ಗದಗ: ಕಲ್ಲಂಗಡಿ ಮಾರಾಟಕ್ಕೆ ಮಾರುಕಟ್ಟೆ ಅಖಾಡಕ್ಕಿಳಿದ ರೈತರು, ದಲ್ಲಾಳಿಗಳು ಕಂಗಾಲು

ಈಗ ಹೊರಗಡೆಯಿಂದ ಖರೀದಿಸಿ ಏನನ್ನೇ ಆದರೂ ತಿನ್ನಲು ಜನ ಭಯಪಡುವ ಸ್ಥಿತಿ ಇದೆ. ಇಡ್ಲಿ, ಹಣ್ಣುಗಳು ಸೇರಿ ಅನೇಕ ಪದಾರ್ಥಗಳು ಭಯ ಹುಟ್ಟಿಸಿವೆ. ಅದರಲ್ಲೂ ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಹಣ್ಣುಗಳ ಹಾವಳಿ ವರದಿಗಳ ಬೆನ್ನಲ್ಲೇ ಜನ ಆತಂಕಿತರಾಗಿದ್ದಾರೆ. ಈ ನಡುವೆ ಖುದ್ದು ರೈತರೇ ಮಾರಾಟದ ಅಖಾಡಕ್ಕೆ ಧುಮುಕಿದ್ದಾರೆ. ರಾಸಾಯನಿಕ ರಹಿತ ತಾಜಾ ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರಿಗೂ ಕಡಿಮೆ ದರದಲ್ಲಿ ಕಲ್ಲಂಗಡಿ ಹಣ್ಣು ದೊರೆತರೆ ಮತ್ತೊಂದೆಡೆ, ರೈತರು ಭರ್ಜರಿ ಲಾಭದಲ್ಲಿದ್ದಾರೆ. ಹೀಗಾಗಿ ದಲ್ಲಾಳಿಗಳು ರೈತರ ನಿರ್ಧಾರದಿಂದ ಅಕ್ಷರಶಃ ಕಂಗಾಲಾಗಿದ್ದಾರೆ.

ಗದಗ: ಕಲ್ಲಂಗಡಿ ಮಾರಾಟಕ್ಕೆ ಮಾರುಕಟ್ಟೆ ಅಖಾಡಕ್ಕಿಳಿದ ರೈತರು, ದಲ್ಲಾಳಿಗಳು ಕಂಗಾಲು
ಕಲ್ಲಂಗಡಿ ಮಾರಾಟಕ್ಕೆ ಮಾರುಕಟ್ಟೆ ಅಖಾಡಕ್ಕಿಳಿದ ರೈತರು, ದಲ್ಲಾಳಿಗಳು ಕಂಗಾಲು
Edited By:

Updated on: Mar 19, 2025 | 8:04 AM

ಗದಗ, ಮಾರ್ಚ್ 19: ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಹಣ್ಣುಗಳ ಹಾವಳಿಯ ವರದಿಗಳಿಂದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಮತ್ತೊಂದೆಡೆ ಬಿಸಿಲಿನ ಬೇಗೆ ಜೋರಾಗಿದೆ. ಜನ ತಂಪು ಪಾನೀಯಗಳು, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಹಣ್ಣು ಖರೀದಿ ಎಂದರೆ ಜನ ಭಯಪಡುವಂತಾಗಿದೆ. ಇದರಿಂದಾಗಿ ರೈತರೇ ನೇರವಾಗಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ. ಗದಗ (Gadag) ನಗರದಲ್ಲಿ ರೈತರು ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳ (Watermelon) ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಇದರಿಂದಾಗಿ ದಲ್ಲಾಳಿಗಳು ಮಾತ್ರ ಈ ಬಾರಿ ಅಕ್ಷರಶಃ ಕಂಗಾಲಾಗಿದ್ದಾರೆ.

ಸದಾ ದಲ್ಲಾಳಿಗಳ ಮೋಸಕ್ಕೆ ಹೈರಾಣಾಗಿದ್ದ ರೈತರು ಇದೀಗ ಸ್ವತಃ ರೈತರ ಮಾರುಕಟ್ಟೆ ಅಖಾಡಕ್ಕೆ ಇಳಿದಿದ್ದಾರೆ. ಕೆಮಿಕಲ್ ಹಾವಳಿ ನೆಪವೊಡ್ಡಿ ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ಕೇವಲ ಕೆಜಿಗೆ 4-5 ರೂಪಾಯಿ ಖರೀದಿಗೆ ದಲ್ಲಾಳಿಗಳು ಮುಂದಾಗಿದ್ದರು. ಬಳಿಕ 25-30 ರೂಪಾಯಿ ಮಾರಾಟ ಮಾಡ್ತಾರೆ. ಈ ಬಗ್ಗೆ ಎಚ್ಚೆತ್ತುಕೊಂಡ ರೈತರು ದಲ್ಲಾಳಿಗಳ ಸಹವಾಸವೇ ಬೇಡ ಎಂದು ತಾವೇ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ರೈತರು ಭರ್ಜರಿ ಲಾಭ ಪಡೆಯುತ್ತಿದ್ದಾರೆ. ಗದಗ ನಗರದ ಪಂಚರಹೊಂಡ ಬಳಿ ಬಂದರೆ ಸಾಲು ಸಾಲು ಸಾಲು ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಕಲ್ಲಂಗಡಿ ಹಣ್ಣು ತುಂಬಿಕೊಂಡು ಮಾರಾಟ ಮಾಡುವುದು ಕಾಣಿಸುತ್ತಿದೆ. ಗ್ರಾಹಕರು ರೈತರ ಬಳಿಯಿಂದಲೇ ಹಣ್ಣುಗಳ ಖರೀದಿಗೆ ಮುಗಿಬಿದ್ದಾರೆ.

ಇದನ್ನೂ ಓದಿ: ಗದಗ: ಸರ್ಕಾರಿ ರತಿ-ಕಾಮಣ್ಣ ಮೂರ್ತಿಗೆ 29 ಕೆಜಿ ಚಿನ್ನದಿಂದ ಶೃಂಗಾರ

ಇದನ್ನೂ ಓದಿ
ಮಾರ್ಚ್​ 23ರಿಂದ ಬೆಂಗಳೂರು ಸೇರಿ ಕರ್ನಾಟಕದ 12 ಜಿಲ್ಲೆಗಳಲ್ಲಿ ಮಳೆ
ಅಕ್ರಮ ಚಿನ್ನ ಸಾಗಾಟ ಕೇಸ್:ರನ್ಯಾ ತಂಟೆಗೆ ಹೋದ ಯತ್ನಾಳ್​ ವಿರುದ್ಧ ಎಫ್‌ಐಆರ್
ಪ್ರತ್ಯೇಕ ಘಟನೆ: ಸಂಪ್‌ಗೆ ಬಿದ್ದು ಮಕ್ಕಳು ಸಾವು, ಮರಳು ದಂಧೆಗೆ ಯುವಕರು ಬಲಿ
ಅಶೋಕ್ ವಿರುದ್ಧದ ಜಮೀನು ಮಂಜೂರು ಕೇಸ್: ಲೋಕಾಯುಕ್ತಕ್ಕೆ ಸುಪ್ರೀಂ ಸೂಚನೆ

ದಲ್ಲಾಳಿಗಳಿಗೆ ನೀಡುವ ದರಕ್ಕಿಂತ ರೈತರು ಈಗ ಮೂರು ಪಟ್ಟು ಹೆಚ್ಚು ಲಾಭ ಪಡೆಯುತ್ತಿದ್ದಾರೆ. ರೈತರ ಈ ನಿರ್ಧಾರದಿಂದ ಗ್ರಾಹಕರಿಗೂ ಬಂಪರ್ ಲಾಭವಾಗುತ್ತಿದೆ. ಯಾಕೆಂದರೆ ದಲ್ಲಾಳಿಗಳು ಕೆಜಿಗೆ 25-30 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು. ಈಗ ರೈತರು ಕೆಜಿಗೆ 13-15 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ವರ್ಷವಿಡೀ ಕಷ್ಟಪಟ್ಟರೂ ಮಾರಾಟದ ವೇಳೆ ಸದಾ ದಲ್ಲಾಳಿಗಳ ಹೊಡೆತಕ್ಕೆ ಸಿಲುಕಿ ನಲುಗುವ ರೈತರ ಹೊಸ ಪ್ಲಾನ್​ನಿಂದಾಗಿ ಗ್ರಾಹಕರೂ ಖುಷಿಯಾಗಿದ್ದಾರೆ. ದಲ್ಲಾಳಿಗಳ ಆಟಕ್ಕೆ ಹೊಡೆತ ಬಿದ್ದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ