ಗದಗ-ಬೆಟಗೇರಿಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರಿಂದ ಅದ್ಧೂರಿ ಶಿವಾಜಿ ಜಯಂತ್ಯುತ್ಸವ, ಬಿಗಿ ಪೊಲೀಸ್ ಭದ್ರತೆ
ಒಂದು ಅಂದಾಜಿನ ಪ್ರಕಾರ ಶ್ರೀರಾಮಸೇನೆಯ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೆರವಣಿಗೆ ಸಂದರ್ಭದಲ್ಲಿ ಮತ್ತು ಜಯಂತ್ಯುತ್ಸದ ಇತರ ಕಾರ್ಯಕ್ರಮಗಳಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತಿರಲು ಅವಳಿ ನಗರದ ಪ್ರಮುಖ ಭಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಗದಗ: ಹುಬ್ಬಳ್ಳಿ ಪ್ರಾಂತ್ಯದಲ್ಲಿ ಶ್ರೀರಾಮಸೇನೆ (Srirama Sene) ಒಂದು ಪ್ರಬಲ ಸಂಘಟನೆ ಅನ್ನೋದು ನಿರ್ವಿವಾದಿತ. ಸಂಘಟನೆಯ ಕಾರ್ಯಕರ್ತರು ಗದಗನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತ್ಯುತ್ಸವನ್ನು (Shivaji Maharaj birth anniversary) ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಹಾಗಾಗಿ ಗದಗ-ಬೆಟಗೇರಿ ಅವಳಿ ನಗರಗಳು (Gadag-Betageri twin cities) ಅಕ್ಷರಶಃ ಕೇಸರಿಮಯವಾಗಿವೆ. ಜಯಂತ್ಯುತ್ಸವದ ಅಂಗವಾಗಿ ಶಿವಾಜಿ ಮೂರ್ತಿಯ ಬೃಹತ್ ಮೆರವಣಿಗೆ ನಡೆಸಲು ಸಿದ್ಧತೆ ನಡೆದಿದ್ದು ಅದು ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳಲಿದೆ. ಟಿವಿ9 ಕನ್ನಡ ವಾಹಿನಿಯ ಗದಗ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಗಾಂಧಿ ವೃತ್ತದಿಂದ ಶುರುವಾಗುವ ಮೆರವಣಿಗೆಯು ಟಾಂಗಾ ಕೂಟ್ ಸರ್ಕಲ್, ಬಸವೇಶ್ವರ ಸರ್ಕಲ್ ಮತ್ತು ಅವಳಿನಗರಗಳ ಪ್ರಮುಖ ರಸ್ತೆಗಳ ಮೂಲಕ ಹಾದುಹೋಗಲಿದೆ.
ಶಿವಾಜಿ ಮಹಾರಾಜರ ದೊಡ್ಡ ಮೂರ್ತಿಯ ಜೊತೆ ಮಹರ್ಷಿ ವಾಲ್ಮೀಕಿ ಮೂರ್ತಿಯ ಮೆರವಣಿಗೆ ಸಹ ನಡೆಯಲಿದೆ. ಒಂದು ಅಂದಾಜಿನ ಪ್ರಕಾರ ಶ್ರೀರಾಮಸೇನೆಯ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೆರವಣಿಗೆ ಸಂದರ್ಭದಲ್ಲಿ ಮತ್ತು ಜಯಂತ್ಯುತ್ಸದ ಇತರ ಕಾರ್ಯಕ್ರಮಗಳಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತಿರಲು ಅವಳಿ ನಗರದ ಪ್ರಮುಖ ಭಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ