AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

14ನೇ ದಿನಕ್ಕೆ ಕಾಲಿಟ್ಟ ಲಕ್ಕುಂಡಿ ಉತ್ಖನನ; ಈ ವರೆಗೂ 45ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳು ಪತ್ತೆ

ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಉತ್ಖನನದಲ್ಲಿ ಚಿನ್ನದ ನಾಣ್ಯಗಳು, ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಸಮಗ್ರ ಉತ್ಖನನಕ್ಕೆ ತಜ್ಞರ ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಉತ್ಖನನ ಧೂಳಿನಿಂದ ಶಾಲಾ ಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಅಧಿಕಾರಿಗಳು ಮತ್ತು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ನೀರು ಸಿಂಪಡಣೆ ಮೂಲಕ ಮಕ್ಕಳ ಆರೋಗ್ಯ ಸುರಕ್ಷತೆಗೆ ತುರ್ತು ಕ್ರಮ ಕೈಗೊಂಡಿದ್ದಾರೆ.

14ನೇ ದಿನಕ್ಕೆ ಕಾಲಿಟ್ಟ ಲಕ್ಕುಂಡಿ ಉತ್ಖನನ; ಈ ವರೆಗೂ 45ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳು ಪತ್ತೆ
14ನೇ ದಿನಕ್ಕೆ ಕಾಲಿಟ್ಟ ಲಕ್ಕುಂಡಿ ಉತ್ಖನನ; ಈ ವರೆಗೂ 45ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳು ಪತ್ತೆ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Jan 31, 2026 | 12:55 PM

Share

ಗದಗ, ಜನವರಿ 31: ಜಿಲ್ಲೆಯ (Lakkundi Excavtion) ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನ ಕಾರ್ಯ 14ನೇ ದಿನಕ್ಕೆ ಕಾಲಿಟ್ಟಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ ಉತ್ಖನದಲ್ಲಿ ಈವರೆಗೂ 45ಕ್ಕೂ ಹೆಚ್ಚು ವಿಶೇಷ ಪ್ರಾಚ್ಯಾವಶೇಷ ವಸ್ತುಗಳು ಪತ್ತೆಯಾಗಿದ್ದು, ಪುರಾತತ್ವ ಇಲಾಖೆ ನಿರ್ದೇಶಕ ಶೇಜೇಶ್ವರ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

ಗ್ರಾಮವನ್ನು ಸ್ಥಳಾಂತರಿಸಿ ಸಮಗ್ರ ಉತ್ಖನನ?

ಲಕ್ಕುಂಡಿಯ ಉತ್ಖನನದ ವೇಳೆ ಸಿಕ್ಕ ಪ್ರಾಚ್ಯವಸ್ತುಗಳ ಕುರಿತು ಮಾತನಾಡಿದ ಐತಿಹಾಸಿಕ ತಜ್ಞ ಷಡಕ್ಷರಯ್ಯಾ, ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನದಲ್ಲಿ ಚಿನ್ನದ ನಾಣ್ಯಗಳು, ಪ್ರಾಚ್ಯಾವಶೇಷ ಮತ್ತು ನಾಗ ಮೂರ್ತಿಗಳು ಪತ್ತೆಯಾಗಿವೆ. ಲಕ್ಕುಂಡಿಯ ಸಂಪೂರ್ಣ ಐತಿಹಾಸಿಕ ವಸ್ತುಗಳನ್ನು ಹೊರತೆಗೆಯಲು ಗ್ರಾಮವನ್ನು ಸ್ಥಳಾಂತರಿಸಿ ಸಮಗ್ರ ಉತ್ಖನ ಮಾಡಬೇಕು.ಕೆಲವು ಶಿಲೆ, ಧಾರ್ಮಿಕ ವಸ್ತುಗಳು ನೆಲದ ಮೂರು-ನಾಲ್ಕು ಅಡಿ ಕೆಳಗೆ ಸಿಕ್ಕಿದ್ದು, ನಿಧಿ ಹೇಗೆ ಸಿಕ್ಕಿದೆ ಎಂಬ ಬಗ್ಗೆ ಅನುಮಾನಗಳು ಮೂಡಿವೆ ಎಂದಿದ್ದಾರೆ.

ಆರೋಗ್ಯ ಸಮಸ್ಯೆಗೆ ಸಿಲುಕಿದ ಪುಟ್ಟ ಮಕ್ಕಳು

ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಿಂದ ಶಾಲಾ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. LKG, UKG ತರಗತಿಗಳ ಮಕ್ಕಳಿಗೆ ಉತ್ಖನನದ ಧೂಳಿನಿಂದ ಕೆಮ್ಮು, ನೆಗಡಿ, ವಾಂತಿ ಮತ್ತು ಜ್ವರದ ಸಮಸ್ಯೆಗಳು ಕಾಣಿಸಿಕೊಂಡು, ನರಳಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಕ್ರಮವಾಗಿ ಶಾಲೆ ಸುತ್ತ ಮತ್ತು ಉತ್ಖನ ಆವರಣದಲ್ಲಿ ಟ್ರ್ಯಾಕ್ಟರ್ ಮೂಲಕ ನೀರು ಸಿಂಪಡಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ, ನಿಧನರಾದ ಟಿ.ಎಂ. ಕೇಶವ್ (74) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತ ಭಾರತೀಯ ಪುರಾತತ್ವ ಅಧಿಕಾರಿಯಯಾಗಿದ್ದ ಅವರು ಜೂನ್ 2025 ರಲ್ಲಿ ಉತ್ಖನ ಕಾರ್ಯಕ್ಕೆ ಚಾಲನೆ ನೀಡಿದ್ದರು. ಕರಳು ಕ್ಯಾನ್ಸರ್‌ನಿಂದ ನಿಧನರಾದ ಕೇಶವ್ ಉತ್ಖನನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಅಧಿಕಾರಿಗಳು ಮತ್ತು ಕಾರ್ಮಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.