ಚಾಮರಾಜನಗರ: ತಮ್ಮ ನೆಚ್ಚಿನ ಹಳ್ಳಿಕಾರ್ ಹೋರಿಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದ ಯುವ ಜೋಡಿ

ಚಾಮರಾಜನಗರ: ತಮ್ಮ ನೆಚ್ಚಿನ ಹಳ್ಳಿಕಾರ್ ಹೋರಿಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದ ಯುವ ಜೋಡಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 13, 2022 | 7:01 PM

ತಮ್ಮ ನೆಚ್ಚಿನ ಹೋರಿಗಳ ಸಮ್ಮುಖದಲ್ಲೇ ಮಹೇಶ್ವರಿ ಅವರೊಂದಿಗೆ ಹಾರ ವಿನಿಮಯ ಮಾಡಿಕೊಂಡ ಮಹೇಶ್ ನಂತರ ಅವುಗಳೊಂದಿಗೆ ಕೆಮೆರಾಗೆ ಪೋಸ್ ನೀಡಿದರು.

ಚಾಮರಾಜನಗರ: ಹಾಗೆ ನೋಡಿದರೆ ಹಳ್ಳಿಕಾರ್ ತಳಿ ಎತ್ತುಗಳಿಗೆ (Hallikar bulls) ಸೆಲಿಬ್ರಿಟಿ ಸ್ಟೇಟಸ್ ಮೊದಲಿನಿಂದಲೂ ಇದೆ. ಒಂದು ಹಳ್ಳಿಕಾರ್ ಎತ್ತಿನ ಕನಿಷ್ಟವೆಂದರೂ ರೂ 10 ಲಕ್ಷ ಇರುತ್ತದೆ. ಚಾಮರಾಜನಗರದ ಪಣ್ಯದಹುಂಡಿ ಕಲ್ಯಾಣ ಮಂಟಪದಲ್ಲಿ ಮಹೇಶ್ (Mahesh) ಮತ್ತು ಮಹೇಶ್ವರಿ (Maheshwari) ಜೋಡಿ ಮದುವೆ ಸಮಾರಂಭ ಮಂಗಳವಾರ ನಡೆಯಿತು. ಮಹೇಶ್ ಅವರು ಕಟ್ಟಿರುವ ಈ ಎರಡು ಹಳ್ಳಿಕಾರ್ ಎತ್ತುಗಳು ಮದುವೆಯ ವಿಶೇಷ ಅತಿಥಿಗಳು. ತಮ್ಮ ನೆಚ್ಚಿನ ಹೋರಿಗಳ ಸಮ್ಮುಖದಲ್ಲೇ ಮಹೇಶ್ವರಿ ಅವರೊಂದಿಗೆ ಹಾರ ವಿನಿಮಯ ಮಾಡಿಕೊಂಡ ಮಹೇಶ್ ನಂತರ ಅವುಗಳೊಂದಿಗೆ ಕೆಮೆರಾಗೆ ಪೋಸ್ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ