ಗದಗ, ನವೆಂಬರ್ 13: ಆ ಜಿಲ್ಲೆಯಲ್ಲಿ ಎಲ್ಲಿ ನೋಡಿದ್ರೂ ಪವನ ವಿದ್ಯುತ್ (wind power) ಯಂತ್ರಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಆದರೆ ಸರ್ಕಾರದ ಎಲ್ಲ ಕಾನೂನು ಗಾಳಿ ತೂರಿ ವಿಂಡ್ ಫ್ಯಾನ್ ಗಿರ್ ಗಿರ್ ಅಂತ ತಿರುಗುತ್ತಿವೆ. ಆದರೆ ಈ ಕಂಪನಿಗಳು ಸರ್ಕಾರಕ್ಕೂ ಭಾರಿ ಮೋಸ ಮಾಡುತ್ತಿವೆ. NA ಮಾಡದೇ ಕಾನೂನು ಉಲ್ಲಂಘಿಸಿ ಎಗ್ಗಿಲ್ಲದೇ ಅಳವಡಿಕೆ ಮಾಡಲಾಗಿದೆ. ಅಷ್ಟೇ ಅಲ್ಲ ಗ್ರಾಮ ಪಂಚಾಯತ್ ಅನುಮತಿಯೂ ಇಲ್ಲ. ಪಂಚಾಯತ್ಗಳಿಗೂ ತೆರಿಗೆ ಮೋಸ ಮಾಡಿವೆ. ಆದರೆ ಅಧಿಕಾರಿಗಳ ಜೇಬು ಮಾತ್ರ ಫುಲ್ ಆಗಿವೆ.
ಗದಗ ಜಿಲ್ಲೆಯ ಕೆಲ ಭಾಗದಲ್ಲಿ ಏಶಿಯಾ ಖಡದಲ್ಲೇ ಅತೀ ವೇಗವಾಗಿ ಗಾಳಿ ಬಿಸುತ್ತೆ ಅನ್ನೋ ಮಾತಿದೆ. ಹೀಗಾಗಿ ಈ ಜಿಲ್ಲೆಯಲ್ಲಿ ವಿಂಡ್ ಕಂಪನಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಗ್ಗೆ ಇಟ್ಟಿವೆ. ಈ ಜಿಲ್ಲೆಯಲ್ಲಿ ಎತ್ತ ಕಣ್ಣು ಹಾಯಿಸಿದ್ರೂ ವಿಂಡ್ ಫ್ಯಾನ್ಗಳೇ ಕಣ್ಣಿಗೆ ರಾಚುತ್ತವೆ. ರಿನೋಬಲ್ ಎನರ್ಜಿ ಅಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲಸ ಸಡಲಿಕೆಗಳು ನೀಡಿವೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಬಂಡವಾಳ ಶಾಹಿಗಳು ಬೇಕಾಬಿಟ್ಟಿ ಪವನ ವಿದ್ಯುತ್ ಯಂತ್ರಗಳನ್ನು ಜಿಲ್ಲೆಯಲ್ಲಿ ಅಳವಡಿಸಿದ್ದಾರೆ.
ಇದನ್ನೂ ಓದಿ: ಗದಗ: ದೀಪಾವಳಿ ಹಬ್ಬಕ್ಕೆಂದು ಬೆಳೆದ ಹೂವು; ಗಾಳಿ, ಮಳೆಗೆ ಸಂಪೂರ್ಣ ನಾಶ
ಜಿಲ್ಲೆಯ ಕಾನೂನು ಸಚಿವ ಎಚ್ಕೆ ಪಾಟೀಲ್ ತವರು. ಆದರೆ ಕಾನೂನು ಸಚಿವರ ತವರಲ್ಲೇ ಕಾನೂನು ಉಲ್ಲಂಘಸಿ ಬೇಕಾಬಿಟ್ಟಿ ವಿಂಡ್ ಯಂತ್ರಗಳು ಅಳವಡಿಸಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ವಿಂಡ್ ಫ್ಯಾನ್ ಅಳವಡಿಸಬೇಕಾದರೆ ಮೊದಲು ಗ್ರಾಮ ಪಂಚಾಯತ್ಗೆ ಟ್ಯಾಕ್ಸ್ ತುಂಬಿ ಅನುಮತಿ ಪಡೆಯಬೇಕು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ಜಮೀನು ಕೃಷಿಯೇತರ ಜಮೀನಾಗಿ ಪರಿವರ್ತನೆ ಮಾಡಬೇಕು. ಬಳಿಕ ಪಂಚಾಯತ್ ಎನ್ಓಸಿ ಪಡೆಯಬೇಕು. ಆದರೆ ಇದ್ಯಾವ ಕೆಲಸ ಮಾಡದ ವಿಂಡ್ ಕಂಪನಿಗಳು ನೂರಾರು ಪವನ ವಿದ್ಯುತ್ ಯತ್ರಗಳು ಈಗಾಗಲೇ ರೈತರ ಜಮೀನುಗಳಲ್ಲಿ ಅಳವಡಿಸಿದ್ದಾರೆ.
ಈಗಾಗಲೇ ವಿದ್ಯುತ್ ಉತ್ಪಾದನೆ ನಡೆದಿದೆಯಂತೆ. ಪಂಚಾಯತ್ ಆಡಳಿತ ಪ್ರಶ್ನೆ ಮಾಡಿದಕ್ಕೆ ಕಂಪನಿಗಳು ಈಗ ಎಚ್ಚೆತ್ತುಕೊಂಡು ಪಂಚಾಯತ್ಗೆ ಓಡಿ ಬಂದಿದ್ದಾರೆ. ಈಗ ಅನುಮತಿಗಾಗಿ ಅರ್ಜಿ ಹಾಕಿದ್ದಾರಂತೆ. ಈ ಬಗ್ಗೆ ಪಿಡಿಓ ಅವ್ರನ್ನು ಇಳಿದ್ರೆ, ಇದು ಕಂದಾಯ ಇಲಾಖೆ ಜಮೀನು. ಕೃಷಿಯೇತರ ಆದ ಬಳಿಕ ನಮ್ಮ ವ್ಯಾಪ್ತಿಗೆ ಬರುತ್ತೆ. ಇನ್ನೂ ಎನ್ಎ ಆಗಿಲ್ಲ. ಈಗಾಗಲೇ ಫ್ಯಾನ್ ಗಳು ಅಳವಡಿಸಿದ್ದಾರೆ ಅಂತ ಪಂಚಾಯತ್ ಅಧಿಕಾರಿ ಅಸಾಯಕತೆ ತೋಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಒಂದಲ್ಲ ಎರಡಲ್ಲ ಗದಗ, ರೋಣ, ಗಜೇಂದ್ರಗಢ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳಲ್ಲಿ 500ಕ್ಕೂ ಅಧಿಕ ವಿವಿಧ ಕಂಪನಿಗಳ ಪವನ ವಿದ್ಯುತ್ ಯಂತ್ರಗಳು ಅಳವಡಿಸಿದ್ದಾರೆ. ಬಹುತೇಕ ಗ್ರಾಮ ಪಂಚಾಯತ್ ಗಳಿಂದ ಅನುಮತಿಯೂ ಪಡೆಯಲ್ಲಿ, ಎನ್ಓಸಿ ಕೂಡ ಪಡೆಯದೇ ಅಳವಡಿಸಲಾಗಿದೆ. ಈ ಕಂಪನಿಗಳು ಆಡಿದ್ದೇ ಆಟವಾಗಿದೆ. ಸರ್ಕಾರದ ಯಾವುದೇ ನಿಯಮ, ಕಾನೂನು ಪಾಲನೆ ಮಾಡುತ್ತಿಲ್ಲ.
ಇದನ್ನೂ ಓದಿ: ಭೀಕರ ಬರಗಾಲದಿಂದ ರಾಜ್ಯ ತತ್ತರಿಸಿದ್ದರೆ, ಮುಂಡರಗಿ ತಹಸೀಲ್ದಾರನಿಗೆ ಬರ್ತ್ಡೇ ಆಚರಿಸಿಕೊಳ್ಳುವ ಉಮೇದಿ!
ಕೃಷಿ ಜಮೀನುಗಳಲ್ಲೇ ಬೃಹತ್ ಯಂತ್ರಗಳು ಸ್ಥಾಪನೆ ಮಾಡಿದ್ದಾರೆ. ಇದ್ರಿಂದ ಸರ್ಕಾರಕ್ಕೆ ಬರಬೇಕಾದ ಕೋಟ್ಯಾಂತರ ಟ್ಯಾಕ್ಸ್ ಮೋಸ ಆಗ್ತಾಯಿದೆ. ಈ ವಿಷಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗೋತ್ತಿದ್ರೂ ಮೌನಕ್ಕೆ ಶರಣಾಗಿದ್ದಾರೆ. ಗ್ರಾಮ ಪಂಚಾಯತ್ ಆಡಳಿತಗಳು ಟ್ಯಾಕ್ಸ್ ಮೋಸಕ್ಕೆ ಆಕ್ರೋಶ ವ್ಯಕ್ತಪಡಿಸಿವೆ. ಆದ್ರೆ, ಕಂದಾಯ ಇಲಾಖೆ ಮಾತ್ರ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಅನ್ನೋ ಆರೋಪ ಕೇಳಿ ಬರ್ತಾಯಿದೆ.
ಪಂಚಾಯತ್ಗೆ ಕಟ್ಟಬೇಕಾದ ತೆರಿಗೆ ಕಟ್ಟದೇ ನಮ್ಮ ವ್ಯಾಪ್ತಿಗಳಲ್ಲಿ ವಿಂಡ್ ಫ್ಯಾನ್ ಅಳವಡಿಸಿದ್ದಾರೆ ಅಂತ ಆರೋಪಿಸಿದ್ದಾರೆ. ಒಂದು ಕಡೆ ಸರ್ಕಾರಕ್ಕೆ ಟ್ಯಾಕ್ಸ್ ಮೋಸ ಆಗ್ತಾಯಿದೆ. ಮತ್ತೊಂದೆಡೆ ಅಧಿಕಾರಿಗಳ ಜೇಬುಮಾತ್ರ ಫುಲ್ ಆಗ್ತಾಯಿದ್ದು, ಫ್ಯಾನ್ ಘರ್ ಘರ್ ಅಂತ ತಿರುಗುತ್ತಿಯಂತೆ. ಇನ್ನೂ ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕೂಡ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಕೆಲ ಸಡಲಿಕೆ ಇವೆ. ಪಂಚಾಯತ್ ಗಳು ಸರಿಯಾದ ಸಮಯಕ್ಕೆ ಅನುಮತಿ ನೀಡಬೇಕು. ವಿದ್ಯುತ್ ಉತ್ಪಾದನೆ ಆಗಬೇಕು. ಇಲ್ಲಾಂದ್ರೆ ರೈತರಿಗೆ ವಿದ್ಯುತ್ ನೀಡಲು ಸಾಧ್ಯವಿಲ್ಲ. ವರದಿ ತರಿಸಿಕೊಳ್ತೀನಿ ಕಂದಾಯ ಇಲಾಖೆಯಿಂದ ನಿಯಮ ಉಲ್ಲಂಘನೆ ಆದ್ರೆ ಕ್ರಮ ಕೈಗೊಳ್ಳುತ್ತೇನೆ ಅಂತ ಹೇಳಿದ್ದಾರೆ.
ರೈತರು ಸೇರಿದಂತೆ ಎಲ್ಲರಿಗೂ ವಿದ್ಯುತ್ ಅವಶ್ಯಕತೆ ಇದೆ. ಆದ್ರೆ, ಸರ್ಕಾರ ಕೂಡ ಈ ಕಂಪನಿಗಳಿಂದ ಹಣ ಕೊಟ್ಟೆ ಖರೀದಿ ಮಾಡುತ್ತೆ. ಹೀಗಿರುವಾಗಿ ಕಾನೂನು ಉಲ್ಲಂಘನೆ ಮಾಡಿ ಸರ್ಕಾರ ಕೋಟ್ಯಾಂತರ ಟ್ಯಾಕ್ಸ್ ವಂಚನೆ ಮಾಡುವ ಇಂಥ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಜನ್ರು ಒತ್ತಾಯಿಸಿದ್ದಾರೆ. ಕಂದಾಯ ಸಚಿವರ ಸೂಚನೆ ಬಳಿಕವಾದ್ರೂ ಜಿಲ್ಲಾಡಳಿತ ವಿಂಡ್ ಕಂಪನಿಗಳ ದರ್ಬಾರಕ್ಕೆ ಕಡಿವಾಣ ಹಾಕುತ್ತಾ ಅನ್ನೋದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:07 pm, Mon, 13 November 23