ನೂರಾರು ಕೋಟಿ ಆಸ್ತಿ ಕಂಡವರ ಪಾಲು ಮಾಡಲು ಬಿಜೆಪಿ ಆಡಳಿತದ ನಗರಸಭೆ ಪ್ಲಾನ್?

ಬಿಜೆಪಿ‌ ಆಡಳಿತದ ನಗರಸಭೆ ನಗರಸಭೆ ಆಸ್ತಿ ಶ್ರೀಮಂತರ ಪಾಲು ಮಾಡಲು ಸಂಚು ರೂಪಿಸಿದೆ. ನಾಳೆ ನಡೆಯುವ ಸಾಮಾನ್ಯ ಸಭೆಯಲ್ಲಿ ಖಾಸಗಿ ಮಾಲೀಕರಿಗೆ ಲೀಜ್ ನೀಡಲು ಸಿದ್ಧತೆ ಮಾಡಿಕೊಂಡಿದೆ. ಈ ವಿಷಯ ಅವಳಿ ನಗರದ ಜನ್ರ ಕೋಪಕ್ಕೆ ಕಾರಣವಾಗಿದ್ದು, ಸರ್ಕಾರಿ ಆಸ್ತಿ ಶ್ರೀಮಂತ ಪಾಲು ಮಾಡಿದ್ರೆ ಸುಮ್ಮನಿರಲ್ಲ ಅಂತ ಪ್ರಗತಿಪರ ಸಂಘಟನೆಗಳು ಖಡಕ್ ಎಚ್ಚರಿಕೆ ನೀಡಿವೆ.

ನೂರಾರು ಕೋಟಿ ಆಸ್ತಿ ಕಂಡವರ ಪಾಲು ಮಾಡಲು ಬಿಜೆಪಿ ಆಡಳಿತದ ನಗರಸಭೆ ಪ್ಲಾನ್?
ಗದಗ-ಬೆಟೆಗೇರಿ ನಗರ ಸಭೆ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 29, 2023 | 10:38 PM

ಗದಗ, ಅಕ್ಟೋಬರ್​​ 29: ನಗರದ ಹೃದಯ ಭಾಗದಲ್ಲಿ ನಗರಸಭೆಗೆ ಸೇರಿದ ನೂರಾರು‌ ಕೋಟಿ ಆಸ್ತಿ ಇದೆ. ಈ ಜಾಗ ಲೂಟಿಗೆ ಹಣವಂತರು ನಾಲ್ಕೈದು ವರ್ಷಗಳಿಂದ ಪ್ಲಾನ್ ಮಾಡಿದ್ದಾರೆ. ನಗರಸಭೆ ಆಡಳಿತ ಮಾಡುವರಿಗೆ ಹಣ ಆಮಿಷವೊಡ್ಡಿ ಶತಾಯಗತಾಯ ಲೂಟಿ ಮಾಡಬೇಕು ಅಂದ್ಕೊಂಡಿದ್ರು. ಆ ಮಾಲೀಕರ ಆಸೆ ಈಗ ಚಿಗುರೊಡೆದಿದೆ. ಈಗ ಬಿಜೆಪಿ‌ ಆಡಳಿತದ ನಗರಸಭೆ (municipal corporation) ಆಸ್ತಿ ಶ್ರೀಮಂತರ ಪಾಲು ಮಾಡಲು ಸಂಚು ರೂಪಿಸಿದೆ. ನಾಳೆ ನಡೆಯುವ ಸಾಮಾನ್ಯ ಸಭೆಯಲ್ಲಿ ಖಾಸಗಿ ಮಾಲೀಕರಿಗೆ ಲೀಜ್ ನೀಡಲು ಸಿದ್ಧತೆ ಮಾಡಿಕೊಂಡಿದೆ. ಈ ವಿಷಯ ಅವಳಿ ನಗರದ ಜನ್ರ ಕೋಪಕ್ಕೆ ಕಾರಣವಾಗಿದ್ದು, ಸರ್ಕಾರಿ ಆಸ್ತಿ ಶ್ರೀಮಂತ ಪಾಲು ಮಾಡಿದ್ರೆ ಸುಮ್ಮನಿರಲ್ಲ ಅಂತ ಪ್ರಗತಿಪರ ಸಂಘಟನೆಗಳು ಖಡಕ್ ಎಚ್ಚರಿಕೆ ನೀಡಿವೆ.

ಈ ವಿಶಾಲವಾದ ಜಾಗ ಕಾಣಿಸ್ತಾಯಿರೋದು ಗದಗ ನಗರದ ಹೃದಯ ಭಾಗದಲ್ಲಿ. ಸುಮಾರು 34 ಎಕರೆ ಪ್ರದೇಶದ ಹೊಂದಿದ ಈ ಆಸ್ತಿ ನೂರಾರು ಕೋಟಿ ಬೆಲೆ ಬಾಳುತ್ತೆ. ಗದಗ ನಗರಸಭೆಗೆ ಸೇರಿದೆ. ಈ ಆಸ್ತಿ ಸುಮಾರು 80-90 ವರ್ಷ ಶ್ರೀಮಂತರ ಪಾಲಾಗಿತ್ತು. ಅಂದು ನಗರಸಭೆ ಲೀಜ್ ನೀಡಿತ್ತು. ಲೀಜ್ ಅವಧಿ ಮುಗಿದ್ರು ಅತೀ ಕಡಿಮೆ ಬಾಡಿಗೆ ಹಣ ಪಾವತಿಸಿ ಪ್ರತಿ ತಿಂಗಳ ಲಕ್ಷ ಲಕ್ಷ ಕಮಾಯಿ ಮಾಡ್ತಾಯಿದ್ರು. ಆದ್ರೆ, 2018ರಲ್ಲಿ ಅಂದಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ 34 ಎಕರೆ ಪ್ರದೇಶದಲ್ಲಿದ್ದ 54 ವಕಾರ ಸಾಲ (ಕಟ್ಟಡಗಳು) ಜಿಲ್ಲಾಡಳಿತ ಸಂಪೂರ್ಣ ನೆಲಸಮ ಮಾಡಿ ನಗರಸಭೆ ಆಸ್ತಿ ಸರ್ಕಾರದ ಸುಪರ್ದಿಗೆ ಪಡೆದಿತ್ತು.

ಇದನ್ನೂ ಓದಿ: ಭೀಕರ ಬರಕ್ಕೆ ತತ್ತರಿಸಿದ ರೈತನ ಮೇಲೆ ಬ್ಯಾಂಕ್ ಅಧಿಕಾರಿಗಳ ದರ್ಪ; ಬ್ಯಾಂಕ್​ಗೆ ಕರೆತಂದು ಸಾಲದ ಪತ್ರಕ್ಕೆ ಹೆಬ್ಬಟ್ಟು ಒತ್ತಿಸಿಕೊಂಡರು

ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಈ ಜಾಗದಲ್ಲಿ ಬೃಹತ್ ಮಾಲ್ ಗಳು ನಿರ್ಮಾಣ ಮಾಡಿ ಅವಳಿ ನಗರದ ಅಂದ ಹೆಚ್ಚಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ರು. ಆದ್ರೆ, 2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಈ ಪ್ಲಾನ್ ನೆನೆಗುದಿಗೆ ಬಿದ್ದಿತ್ತು. ಆದ್ರೆ, ನೂರಾರು ಕೋಟಿ ಬೆಲೆ ಬಾಳುವ ನಗರಸಭೆ ಆಸ್ತಿ ಮತ್ತೆ ಕಂಡವರ ಪಾಲು ಮಾಡಲು ಗದಗ-ಬೆಟಗೇರಿ ನಗರಸಭೆಯ ಬಿಜೆಪಿ ಆಡಳಿತ ಪ್ಲಾನ್ ಮಾಡಿದೆಯಂತೆ. ನಾಳೆ ನಡೆಯುವ ಸಾಮಾನ್ಯ ಸಭೆಯಲ್ಲಿ ಈ ಮೊದಲು ಇದ್ದ ಮಾಲೀಕರಿಗೆ ಮತ್ತೆ ಲೀಜ್ ನೀಡಲು ಠರಾವು‌ ಮಾಡಲು‌ ಪ್ಲಾನ್ ಮಾಡಿದೆಯಂತೆ. ಈ ಸುದ್ದಿ ಅವಳಿ ನಗರದಲ್ಲಿ ಹಬ್ಬುತ್ತಿದ್ದಂತೆ ಬಿಜೆಪಿ ನೇತೃತ್ವದ ನಗರಸಭೆ ಆಡಳಿತದ ವಿರುದ್ಧ ಜನ್ರು ಕೆಂಡಕಾರಿದ್ದಾರೆ.

ಅಭಿವೃದ್ಧಿ ಮಾಡಿ ಅಂತ ಅಧಿಕಾರ ಕೊಟ್ರೆ ಸರ್ಕಾರಿ ಆಸ್ತಿ ಕಂಡವ್ರ ಪಾಲು ಮಾಡ್ತಾಯಿದ್ದೀರಾರ ಅಂತ ಛೀ ಥೂ ಅಂತಿದ್ದಾರೆ. ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಕಾಂಗ್ರೆಸ್ ಬಿಜೆಪಿ ಕೆಲ ಸದಸ್ಯರು ಕೂಡ ಈ ನಗರಸಭೆ ಆಸ್ತಿ ಲೂಟಿಗೆ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಬಿಜೆಪಿಯ ಕೆಲ ಸದಸ್ಯರು ಕೂಡ ಅಧ್ಯಕ್ಷೆ, ಉಪಾಧ್ಯಕ್ಷೆ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆಡಳಿತ ಪಕ್ಷದ ಸದಸ್ಯರ ವಿರೋಧ ಮಧ್ಯೆಯೂ ಅಜೆಂಡಾದಲ್ಲಿ ಲೀಜ್ ನೀಡುವ ವಿಷಯ ಇಟ್ಕೊಂಡಿದ್ದಾರಂತೆ. ಹೀಗಾಗಿ ಅವಳಿ ನಗರದ ಪ್ರಗತಿಪರ ಸಂಘಟನೆಗಳು ರೊಚ್ಚಿಗೆದ್ದಿವೆ. ನಾಳೆ ಸಭೆ ನಡೆಯವು ವೇಳೆ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರಿಸಿದ್ದಾರೆ. ಸುಮಾರು 2ಸಾವಿರ ಜನ ಸೇರುವ ಸಾಧ್ಯತೆ ಇದೆ ಅಂತ ಹೋರಾಟಗಾರ ಚಂದ್ರಕಾಂತ ಹೇಳಿದ್ದಾರೆ.

ಖಾಸಗಿ ವ್ಯಕ್ತಿಗಳಿಗೆ ಲೀಜ್ ನೀಡಲು ಆಡಳಿತ ಪಕ್ಷ ಬಿಜೆಪಿಯಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ವಪಕ್ಷದ ಸದಸ್ಯರ ವಿರೋಧ ನಡುವೆಯೂ ಈ ವಿಷಯ ಅಜೆಂಡಾದಲ್ಲಿ ಇಡಲಾಗಿದೆ. ಸರ್ಕಾರಿ ಆಸ್ತಿ ಶ್ರೀಮಂತರ ಪಾಲು ಮಾಡಲು ಲಕ್ಷ ಲಕ್ಷ ಡೀಲ್ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ನಗರಸಭೆ ಆಸ್ತಿ ಮೊದಲು ಇದ್ದ ಮಾಲೀಕರಿಗೆ ಲೀಜ್ ಅವಧಿ ಮುಂದುವರೆಸಲು ಠರಾವು ಮಾಡಲಾಗಿತ್ತು. ಆದ್ರೆ, ಅಂದಿನ ಸರ್ಕಾರ ಇದಕ್ಕೆ ಅವಕಾಶ ನೀಡಲಿಲ್ಲ. ಆದ್ರೂ ಹಠ ಬಿಡದ ಹಣವಂತರು ಪ್ರೈಮ್ ಲೋಕೆಷನ್ ನಲ್ಲಿರೋ ಸರ್ಕಾರ ಜಾಗ ಶತಾಯಗತಾಯ ಪಡೆಯಲೇ ಬೇಕು ಅಂತ ನಿರಂತರ ಪ್ರಯತ್ನ ನಡೆಸಿದ್ದಾರೆ.

ಇದನ್ನೂ ಓದಿ: ಭೀಕರ ಬರಕ್ಕೆ ಗದಗ ಜಿಲ್ಲೆಯ ಜನ ವಿಲವಿಲ: ಹಿಂಗಾರು, ಮುಂಗಾರು ಬೆಳೆಯೂ ಇಲ್ಲದೇ ಕಂಗಾಲು

ಇದು ಅವಳಿ ನಗರದ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ನಗರಸಭೆ ಆಸ್ತಿ ಲೀಜ್ ಕೊಡಬಾರದು. ಸರ್ಕಾರವೇ ಬೃಹತ್ ಮಾಲ್ ನಿರ್ಮಾಣ ಮಾಡಬೇಕು. ಇದ್ರಿಂದ ನಗರಸಭೆಗೆ ಕೋಟ್ಯಾಂತರ ಆದಾಯ ಬರುತ್ತೆ. ಇದ್ರಿಂದ ಅವಳಿ ನಗರದ ಅಭಿವೃದ್ಧಿಗೆ ಅನಕೂಲ ಆಗುತ್ತೆ. ಹೀಗಾಗಿ ಸಚಿವ ಎಚ್ ಕೆ ಪಾಟೀಲ್ರು ಮಧ್ಯ ಪ್ರವೇಶ ಮಾಡಿ ಸರ್ಕಾರದ ಆಸ್ತಿ ಉಳಿಸಬೇಕು ಅಂತ ಹೋರಾಟಗಾರ ಭಾಷಾಸಾಬ್ ಮಲ್ಲಸಮುದ್ರ ಒತ್ತಾಯಿಸಿದ್ದಾರೆ.

ಗದಗ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಹಗರಣ, ಲಫಡಾದಲ್ಲೇ ಸುದ್ದಿಯಲ್ಲಿದೆ. ಬಿಜೆಪಿ ಆಡಳಿತದ ನಗರಸಭೆಗೆ ಬುದ್ಧಿ ಹೇಳುವ ನಾಯಕರು ಗದಗ ಜಿಲ್ಲೆಯಲ್ಲಿ ಇಲ್ಲದಂತಾಗಿದೆ. ಇದ್ರಿಂದ ಗದಗನಲ್ಲಿ ಬಿಜೆಪಿಗೆ ಜನ್ರು ಛೀ ಥೂ ಎನ್ನುವಂತಾಗಿದೆ. ಇನ್ನಾದ್ರೂ ಜಿಲ್ಲೆಯ ಬಿಜೆಪಿ ನಾಯಕ್ರು ನಗರಸಭೆ ಆಡಳಿತಕ್ಕೆ ಬುದ್ಧಿ ಹೇಳುವ ಮೂಲಕ ಸರ್ಕಾರಿ ಆಸ್ತಿ ಉಳಿಸುವ ಕೆಲಸ ಮಾಡುತ್ತೋ ಇಲ್ವೋ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ