Chamarajanagar: ಯಾರ ಆಡಳಿತದಲ್ಲಿ ಇರದಷ್ಟು ಹಣ ನಮ್ಮ ಸರ್ಕಾರದ ಬೊಕ್ಕಸದಲ್ಲಿದೆ ; ಸಚಿವ ಆರ್. ಅಶೋಕ್
ಚಾಮರಾಜನಗರದಲ್ಲಿ ನಡೆದ ಸಿಎಂ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್ ಯಾವುದೇ ಸರ್ಕಾರದಲ್ಲಿ ಇಲ್ಲದಿರುವಷ್ಟು ಹಣ ನಮ್ಮ ಸರ್ಕಾರದಲ್ಲಿದೆ. ಅಬಕಾರಿ, ಟ್ರಾನ್ಸ್ಪೋರ್ಟ್, ಜಿ ಎಸ್ ಟಿ ಸೇರಿದಂತೆ ಎಲ್ಲಾ ಕಡೆಗಳಿಂದ ತೆರಿಗೆ ಹಣ ಬರುತ್ತಿದೆ ಎಂದಿದ್ದಾರೆ.
ಚಾಮರಾಜನಗರ: ಜಿಲ್ಲೆಯ ಹನೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಯವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೆರಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್ ಮಾತನಾಡಿ, ಎಸ್ಟಿ, ಎಸ್ಸಿ ಮೀಸಲಾತಿಯನ್ನ ಯಾರೂ ಮಾಡಲಿಲ್ಲ. ಜೇನುಗೂಡಿಗೆ ಕಲ್ಲೊಡೆದು ನಮ್ಮ ಸಿಎಂ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಇದರ ಜೊತೆ ಯಾವುದೇ ಸರ್ಕಾರದಲ್ಲಿ ಇಲ್ಲದಷ್ಟು ಹಣ ನಮ್ಮ ಸರ್ಕಾರದ ಬೊಕ್ಕಸದಲ್ಲಿದೆ. ಇದರಿಂದ ಅಭಿವೃದ್ದಿ ಕಾರ್ಯಗಳು ಹೆಚ್ಚಾಗುತ್ತಿದೆ ಎಂದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos