ಗದಗ ತಾಲೂಕಿನ ಅಸುಂಡಿ ಗ್ರಾಮದ ಶಾಲಾ ಆವರಣಕ್ಕೆ ನುಗ್ಗಿದ ನರಿ

ಗದಗ ತಾಲೂಕಿನ ಅಸುಂಡಿ ಗ್ರಾಮದ ಶಾಲಾ ಆವರಣಕ್ಕೆ ನುಗ್ಗಿದ ನರಿ

TV9 Web
| Updated By: ವಿವೇಕ ಬಿರಾದಾರ

Updated on:Dec 13, 2022 | 7:39 PM

ಗದಗ ಜಿಲ್ಲೆಯ ಗದಗ ತಾಲೂಕಿನ ಅಸುಂಡಿ ಗ್ರಾಮದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗೆ ನರಿ‌ ನುಗ್ಗಿದೆ.

ಗದಗ: ಜಿಲ್ಲೆಯ ಗದಗ (Gadag) ತಾಲೂಕಿನ ಅಸುಂಡಿ ಗ್ರಾಮದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗೆ ನರಿ‌ (Fox) ನುಗ್ಗಿದೆ. ಶಾಲೆ ಗ್ರಾಮದ ಹೊರವಲಯದ ಕಪ್ಪತ್ತಗುಡ್ಡ ಸೆರಗಿನಲ್ಲಿದೆ. ನರಿ ಎಂಟ್ರಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಯಗೊಂಡಿದ್ದರು. ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಶಾಲೆಗೆ ದೌಡಾಯಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಿಂದ ನರಿ ಬಲೆಗೆ ಬಿದ್ದಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.

 

Published on: Dec 13, 2022 06:15 PM