ಟಿವಿ 9 ವರದಿ ಫಲಶೃತಿ: ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದ ಶಿಕ್ಷಕನ ಅಮಾನತು
teacher suspend: ಹೆಬ್ಬಾಳ ಶಾಲೆಯ ಶಿಕ್ಷಕ ಶರಣ ಬಸವ ಪಾಟೀಲ್ ಸರ್ಕಾರಿ ಸಂಬಳ ಪಡೆಯುತ್ತಿದ್ದರೂ ಮಕ್ಕಳಿಗೆ ಪಾಠ ಮಾಡೋದನ್ನ ಮರೆತಿದ್ದ ಶಿಕ್ಷಕ. ತಿಂಗಳಿಗೊಮ್ಮೆ ಶಾಲೆಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕುತ್ತಿದ್ದ ಶಿಕ್ಷಕ ಶರಣ ಬಸವ ಪಾಟೀಲ್ ವಿರುದ್ಧ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದರು.
ಗದಗ: ಅಕ್ರಮ ಮರಳು ದಂಧೆಯಲ್ಲಿ ( illegal sand mining) ಭಾಗಿಯಾಗಿದ್ದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಶಾಲೆಯ ಶಿಕ್ಷಕ ಶರಣ ಬಸವ ಪಾಟೀಲ್ ಅವರನ್ನು ಅಮಾನತು (suspend) ಮಾಡಲಾಗಿದೆ. ಪಾಟೀಲ್ ( teacher sharana basava patil), ಶಿರಹಟ್ಟಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಹ ಆಗಿದ್ದಾರೆ. ಶಿಕ್ಷನನ್ನು ಅಮಾನತುಗೊಳಿಸಿ ಶಿರಹಟ್ಟಿ ಬಿಇಒ ಆರ್.ಎಸ್. ಬುರಡಿ ಆದೇಶ ಹೊರಡಿಸಿದ್ದಾರೆ. ಜನವರಿ 31ರಂದು ಟಿವಿ 9 ನಲ್ಲಿ ಶಿಕ್ಷಕನ ಮರಳು ದಂಧೆಯ ಬಗ್ಗೆ ವರದಿ ಪ್ರಸಾರವಾಗಿತ್ತು. ‘ಶಾಲೆಗೆ ಚಕ್ಕರ್ ಮರಳು ದಂಧೆಗೆ ಹಾಜರ್’ ಶೀರ್ಷಿಕೆಯಡಿ ವರದಿ ಪ್ರಸಾರ ಮಾಡಲಾಗಿತ್ತು.
ಸರ್ಕಾರಿ ಸಂಬಳ ಪಡೆಯುತ್ತಿದ್ದರೂ ಮಕ್ಕಳಿಗೆ ಪಾಠ ಮಾಡೋದನ್ನ ಮರೆತಿದ್ದ ಶಿಕ್ಷಕ. ತಿಂಗಳಿಗೊಮ್ಮೆ ಶಾಲೆಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕುತ್ತಿದ್ದ ಶಿಕ್ಷಕ ಶರಣ ಬಸವ ಪಾಟೀಲ್ ವಿರುದ್ಧ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದರು.
ಶಿಕ್ಷಣ ಇಲಾಖೆ ಅಧಿಕಾರಿಗಳ ವಿಳಂಬ ಧೋರಣೆಗೆ ಅನುಮಾನವಿತ್ತು. ಆದರೂ ಸುದ್ದಿ ಪ್ರಸಾರವಾದ 12 ದಿನಗಳ ನಂತರ ಶಿಕ್ಷಕ ಪಾಟೀಲ್ ಸಸ್ಪೆಂಡ್ ಆಗಿದ್ದಾರೆ. ಆದರೆ ಶಿಕ್ಷಕನಿಗೆ ಸಾಥ್ ನೀಡಿದ್ದ ಮುಖ್ಯ ಶಿಕ್ಷಕನ ವಿರುದ್ಧ ಕ್ರಮವಿಲ್ಲ. ಮುಖ್ಯ ಶಿಕ್ಷಕ ವಿ.ಎನ್. ಪಾಟೀಲ್ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಇದೀಗ ಆಗ್ರಹಿಸಿದ್ದಾರೆ.
ದುರ್ನಡತೆ: ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಕೋಲಾರ: ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಗಿರಿಜೇಶ್ವರಿ ದೇವಿ ಅವರನ್ನು ದುರ್ನಡತೆ ಹಾಗೂ ಕರ್ತವ್ಯ ಲೋಪದಡಿ ಅಮಾನತು ಮಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್ ಈ ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡ ಗಿರಿಜೇಶ್ವರಿ ದೇವಿ ಜಾಗಕ್ಕೆ, ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಶೋಕ್ ಅವರನ್ನು ನೇಮಕ ಮಾಡಲಾಗಿದೆ.
ತುಮಕೂರಿನಲ್ಲಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಖ್ಯ ಶಿಕ್ಷಕ ಅಮಾನತು ತುಮಕೂರು: ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆ ಜಿಲ್ಲೆಯ ಪಾವಗಡ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನಾದ ಸಿಎಂ ಮಲ್ಲಿಕಾರ್ಜುನನ್ನು ಅಮಾನತುಗೊಳಿಸಲಾಗಿದೆ. ಅನುಚಿತ ಅಸಭ್ಯ ವರ್ತನೆ ಆರೋಪದ ಹಿನ್ನೆಲೆ ಅಮಾನತು ಮಾಡಿ ಬಿಇಒ ಆದೇಶ ಹೊರಡಿಸಿದ್ದಾರೆ. ಮುಖ್ಯ ಶಿಕ್ಷಕ ಸಿಎಂ ಮಲ್ಲಿಕಾರ್ಜುನ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಅಲ್ಲದೇ ಶಾಲಾ ಸಿಬ್ಬಂದಿಯೊಂದಿಗೆ ಗೌರವವಾಗಿ ನಡೆದುಕೊಳ್ಳಲ್ಲ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಸಾಬೀತಾದ ಹಿನ್ನೆಲೆ ಅಮಾನತು ಮಾಡಲಾಗಿದೆ.
ಇದನ್ನೂ ಓದಿ:
ಯಾವ ಪುಣ್ಯದ ಹಣದಲ್ಲಿ ರಾಧಿಕಾ ಅವರಿಗೆ ನೂರಾರು ಕೋಟಿ ಕೊಟ್ಟರು: ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಕೆ ರಾಜು ಕಿಡಿ
ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ; ಕಾರಣ ಇಲ್ಲಿದೆ
Published On - 3:19 pm, Sat, 12 February 22