ಅಕ್ಕನಿಗೆ ಕಿರುಕುಳ ಕೊಟ್ಟ ಭಾವನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ
ಗದಗ(Gadag)ನ ರೋಣ ಪಟ್ಟಣದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಅಕ್ಕನಿಗೆ ಕಿರುಕುಳ ಕೊಟ್ಟ ಹಿನ್ನಲೆ ರೊಚ್ಚಿಗೆದ್ದ ಬಾಮೈದ ಬಸವರಾಜ್ ಎಂಬಾತ, ಭಾವನಿಗೆ ಡೀಸೆಲ್ ಹಾಕಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಗಾಯಾಳುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಾದ್ರೆ ಆಗಿದ್ದೇನು ಅಂತೀರಾ? ಈ ಸ್ಟೋರಿ ಓದಿ.

ಗದಗ, ಜು.27: ಅಕ್ಕನಿಗೆ ಕಿರುಕುಳ ಕೊಟ್ಟ ಹಿನ್ನಲೆ ರೊಚ್ಚಿಗೆದ್ದ ಬಾಮೈದ ಬಸವರಾಜ್ ಎಂಬಾತ, ಭಾವನಿಗೆ ಡೀಸೆಲ್ ಹಾಕಿ ಕೊಲೆಗೆ ಯತ್ನಿಸಿದ ಘಟನೆ ಗದಗ(Gadag)ನ ರೋಣ ಪಟ್ಟಣದಲ್ಲಿ ನಡೆದಿದೆ. ಬೆಂಕಿ ಹಚ್ಚುವ ಪ್ರಯತ್ನ ವಿಫಲವಾದಾಗ ಭಾವ ಜಗದೀಶ್ಗೆ ಚಾಕುವಿನಿಂದ ಬೇಕಾಬಿಟ್ಟಿ ಇರಿದಿದ್ದಾನೆ. ಕೂಡಲೇ ಜಗದೀಶ್ನಿಗೆ ಗದಗ ಜಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆರು ತಿಂಗಳ ಹಿಂದೆ ಪ್ರೀತಿ ಮಾಡಿ ಮದುವೆ ಆಗಿದ್ದ ಜಗದೀಶ್
ಆರೋಪಿ ಬಸವರಾಜ್ ಅಕ್ಕನೊಂದಿಗೆ ಗಾಯಾಳು ಜಗದೀಶ್, ಆರು ತಿಂಗಳ ಹಿಂದೆ ಪ್ರೀತಿ ಮಾಡಿ ಮದುವೆ ಆಗಿದ್ದ. ಆದರೆ, ಆರೇ ತಿಂಗಳಲ್ಲಿ ಇವರ ಪ್ರೀತಿ ಕೊನೆಯಾಗಿದೆ. ಹೌದು, ಪ್ರೀತಿ ಮಾಡಿ ಮದುವೆಯಾದ ಯುವತಿ ಜೊತೆ ರಾಕ್ಷಸನಂತೆ ನಡೆದುಕೊಂಡಿದ್ದಾನೆ. ಈ ಹಿನ್ನಲೆ ನೊಂದ ಯುವತಿ, ತವರು ಮನೆಗೆ ಬಂದಿದ್ದಳು. ಇದಾದ ಬಳಿಕ ಹಿರಿಯರ ಸಮ್ಮುಖದಲ್ಲಿ ಯುವಕ, ಯುವತಿ ಪ್ರತ್ಯೇಕವಾಗಿದ್ದರು. ಜೊತೆಗೆ ಇದೇ ವೇಳೆ ಎರಡು ಕುಟುಂಬಗಳು ಜಗಳವಾಡದಂತೆ ತಾಕೀತು ಕೂಡ ಮಾಡಲಾಗಿತ್ತು.
ಇದನ್ನೂ ಓದಿ:ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ, ಕುಟುಂಬದಿಂದಲೇ ಕೊಲೆಗೆ ಯತ್ನ; ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿತು ಜೀವ
ನಿತ್ಯ ಕುಡಿದು ಬಂದು ಯುವತಿ ಹಾಗೂ ಕುಟುಂಬಸ್ಥರಿಗೆ ಕಿರಿಕ್
ಇಷ್ಟೇಲ್ಲ ಆದರೂ ಹೆಂಡತಿ ಹಿಂದೆ ದುಂಬಾಲು ಬಿದ್ದಿದ್ದ ಜಗದೀಶ್, ನಿತ್ಯ ಕುಡಿದು ಬಂದು ಆಕೆಗೆ ಹಾಗೂ ಕುಟುಂಬಸ್ಥರಿಗೆ ತೊಂದರೆ ಕೊಡುತ್ತಿದ್ದನಂತೆ. ಜಗದೀಶ್ನ ಕಿರುಕುಳಕ್ಕೆ ಬೇಸತ್ತು ಯುವತಿ ಸಹೋದರ ಬಸವರಾಜ್ ಹಲ್ಲೆ ಮಾಡಿದ್ದಾನೆ. ಇತ್ತ ಬಸವರಾಜ್ ಮೇಲೇ ಭಾವ ಜಗದೀಶ್ ಕೂಡ ಹಲ್ಲೆ ನಡೆಸಿದ್ದಾನೆ. ಇದೀಗ ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಗಾಯಾಳುಗಳಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



