ಗದಗ: ಮಹಾರಾಷ್ಟ್ರ ಸರ್ಕಾರದ ಇಂದಿನ ರಾಜಕೀಯ ಬಿಕ್ಕಟ್ಟಿಗೆ (Maharashtra Politics) ಶಿವಸೇನೆಯ (shiv sena) ಒಳಜಗಳವೇ ಕಾರಣ ಎಂದು ಗದಗ ಜಿಲ್ಲೆ ನರಗುಂದದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಇದಕ್ಕೆ ಶಿವಸೇನೆಯ ಶಾಸಕರು ಬರೆದಿರುವ ಪತ್ರವೇ ಸಾಕ್ಷಿ. ಇದು ಅಸ್ವಾಭಾವಿಕ ಮೈತ್ರಿ ಎಂದು ಶಿವಸೇನೆ ಶಾಸಕರೇ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಎನ್ಸಿಪಿ ವಿರುದ್ಧ ಬಾಳಾ ಠಾಕ್ರೆ ಅವರೇ ಹೋರಾಟ ಮಾಡಿದ್ದರು. NCP ಕೈಯಲ್ಲಿ ಸಿಎಂ ರಿಮೋಟ್ ಕಂಟ್ರೋಲ್ ಇದೆ ಅನ್ನೋ ಆರೋಪವಿತ್ತು. ಇವರ ತಪ್ಪಿನಿಂದ ಇಡೀ ಪಕ್ಷವೇ ಅಸಮಾಧಾನಗೊಂಡಿದೆ. ಇನ್ನೆರಡು ದಿನ ತಡೆದರೆ ಉಳಿದಿರುವವರೂ ಹೊರಹೋಗುವ ಸಾಧ್ಯತೆಯಿದೆ. ಉದ್ಧವ್, ಆದಿತ್ಯ ಠಾಕ್ರೆ (Uddhav Thackeray) ಬಿಟ್ಟರೆ ಎಲ್ಲರೂ ಪಕ್ಷ ಬಿಡುವ ಸಾಧ್ಯತೆ ಇದೆ. ಹೊರಗಿನವರು ಷಡ್ಯಂತ್ರ ಮಾಡಿ ಪಕ್ಷ ತೆಗೆದುಕೊಂಡು ಹೋಗಲಾಗಲ್ಲ ಎಂದು ಸಚಿವ ಪ್ರಲ್ಹಾದ್ ಜೋಶಿ ಮಹಾರಾಷ್ಟ್ರದ ತಾಜಾ ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಿಸಿದ್ದಾರೆ. ಜೊತೆಗೆ ಹಿಂದೂ ವೋಟ್ ಗಿಂತನೂ ಸಮಾನ ಮನಸ್ಕರರು ಒಂದೆಡೆ ಇದ್ದೇವೆ. ಶಿವಸೇನೆ ಒಂದು ನಮ್ಮಿಂದ ಹೊರಗೆ ಹೋಗಿತ್ತು. 2014 ರ ಚುನಾವಣೆಯಲ್ಲೂ ನಾವು ಒಳ್ಳೆ ಸಾಧನೆ ಮಾಡಿದ್ದೇವೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ್ದು 40 ಸೀಟ್ ಇದೆ. ಕಾಂಗ್ರೆಸ್ಸನ್ನು ಮುಗಿಸುವ ಅಗತ್ಯವಿಲ್ಲ, ಅದಾಗಿಯೇ ಮುಗಿದು ಹೋಗುತ್ತೆ. ಕಾಂಗ್ರೆಸ್ ವಿಪಕ್ಷವಾಗಿ ತನ್ನ ಅಸ್ತಿತ್ವವನ್ನಾದರೂ ಉಳಿಸಿಕೊಳ್ಳಲಿ. ಮಹಾರಾಷ್ಟ್ರದಲ್ಲಿ ಶಾಸಕರನ್ನು ಖರೀದಿಸುವ ಪ್ರಶ್ನೆಯೇ ಬರುವುದಿಲ್ಲ. ಎನ್ಸಿಪಿ, ಕಾಂಗ್ರೆಸ್ನಿಂದಲೇ ಸಮಸ್ಯೆಯಾಗಿದೆ ಎಂದು ಪ್ರಲ್ಹಾದ್ ಜೋಶಿ ಸೂಚ್ಯವಾಗಿ ಹೇಳಿದರು. ಕಾಂಗ್ರೆಸ್ ಪಾರ್ಟಿ ಮಹಾರಾಷ್ಟ್ರ ದಲ್ಲಿ ಏನಿದೆ? ಕಾಂಗ್ರೆಸ್ ಪಾರ್ಟಿ ಏನೋ 40 ಸೀಟ್ ಇದೆ. ಅಲ್ಲಿ ಇಲ್ಲಿ ಮೇಯಿಕೊಂಡು ಇದ್ದರು. ಕಾಂಗ್ರೆಸ್ ಪಕ್ಷದವರನ್ನು ಟಾರ್ಗೆಟ್ ಮಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಅದಾಗಿಯೇ ಮುಗಿದು ಹೋಗುತ್ತಿದೆ. ಕಾಂಗ್ರೆಸ್ ಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ.. ಅವರು ವಿರೋಧ ಪಕ್ಷವಾಗಿ ಅಸ್ಥಿತ್ವ ಉಳಿಸಿಕೊಳ್ಳಲಿ ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.
ಭಾರತ ಸ್ವಾತಂತ್ಯ್ರದ ಅಮೃತ ಮಹೋತ್ಸವದ ಅಂಗವಾಗಿ ದೇಶಕ್ಕಾಗಿ ಜೀವ ಹಾಗು ಜೀವನವನ್ನು ಸಮರ್ಪಿಸಿದ ಹೋರಟಗಾರರ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಸಚಿವ ಜೋಶಿ ಭಾಗವಹಿಸಿದ್ದರು.
ಭಾರತ ಸ್ವಾತಂತ್ಯ್ರದ ಅಮೃತ ಮಹೋತ್ಸವದ ಅಂಗವಾಗಿ ದೇಶಕ್ಕಾಗಿ ಜೀವ ಹಾಗು ಜೀವನವನ್ನು ಸಮರ್ಪಿಸಿದ ಹೋರಟಗಾರರ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. pic.twitter.com/Wj6nWjy1G8
— Pralhad Joshi (@JoshiPralhad) June 25, 2022
ಇದನ್ನೂ ಓದಿ: