದಿದ್ದಾರೆ.
ಫೆಬ್ರುವರಿ 21 ರಂದು ಗದಗ ತೋಂಟದಾರ್ಯ ಮಠದ ವತಿಯಿಂದ ತೋಂಟದ ಲಿಂಗೈಕ್ಯ ಡಾ. ಸಿದ್ದಲಿಂಗ ಶ್ರೀಗಳ ಜಯಂತಿಯಂದು ಭಾವೈಕ್ಯತೆ ದಿನವಾಗಿ ಆಚರಣೆ ಮಾಡಲು ಭರ್ಜರಿ ತಯಾರಿ ಮಾಡಿಕೊಂಡಿದೆ. ಇದು ಶಿರಹಟ್ಟಿ ಫಕೀರೇಶ್ವರ ಮಠದ ಶ್ರೀಗಳು ಹಾಗೂ ಭಕ್ತರನ್ನು ಕೆರಳುವಂತೆ ಮಾಡಿದೆ. ತೋಂಟದ ಸಿದ್ದಲಿಂಗ ಶ್ರೀಗಳ ಜಯಂತಿಯನ್ನ ಭಾವೈಕ್ಯತೆ ದಿನವನ್ನಾಗಿ ಆಚರಿಸುತ್ತಿರುವುದಕ್ಕೆ ಶಿರಹಟ್ಟಿ ಫಕೀರೇಶ್ವರ ಮಠ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಸುದ್ದಿಗೋಷ್ಠಿ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಭಾವೈಕ್ಯತೆ ದಿನ ಆಚರಣೆ ಮಾಡದಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಆಚರಣೆ ಮಾಡಿದರೆ ಅದು ಶಿರಹಟ್ಟಿ ಮಠಕ್ಕೆ ಹಾಗೂ ಭಕ್ತರ ಪಾಲಿಗೆ ಕರಾಳ ದಿನವಾಗಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಗದಗ-ಬೆಟಗೇರಿಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರಿಂದ ಅದ್ಧೂರಿ ಶಿವಾಜಿ ಜಯಂತ್ಯುತ್ಸವ, ಬಿಗಿ ಪೊಲೀಸ್ ಭದ್ರತೆ
ಶಿರಹಟ್ಟಿ ಫಕೀರೇಶ್ವರ ಮಠ ಹಿಂದೂ-ಮುಸ್ಲಿಂ ಭಾವೈಕ್ಯತೆ ಮಠವಾಗಿದೆ. ಭಾವೈಕ್ಯತೆ ಮಠ ಎನ್ನುವುದಕ್ಕೆ ಸಾಕಷ್ಟು ಕುರುಹುಗಳಿವೆ. ಆದರೆ ತೋಂಟದಾರ್ಯ ಮಠ ವಿರಕ್ತಮಠ ಮಠದ ಸಂಪ್ರದಾಯ ಹೊಂದಿದೆ. ಫಕೀರೇಶ್ವರ ಮಠದ ಭಾವೈಕ್ಯತೆಯ ಸಂಪ್ರದಾಯವಾಗಿದೆ. ಫಕೀರೇಶ್ವರ ಮಠ ಹಿಂದೂ-ಮುಸ್ಲಿಂ ಎರಡು ಸಂಪ್ರದಾಯ ಹೊಂದಿರು ಮಠವಾಗಿದೆ. ಹೀಗಾಗಿ ಭಾವೈಕ್ಯತೆ ದಿನ ಆಚರಣೆ ನಮ್ಮ ವಿರೋಧ ಇದೆ ಎಂದಿದ್ದಾರೆ.
ಸಂಧಾನ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿದ್ದೇವೆ. ಮನವಿಗೆ ಸ್ಪಂದಿಸದಿದ್ದರೆ
ತೋಂಟದಾರ್ಯ ಮಠದ ಬೀದಿಯಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.