ಭೀಕರ ಬರದಿಂದ ಕಂಗಾಲದ ರೈತರಿಗೆ ಮಹಾ ಮೋಸ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಾಂತರ ರೂ. ವಂಚನೆ
ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರ ಹೆಸರಲ್ಲಿ ಭಾರಿ ಹಗರಣ ನಡೆದಿದ್ದು, ಬಯಲಾಗಿದೆ. ಅನ್ನದಾತರ ಹೆಸರಲ್ಲಿ ಸಾಲ ಮಾಡಿ ಕೋಟಿ ಕೋಟಿ ರೂ. ಲೂಟಿ ಮಾಡಲಾಗಿದೆ. ರೈತರು ಪಹಣಿ ಪತ್ರ ಪಡೆದಾಗಲೇ ಹಗರಣ ಬಯಲಾಗಿದೆ. ರೈತರ ಹಣ ನುಂಗಿದವರಿಗೆ ತಕ್ಕ ಶಿಕ್ಷೆಯಾಗಬೇಕು ಅಂತ ಒತ್ತಾಯಿಸಲಾಗಿದೆ.
ಗದಗ, ಸೆಪ್ಟೆಂಬರ್ 27: ಆ ಜಿಲ್ಲೆಯ ರೈತರು ಮೊದಲೇ ಭೀಕರ ಬರದಿಂದ ಕಂಗೆಟ್ಟು ಹೋಗಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆ ಒಣಗಿ ಹೋಗಿದೆ. ಇಂಥ ಸಂಕಷ್ಟದಲ್ಲಿರುವ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಭಾರಿ ಮೋಸವಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರ ಹೆಸರಲ್ಲಿ ಭಾರಿ ಹಗರಣ (scam) ನಡೆದಿದ್ದು, ಬಯಲಾಗಿದೆ. ಅನ್ನದಾತರ ಹೆಸರಲ್ಲಿ ಸಾಲ ಮಾಡಿ ಕೋಟಿ ಕೋಟಿ ರೂ. ಲೂಟಿ ಮಾಡಲಾಗಿದೆ. ರೈತರು ಪಹಣಿ ಪತ್ರ ಪಡೆದಾಗಲೇ ಹಗರಣ ಬಯಲಾಗಿದೆ. ಕೆಸಿಸಿ ಬ್ಯಾಂಕ್ ಅಧಿಕಾರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿ ಭಾರಿ ಹಗರಣ ಮಾಡಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎದರು ಅಧ್ಯಕ್ಷರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೈತರು ಸರ್ಕಾರ ತನಿಖೆ ಮಾಡಿ ರೈತರ ಹಣ ನುಂಗಿದವರಿಗೆ ತಕ್ಕ ಶಿಕ್ಷೆಯಾಗಬೇಕು ಅಂತ ಒತ್ತಾಯಿಸಿದ್ದಾರೆ.
ಗದಗ ತಾಲೂಕಿನ ಹರ್ಲಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಗರಣ ನಡೆದಿದೆ. ಕಾರ್ಯದರ್ಶಿ ಶರಣಪ್ಪ ದೇಸಾಯಿಯೇ ನೂರಾರು ರೈತರಿಗೆ ಪಂಗನಾಮ ಹಾಕಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ್ದಾನೆ. ರೈತರು ಇಸಿ ಪ್ರತಿ ತೆಗೆಸಿದಾಗಲೇ ಕಾರ್ಯದರ್ಶಿ ಮಹಾಮೋಸ ಬಯಲಾಗಿದೆ. ಶರಣಪ್ಪ ದೇಸಾಯಿ ಈಗ ಎಸ್ಕೇಪ್ ಆಗಿದ್ದಾನೆ. ನೂರಾರು ರೈತರ ಹೆಸರಲ್ಲಿ ರೈತರಿಗೆ ಗೋತ್ತಾಗದೇ ಸಾಲ, ರೈತರು ಸಾಲ ಮರು ಪಾವತಿ ಮಾಡಿದ ಹಣವೂ ಬ್ಯಾಂಕಿಗೆ ತುಂಬದೇ ಕೋಟ್ಯಾಂತರ ರೂಪಾಯಿ ಗುಳುಂ ಮಾಡಿದ್ದಾನಂತೆ.
ಪ್ರತಿಯೊಬ್ಬ ರೈತರ ಹೆಸರಲ್ಲಿ 30-40-50 ಸಾವಿರ ರೂ. ಸಾಲು ಮಾಡಿ ನುಂಗಿ ಹಾಕಿದ್ದಾನಂತೆ. ಈ ಹಗರಣ ಬಂದ ತಕ್ಷಣವೆ ಕೆಸಿಸಿ ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ರೈತರು ತಂದಿದ್ದಾರೆ. ಆದರೆ ಯಾರೂ ಕೂಡ ಗಂಭೀರವಾಗಿ ಪರಿಗಣಿಸಿಲ್ಲ. ಈಗ ಭೀಕರ ಬರಗಾಲ ತಾಂಡವಾಡುತ್ತಿದೆ. ರೈತರು ಸಂಕಷ್ಟದಲ್ಲಿ ಕೆಲ ರೈತರು ಸಾಲಪಡೆಯಲು ಹೋದರೆ ಕೆಸಿಸಿ ಬ್ಯಾಂಕ್ ಅಧಿಕಾರಿಗಳು ಹಳೆ ಸಾಲ ಮರುಪಾವತಿ ಮಾಡಿ ಹೊಸ ಸಾಲು ಕೊಡ್ತೀವಿ ಅಂತಿದ್ದಾರಂತೆ. ಆದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾಲ ಮರುಪಾವತಿ ಮಾಡಿದ ರಸೀದಿ ತೋರಿಸಿದ್ದಾರೆ.
ಇದನ್ನೂ ಓದಿ: ಗದಗ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ! ಮತ್ತೊಂದೆಡೆ ಭೀಕರ ಬರಗಾಲದಿಂದ ಅನ್ನದಾತರು ವಿಲವಿಲ!
ಆದರೆ ಬ್ಯಾಂಕ್ ಅಧಿಕಾರಿಗಳು ನಿಮ್ಮ ಸಾಲ ಖಾತೆಗೆ ಹಣ ಜಮಾ ಆಗಿಲ್ಲ. ಸಾಲ ಇನ್ನೂ ಬಾಕಿ ಇದೆ ಅಂತಿದ್ದಾರೆ. ಇದು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಇದೇ ರೀತಿ ನೂರಾರು ರೈತರ ಹೆಸರಿನಲ್ಲಿ ಸಾಲ ಪಡೆದು ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ್ದಾನೆ. ಈ ಹಗರಣದಲ್ಲಿ ಕೆಸಿಸಿ ಬ್ಯಾಂಕ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ.
ಸುಮಾರು ಎರಡುವರೆ ಕೋಟಿ ವಂಚನೆಯಾಗಿದೆ. ಆದರೂ ಕೆಸಿಸಿ ಬ್ಯಾಂಕ್ ಅಧಿಕಾರಿಗಳು ಗ್ರಾಮಕ್ಕೆ ಬಂದಿಲ್ಲ. ಹಣ ನುಂಗಿದ ಕಾರ್ಯದರ್ಶಿ ಶರಣಪ್ಪ ದೇಸಾಯಿ ವಿರುದ್ಧ ದೂರು ಕೂಡ ನೀಡಿಲ್ಲ. ಈ ಎಲ್ಲ ಬೆಳವಣಿಗೆ ನೋಡಿದ್ರೆ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದು, ಮೇಲ್ನೋಟಕ್ಕೆ ಕಂಡು ಬರ್ತಾಯಿದೆ. ಇನ್ನೂ ಇತ್ತೀಚಿಗೆ ಕಾರ್ಯದರ್ಶಿ ಶರಣಪ್ಪ 75 ಲಕ್ಷ ಹಣ ಕೆಸಿಸಿ ಬ್ಯಾಂಕ್ ತುಂಬಿದ್ದಾನೆ. ಬ್ಯಾಂಕ್ ಅಧಿಕಾರಿಗಳು ಹೇಗೆ 75 ಲಕ್ಷ ಹಣ ತುಂಬಿಸಿಕೊಂಡಿದ್ದಾರೆ ಅಂತ ರೈತರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಗದಗ: ಕುಸಿದ ಸೇವಂತಿಗೆ ಬೆಲೆ, ಹೂವಿನ ತೋಟ ನಾಶ ಮಾಡಿದ ರೈತ
ಎರಡೂವರೆ ಕೋಟಿಯಲ್ಲಿ ಒಂದೂವರೆ ಕೋಟಿ ರೈತರ ಹೆಸರಲ್ಲಿ ವಂಚನೆಯಾಗಿದೆಯಂತೆ. ಇನ್ನೂ ಒಂದು ಕೋಟಿ ರೈತರ ಹೆಸರಲ್ಲಿ ಸಾಲ ಮಾಡಿ ಲೂಟಿ ಮಾಡಿದ್ದಾನಂತೆ. ರೈತರ ಹೆಸರಿನಲ್ಲಿ ಕೋಟ್ಯಾಂತರ ಹಣ ಲೂಟಿ ಮಾಡಿದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಗಪ್ ಚುಪ್ ಆಗಿದ್ದು, ರೈತರ ಕೋಪಕ್ಕೆ ಕಾರಣವಾಗಿದೆ. ಇವತ್ತು ಸಂಘದ ಕಚೇರಿ ಎದುರು ಜಮಾಯಿಸಿದ ನೂರಾರು ರೈತರು ಸಂಘದ ಆಡಳಿತ ಮಂಡಳಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರನ್ನು ಕೇಳಿದ್ರೆ, ಗ್ರಾಮದ ಹಿರಿಯರು ಒಂದು ವಾರ ಗಡುವು ನೀಡಿದ್ದಾರೆ. ಅಷ್ಟರೊಳಗೆ ಅಧಿಕಾರಿಗಳು ಸರಿ ಮಾಡಿದ್ರೆ ಸರಿ. ಇಲ್ಲಾಂದ್ರೆ ನಾನೂ ಕಾರ್ಯದರ್ಶಿ ವಿರುದ್ಧ ದೂರು ದಾಖಲು ಮಾಡ್ತೀವಿ ಅಂತಿದ್ದಾರೆ.
ಕಾರ್ಯದರ್ಶಿ ಶರಣಪ್ಪ ದೇಸಾಯಿ ಕೋಟಿ ಕೋಟಿ ರೂ. ಎಸ್ಕೇಪ್ ಆಗಿದ್ದಾನೆ. ಗ್ರಾಮದಲ್ಲಿ ಆತನ ಕೋಟ್ಯಾಂತರ ಮೌಲ್ಯದ ಆಸ್ತಿ ಇದೆ. ಸರ್ಕಾರ, ಬ್ಯಾಂಕ್ ಅಧಿಕಾರಿಗಳು ಆಸ್ತಿ ಜಪ್ತ ಮಾಡಿ ರೈತರ ಹೆಸರಲ್ಲಿ ಲೂಟಿ ಮಾಡಿದ ಹಣ ಭರಣಾ ಮಾಡಿಕೊಂಡು ರೈತರಿಗೆ ಸಾಲನಿಂದ ಮುಕ್ತಿ ನೀಡಬೇಕು ಅಂತ ಒತ್ತಾಯಿಸಿದ್ದಾರೆ. ಆದರೆ ಕೋಟ್ಯಾಂತರ ಗೋಲ್ಮಾಲ್ ಆದ್ರೂ ಸಂಬಂಧಪಟ್ಟಿ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರ ತನಿಖೆಗೆ ಆದೇಶ ಮಾಡಬೇಕು ಅಂತ ಸರ್ಕಾರಕ್ಕೆ ರೈತರು ಒತ್ತಾಯ ಮಾಡಿದ್ದಾರೆ. ಕೆಸಿಸಿ ಬ್ಯಾಂಕ್ ಅಧಿಕಾರಿಗಳು ರೈತರ ಆರೋಪಕ್ಕೆ ಉತ್ತರ ನೀಡಬೇಕಿದೆ. ಇನ್ನಾದ್ರೂ ಸರ್ಕಾರ, ಕೆಸಿಸಿ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್ ಹಾಗೂ ರೈತರ ಹಣ ಲೂಟಿ ಮಾಡಿದ ಕಾರ್ಯದರ್ಶಿ ವಿರುದ್ಧು ಕಠಿಣ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:05 pm, Wed, 27 September 23