Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಪಹೌಸ್ ಸ್ಥಗಿತಗೊಳಿಸಿ SPML ಕಂಪನಿ ಸಿಬ್ಬಂದಿ ಪ್ರತಿಭಟನೆ, ಜೀವ ಜಲಕ್ಕಾಗಿ ಗದಗ ಬೆಟಗೇರಿ ಅವಳಿ ಜನರ ಪರದಾಟ

ಗದಗ ಬೆಟಗೇರಿ ಅವಳಿ ನಗರಕ್ಕೆ 10 ರಿಂದ‌ 15 ದಿನಕ್ಕೆ ಒಂದು ಭಾರಿ ನೀರು ಬಿಡಲಾಗುತ್ತಿತ್ತು. ಈಗ ಮತ್ತೆ ನೀರಿನ ಸಮಸ್ಯೆ ಉಂಟಾಗಿದೆ. ಹಮ್ಮಿಗಿ, ಪಂಪಹೌಸ್, ಡಂಬಳ, ಪಂಪಹೌಸ್, ಹಾಗೂ ಪಾಪನಾಶಿ ಪಂಪಹೌಸ್ ಮೂರು ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಪಂಪಹೌಸ್ ಸ್ಥಗಿತಗೊಳಿಸಿ SPML ಕಂಪನಿ ಸಿಬ್ಬಂದಿ ಪ್ರತಿಭಟನೆ, ಜೀವ ಜಲಕ್ಕಾಗಿ ಗದಗ ಬೆಟಗೇರಿ ಅವಳಿ ಜನರ ಪರದಾಟ
ಗದಗ ಬೆಟಗೇರಿ ಅವಳಿ ನಗರದಲ್ಲಿ ನೀರಿಗಾಗಿ ಜನರ ಪರದಾಟ
Follow us
TV9 Web
| Updated By: ಆಯೇಷಾ ಬಾನು

Updated on:Dec 13, 2022 | 12:30 PM

ಗದಗ: ಗದಗ ಬೆಟಗೇರಿ ಅವಳಿ ನಗರಕ್ಕೆ ಮತ್ತೆ ಕುಡಿಯುವ ನೀರಿನ ಸಂಕಷ್ಟ(Water Crisis) ಎದುರಾಗಿದೆ. ಅವಳಿ ನಗರದ ಜನರಿಗೆ ಇಂದಿನಿಂದ ಕುಡಿಯುವ ನೀರಿನ ಪೂರೈಕೆ ಬಂದ್ ಮಾಡಲಾಗುತ್ತಿದೆ. ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ಮೂರು ಪಂಪಹೌಸ್ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲು SPML ಕಂಪನಿ ಸಿಬ್ಬಂದಿ ಮುಂದಾಗಿದ್ದಾರೆ.

ಗದಗ ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಯಾವಾಗಲೂ ಇದ್ದೇ ಬರುತ್ತೇ, ಈವಾಗ ಮತ್ತೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಈಗ ಸಾಕಷ್ಟು ಪ್ರಮಾಣದಲ್ಲಿ ನೀರಿದ್ರು, ಜನರಿಗೆ ಮಾತ್ರ ಕುಡಿಯುವ ನೀರು ಸಿಗ್ತಾಯಿಲ್ಲಾ. ನೀರು ಸರಬರಾಜು ಮಾಡುವ ಸಿಬ್ಬಂದಿಗೆ ಕಳೆದ ಐದು ತಿಂಗಳಿಂದ ವೇತನ ನೀಡಿಲ್ಲಾ, ಹೀಗಾಗಿ ಪಂಪಹೌಸ್ ಬಂದ್ ಮಾಡಿ, ಮುಷ್ಕರ ನಡೆಸುತ್ತಿದ್ದಾರೆ. ಈ ಕಡೇ ನೀರಿಗಾಗಿ ಪರದಾಟ ಆರಂಭವಾಗಿದೆ.

ಈ ಭಾರಿ ಸಾಕಷ್ಟು ಮಳೆಯಾಗಿದ್ದು, ಹಮ್ಮಿಗಿ ಭ್ಯಾರೇಜ್ ಭರ್ತಿಯಾಗಿದೆ. ಆದ್ರೂ ಕೂಡಾ ಗದಗ ಬೆಟಗೇರಿ ಅವಳಿ ನಗರಕ್ಕೆ 10 ರಿಂದ‌ 15 ದಿನಕ್ಕೆ ಒಂದು ಭಾರಿ ನೀರು ಬಿಡಲಾಗುತ್ತಿತ್ತು. ಈಗ ಮತ್ತೆ ನೀರಿನ ಸಮಸ್ಯೆ ಉಂಟಾಗಿದೆ. ಹಮ್ಮಿಗಿ, ಪಂಪಹೌಸ್, ಡಂಬಳ, ಪಂಪಹೌಸ್, ಹಾಗೂ ಪಾಪನಾಶಿ ಪಂಪಹೌಸ್ ಮೂರು ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಕಳೆದ 24 ಗಂಟೆಯಿಂದ ಮುಷ್ಕರ ನಡೆಸುತ್ತಿದ್ದು, ಅವಳಿ ನಗರದ 35 ವಾರ್ಡ್ ಗಳಿಗೆ ನೀರು ಸರಬರಾಜು ಆಗ್ತಾಯಿಲ್ಲಾ. ಹೀಗಾಗಿ ಅವಳಿ ನಗರದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ನಮಗೆ ನೀರು ಬಿಡಬಾರದು ಎನ್ನುವ ಉದ್ದೇಶ ಇಲ್ಲಾ, ಆದ್ರೆ, ನಮಗೆ ಕುಟುಂಬ ಇದೆ, ಕಳೆದ ಐದು ತಿಂಗಳಿಂದ ವೇತನ ನೀಡಿಲ್ಲ. ನಾಮ್ಮ ಬದುಕು ಸಾಗಿಸುವುದು ಕಷ್ಟವಾಗಿದೆ‌. ಹೀಗಾಗಿ ಅನಿವಾರ್ಯವಾಗಿ ಪಂಪಹೌಸ್ ಬಂದ್ ಮಾಡಿ ಹೋರಾಟ ಮಾಡಲಾಗುತ್ತಿದೆ ಅಂತ ಪ್ರತಿಭಟನಾಕಾರ ಮಲ್ಲಿಕಾರ್ಜುನ ಹೇಳಿದ್ದಾರೆ. ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು ಪತ್ರ ಬರೆದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಾವು ಹೋರಾಟದ ಹಾದಿ ಹಿಡಿದಿದ್ದೇವೆ.

ಇದನ್ನೂ ಓದಿ: Ramanagara: ಸೇತುವೆ ಕುಸಿದು ಬಿದ್ದು ತಿಂಗಳುಗಳಾದರೂ ಕ್ಯಾರೆ ಎನ್ನದ ಜನಪ್ರತಿನಿಧಿಗಳು; ಉಸಿರು ಬಿಗಿ ಹಿಡಿದು ಓಡಾಡುತ್ತಿರುವ ಗ್ರಾಮಸ್ಥರು

ನಿತ್ಯ 30 MLD ನೀರು ಅವಳಿ ನಗರಕ್ಕೆ ಬರಬೇಕು. ಆದ್ರೆ ನಿನ್ನೆಯಿಂದ ನೀರು ಪೂರೈಕೆ ಬಂದಾಗಿದೆ. ಈಗ ಅವಳಿ ನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ‌. ಇಷ್ಟೆಲ್ಲಾ ಆದ್ರೂ ಜಿಲ್ಲಾಡಳಿತ, ನಗರಸಭೆ ಮಾತ್ರ ಮೌನವಾಗಿದ್ದು, ಅವಳಿ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಗದಗ ಬೆಟಗೇರಿ ಅವಳಿ ನಗರಕ್ಕೆ ನೀರು ಸರಬರಾಜು ಮಾಡುವ 65 ಕ್ಕೂ ಹೆಚ್ಚು ಸಿಬ್ಬಂದಿಗಳು ಖಾಸಗಿ ಕಂಪನಿ ಮೂಲಕ ನೀರು ಸರಬರಾಜು ಮಾಡ್ತಾಯಿದ್ದಾರೆ. ಆದ್ರೆ, ಆ ಖಾಸಗಿ ಕಂಪನಿಯರು ಸರಿಯಾದ ಸಮಯಕ್ಕೆ ವೇತನ ‌ನೀಡ್ತಾಯಿಲ್ಲ. ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದ್ರೆ, ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಹೋರಾಟ ಮಾಡೋದು ಅನಿವಾರ್ಯವಾಗಿದೆ. ಇನ್ನೂ ಹತ್ತಾರು ವರ್ಷಗಳಿಂದ‌ ಕೆಲಸ ಮಾಡ್ತಾಯಿದ್ರು, ಕನಿಷ್ಟ ವೇತನ ನೀಡ್ತಾಯಿಲ್ಲ, ಪಿಎಫ್ ಹಾಗೂ ಇಎಸ್​ಐ ಸೌಕರ್ಯ ಕೂಡಾ ನೀಡಿಲ್ಲ ಅಂತ ಸಿಬ್ಬಂದಿ ರವಿ ಆರೋಪಿಸಿದ್ದಾರೆ. ಐದು ತಿಂಗಳ ಲಕ್ಷಾಂತರ ರೂಪಾಯಿ ವೇತನ ಬಿಡುಗಡೆ ಮಾಡಿಲ್ಲ, ಹೀಗಾಗಿ ನಮಗೆ ವೇತನ ನೀಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಗದಗ ಬೆಟಗೇರಿ ಅವಳಿ ನಗರದ ಜನರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಇನ್ನಾದ್ರು ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ, ಪಂಪಹೌಸ್ ಸಿಬ್ಬಂದಿಗಳ ಬೇಡಿಕೆ ಈಡೇರಿಸಿ, ಸಮಸ್ಯೆ ಬಗೆ ಹರಿಸುತ್ತಾರಾ ಎನ್ನುವದನ್ನು ಕಾದು ನೋಡಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:07 pm, Tue, 13 December 22

ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್