ಗದಗ: ಶಾಲಾ ಮಕ್ಕಳ ಕೂದಲು ಕಟ್ ಮಾಡಿದ ಶಿಕ್ಷಕನಿಗೆ ಬಿತ್ತು ಪೋಷಕರಿಂದ ಧರ್ಮದೇಟು!

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 06, 2024 | 6:30 PM

ಮಕ್ಕಳಿಗೆ ಬುದ್ದಿವಾದ ಹೇಳಬೇಕಾದ ಶಿಕ್ಷಕ, ಯಡವಟ್ಟು ಮಾಡಿದ್ದಾನೆ. ಶಾಲಾ ಮಕ್ಕಳು ಹೆಚ್ಚಿನ ಕೂದಲು ಬಿಟ್ಟಿದ್ದಾರೆ ಎನ್ನುವ ಕಾರಣಕ್ಕೆ ಶಿಕ್ಷಕ ತಾನೇ ಕೂದಲು ಕಟ್ ಮಾಡಿದ್ದಾನೆ. ಈ ವೇಳೆ ಓರ್ವ ವಿದ್ಯಾರ್ಥಿ ಹಣೆಗೆ ಗಾಯವಾಗಿದ್ದು, ಇದರಿಂದ ಕೆರಳಿದ ಮಕ್ಕಳು, ಪೋಷಕರು ಶಾಲೆಗೆ ಬಂದು, ಶಿಕ್ಷಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಧರ್ಮದೇಟು ನೀಡಿದ್ದಾರೆ.

ಗದಗ: ಶಾಲಾ ಮಕ್ಕಳ ಕೂದಲು ಕಟ್ ಮಾಡಿದ ಶಿಕ್ಷಕನಿಗೆ ಬಿತ್ತು ಪೋಷಕರಿಂದ ಧರ್ಮದೇಟು!
ಶಿಕ್ಷಕ
Follow us on

ಗದಗ, ಆ.06: ಗದಗ-ಬೆಟಗೇರಿಯ ಸೆಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ(School) ರಣಾಂಗಣವಾಗಿತ್ತು. ಹೌದು, ಈ ಶಾಲೆಯ ಆರೇಳು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಕೂದಲು ಬಿಟ್ಟಿಕೊಂಡು ಬಂದಿದ್ದಾರೆ. ಈ ಹಿನ್ನಲೆ ಕಂಪ್ಯೂಟರ್ ಶಿಕ್ಷಕ ಬೆನೋಯ್ ಎಂಬುವವರು ಶಾಲಾ ಮಕ್ಕಳ ಕೂದಲು ಕಟ್ ಮಾಡಿದ್ದರು. ಈ ವೇಳೆ ಏಳನೇಯ ತರಗತಿ ವಿದ್ಯಾರ್ಥಿಯ ಹಣೆಗೆ ಗಾಯವಾಗಿದೆ. ಈ ಕುರಿತು ಮಕ್ಕಳು ಪೋಷಕರ ಮುಂದೆ ಹೇಳಿದ್ದು, ಆರೇಳು ಮಕ್ಕಳ ಪೋಷಕರು ಶಾಲೆಗೆ ಬಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶಿಕ್ಷಕ ಬೆನೋಯ್ ‘ನಮ್ಮ ಶಾಲೆಯಲ್ಲಿ ರೂಲ್ಸ್ ಇದೆ ಎಂದು ಮಂಡುವಾದ ಮಾಡಿದ್ದಾನೆ.  ಹೀಗಾಗಿ ನಿನ್ನ ಕಟಿಂಗ್ ನೋಡು, ನೀನೆ ಸರಿಯಾಗಿ ಕಟಿಂಗ್ ಮಾಡಿಸಿಲ್ಲಾ ಎಂದು, ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ.

ಇನ್ನು ಶ್ರಾವಣ ಮಾಸದಲ್ಲಿ ಹೆಚ್ಚಿನ ಮಕ್ಕಳು ಕಟಿಂಗ್ ಮಾಡಿಸುವುದಿಲ್ಲ. ಹೀಗಾಗಿ ಮಕ್ಕಳು ಕೂಡ ಕಟಿಂಗ್ ಮಾಡಿಸಿಲ್ಲ, ಅದನ್ನು ಪೋಷಕರ ಗಮನಕ್ಕೆ ತಂದು ಕಟಿಂಗ್ ಮಾಡಿಸಲು ಹೇಳಬೇಕು. ಅದನ್ನು ಬಿಟ್ಟು ಇವರೇ ಕಟಿಂಗ್ ಮಾಡಿದ್ರೆ ಹೇಗೆ ಎಂದು ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ ಅವರು ಶಾಲೆಗೆ ಬಂದು ಕೂದಲು ಕಟ್ ಮಾಡಿದ ಶಿಕ್ಷಕನನ್ನು ವಿಚಾರಣೆ ‌ಮಾಡಿದರು. ಆದ್ರೆ, ಪೋಷಕರು ಈ ಶಿಕ್ಷಕ ನಮ್ಮ ಶಾಲೆಗೆ ಬೇಡ ಎಂದು ಒತ್ತಾಯಿಸಿ ಗಲಾಟೆ ಮಾಡಿ, ಶಾಲಾ ಆಡಳಿತ ಮಂಡಳಿ ಶಿಕ್ಷಕನ್ನು ಈ ಶಾಲೆಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ವರುಣ ತಂದಿಟ್ಟ ಆಪತ್ತು; ವಿದ್ಯಾರ್ಥಿಗಳಿಗೆ ಗಾಳಿ ತುಂಬಿದ ಟ್ಯೂಬೇ ದೋಣಿ, ಜೀವ ಭಯದಲ್ಲೇ ಶಾಲೆಗೆ ಹೋಗುವ ಅನಿವಾರ್ಯತೆ

ಶಾಲಾ ಆಡಳಿತ ಮಂಡಳಿಯಿಂದ ದುರ್ವವರ್ತನೆ ಕುರಿತು ಪತ್ರವನ್ನು ಪಡೆದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ ಹೇಳಿದರು. ಮಕ್ಕಳಿಗೆ ಪಾಠ ಮಾಡೋದನ್ನು ಬಿಟ್ಟು, ನೀವು ಕಟಿಂಗ್ ಶಾಪ್ ಈಡಿ ಎಂದು ಪೋಷಕರು ಕಿಡಿಕಾರಿದರು. ದುರ್ವವರ್ತನೆ ತೋರಿದ ಶಿಕ್ಷನಿಗೆ ಧರ್ಮದೇಟು ಬಿದ್ದ ಕೂಡಲೇ, ಶಾಲೆಗೆ ಪೊಲೀಸರು ಆಗಮಿಸಿ ಕೂದಲು ಕಟ್ ಮಾಡಿದ ಶಿಕ್ಷಕನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Tue, 6 August 24