ಹುತಾತ್ಮ ಯೋಧನ ಪುತ್ಥಳಿ ನಿರ್ಮಾಣಕ್ಕೆ 10 ವರ್ಷದಿಂದ ಮೀನಮೇಷ, ಮೀಸಲಿಟ್ಟ ಉದ್ಯಾನವನ ಜಾಗ ಅತಿಕ್ರಮಣವಾಗಿದೆ!

| Updated By: ಸಾಧು ಶ್ರೀನಾಥ್​

Updated on: Jul 07, 2023 | 4:10 PM

ಹುತಾತ್ಮ ಯೋಧನ ಸಹೋದರ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ.‌ ಸ್ಥಳೀಯರು ಹುತಾತ್ಮ ಯೋಧನ ಅಂತ್ಯ ಸಂಸ್ಕಾರ ಮಾಡಿದ ಸ್ಥಳದಲ್ಲಿ ತಿಪ್ಪೆ, ಷೆಡ್ ಮತ್ತು ಕಟ್ಟಡವನ್ನು ನಿರ್ಮಾಣ ಮಾಡ್ತಾಯಿದ್ದಾರೆ.

ಹುತಾತ್ಮ ಯೋಧನ ಪುತ್ಥಳಿ ನಿರ್ಮಾಣಕ್ಕೆ 10 ವರ್ಷದಿಂದ ಮೀನಮೇಷ, ಮೀಸಲಿಟ್ಟ ಉದ್ಯಾನವನ ಜಾಗ ಅತಿಕ್ರಮಣವಾಗಿದೆ!
ಹುತಾತ್ಮ ಯೋಧನ ಪುತ್ಥಳಿ ನಿರ್ಮಾಣಕ್ಕೆ 10 ವರ್ಷದಿಂದ ಮೀನಮೇಷ
Follow us on

ಆತ ವೀರಯೋಧ. ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಸೈನಿಕ. ಅಂದು ಜಿಲ್ಲಾಡಳಿತ ಹಾಗೂ ಗ್ರಾಮಸ್ಥರು ಸರಕಾರಿ ಗೌರವದೊಂದಿಗೆ ಆ ಯೋದನ ಅಂತ್ಯಸಂಸ್ಕಾರ ಮಾಡಿದ್ರು. ದೌರ್ಭಾಗ್ಯವೆಂದರೆ ಹತ್ತು ವರ್ಷವೇ ಕಳೆದರೂ ಹುತಾತ್ಮನಿಗಾಗಿ ಪುತ್ಥಳಿ ನಿರ್ಮಾಣ ಹಾಗೂ ಉದ್ಯಾನವನ ಮಾಡ್ತಾಯಿಲ್ಲ. ಹುತಾತ್ಮ ಸೈನಿಕ ಪುತ್ಥಳಿ ಹಾಗೂ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಅತಿಕ್ರಮ ಮಾಡಲಾಗಿದೆ. ಹೀಗಾಗಿ ಹುತಾತ್ಮ ಯೋಧನ (Martyred Indian Army soldier) ಸಹೋದರ ಜಿಲ್ಲಾಡಳಿತ ವಿರುದ್ಧ ರೊಚ್ಚಿಗೆದ್ದಿದ್ದಾನೆ. ಪುತ್ಥಳಿ ಮಾಡಿ, ಇಲ್ಲವಾದರೆ ಪಾರ್ಥಿವ ಶರೀರವನ್ನು ನಮಗೆ ನೀಡಿ ಎಂದು ಸರ್ಕಾರಕ್ಕೆ ಪಟ್ಟು ಹಿಡಿದ್ದಾನೆ. ಹುತಾತ್ಮ ಯೋಧನ ಜಾಗ ಅತಿಕ್ರಮಣ.. ಅತಿಕ್ರಮಣ ಮಾಡಿಕೊಂಡು, ತಿಪ್ಪೆ, ಷೆಡ್ ಹಾಗೂ ಕಟ್ಟಡ ಕಾಮಗಾರಿ ನಡೆದಿದೆ. ಇನ್ನೊಂದೆಡೆ ಗದಗ ಜಿಲ್ಲಾ ಪಂಚಾಯತ್ ಸಿಇಓ ವಿರುದ್ಧ ಮಾಜಿ ಸೈನಿಕರು ಹಾಗೂ ಹುತಾತ್ಮ ಯೋಧನ ಸಹೋದರನ ಆಕ್ರೋಶ.. ಈ ಚಿತ್ರಣ ಕಂಡಿದ್ದು ಗದಗ (Gadag) ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ (Kotumachagi).

ಹುತಾತ್ಮ ಯೋಧನ ಪಾರ್ಥಿವ ಶರೀರ ಅಂತ್ಯಕ್ರಿಯೆ ಮಾಡಿ ಬರೊಬ್ಬರಿ ಹತ್ತು ವರ್ಷವಾಗಿದೆ…! ಜಿಲ್ಲಾಡಳಿತದ ನಿರ್ಲಕ್ಷ್ಯ ವಿರುದ್ಧ ರೊಚ್ಚಿಗೆದ್ದ ಕುಟುಂಬ ಪಾರ್ಥಿವ ಶರೀರ ನೀಡುವಂತೆ ಇದೀಗ ಪಟ್ಟು ಹಿಡಿದಿದೆ…! ಹುತಾತ್ಮ ಯೋಧನ ಸಹೋದರನಿಂದ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನೆಯಾಗಿದೆ..! ಹುತಾತ್ಮ ಯೋಧನ ಪುತ್ಥಳಿಗೆ ಮೀಸಲಿಟ್ಟ ಜಾಗ ಅತಿಕ್ರಮಣವಾಗಿದೆ..! ಅತಿಕ್ರಮಣ ತೆರವು ಮಾಡಿ, ಪುತ್ಥಳಿ ಹಾಗೂ ಉದ್ಯಾನವನ ನಿರ್ಮಾಣ ಮಾಡಿ, ಇಲ್ಲವಾದರೆ ಪಾರ್ಥಿವ ಶರೀರ ನೀಡಿ ಎಂಬ ಸಾತ್ವಕ ಬೇಡಿಕೆ ಜಿಲ್ಲಾಡಳಿತದ ಮುಂದಿದೆ..!

2014 ರಲ್ಲಿ ಕೋಟುಮಚಗಿ ಗ್ರಾಮದ ಯೋಧ ಬಸವರಾಜ್ ರಮಾಣಿ, ಅರುಣಾಚಲ ಪ್ರದೇಶದಲ್ಲಿ ಸೇನಾ ವಾಹನದಲ್ಲಿ ಯೋಧರು ಹೋಗುವಾಗ ಗುಡ್ಡ ಕುಸಿದು ವೀರ ಮರಣ ಹೊಂದಿದ್ದ. ಅಂದು ಸ್ವಗ್ರಾಮ ಜೋಟುಮಚಗಿ ಗ್ರಾಮಕ್ಕೆ ಪ್ರಾರ್ಥಿವ ಶರೀರ ಆಗಮಿಸಿದಾಗ ಗ್ರಾಮ‌ ಪಂಚಾಯತ್ ಹಾಗೂ ಗದಗ ಜಿಲ್ಲಾಡಳಿತ ಸಕಲ ಸರ್ಕಾರಿ ಗೌರವದೊಂದಿಗೆ ಗ್ರಾಮ ಪಂಚಾಯತ್ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಿದರು. ಕೋಟುಮಚಗಿ ಗ್ರಾಮದಲ್ಲಿನ 130/130 ಪೂಟ್ ಜಾಗವನ್ನು ಹುತಾತ್ಮ ಯೋಧನ ಪುತ್ಥಳಿ ಹಾಗೂ ಉದ್ಯಾನವನ ನಿರ್ಮಾಣ ಮಾಡಲು ಗ್ರಾಮ ಪಂಚಾಯತ್ ವತಿಯಿಂದ ಠರಾವು ಪಾಸ್ ಮಾಡಲಾಗಿತ್ತು.

ಆದ್ರೆ, 10 ವರ್ಷ ಕಳೆದ್ರು ಈವರೆಗೆ ಪುತ್ಥಳಿ ಹಾಗೂ ಉದ್ಯಾನವನ ನಿರ್ಮಾಣ ಮಾಡ್ತಾಯಿಲ್ಲಾ. ಅದು ಪಾಳು ಬಿದ್ದಿದೆ. ಈ ಮೂಲಕ ಜಿಲ್ಲಾಡಳಿತ ದೇಶದ ಗಡಿ ಕಾಯ್ದು ವೀರಮರಣ ಹೊಂದಿದನಿಗೆ ಅವಮಾನ ಮಾಡಲಾಗಿದೆ ಅಂತ ಕಿಡಿಕಾರಿದ್ದಾರೆ. ಯೋಧನ ಕುಟುಂಬಸ್ಥರು ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಕಚೇರಿಗೆ ಅಲೆದಾಡಿ ಅವ್ರ ಸಹೋದರ ವಿದ್ಯಾಧರ ರೋಸಿ ಹೋಗಿದ್ದಾನೆ. ಹೀಗಾಗಿ ನಮ್ಮ ಸಹೋದರನ ಪಾರ್ಥಿವ ಶರೀರವನ್ನು ತೆಗೆದು ನಮಗೆ ನೀಡಿ, ನಾವು ನಮ್ಮ ಜಾಗದಲ್ಲಿ ಮತ್ತೊಮ್ಮೆ ಅಂತ್ಯ ಸಂಸ್ಕಾರ ಮಾಡಿ, ಪುತ್ಥಳಿ ನಿರ್ಮಾಣ ಮಾಡಿಕೊಳ್ಳುತ್ತೇವೆ ಎಂದು ಪಟ್ಡು ಹಿಡಿದಿದ್ದಾರೆ.

ಇನ್ನು ಹುತಾತ್ಮ ಯೋಧನ ಸಹೋದರ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ.‌ ಸ್ಥಳೀಯರು ಹುತಾತ್ಮ ಯೋಧನ ಅಂತ್ಯ ಸಂಸ್ಕಾರ ಮಾಡಿದ ಸ್ಥಳದಲ್ಲಿ ತಿಪ್ಪೆ, ಷೆಡ್ ಮತ್ತು ಕಟ್ಟಡವನ್ನು ನಿರ್ಮಾಣ ಮಾಡ್ತಾಯಿದ್ದಾರೆ. ಹೀಗಾಗಿ ಮಾಜಿ ಸೈನಿಕರ ಸಂಘದ ಸದಸ್ಯರು ಹುತಾತ್ಮ ಯೋದನ ಸಹೋದರನಿಗೆ ಸಾಥ್ ನೀಡಿದ್ದಾರೆ. ಗದಗ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಅವರನ್ನು ತರಾಟೆಗೆ ತೆಗೆದುಕೊಂಡು, ಇಷ್ಟೊಂದು ಬಾರಿ ಮನವಿ ಮಾಡಿದರೂ ನಿಮ್ಮ ಸಿಬ್ಬಂದಿ ಕೇರ್ ಮಾಡ್ತಾಯಿಲ್ಲಾ, ನೀವು ಕೂಡ ಸ್ಪಂದಿಸಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಮೇಡಂ ಅವ್ರನ್ನು ಕೇಳಿದ್ರೆ, ಕೂಡಲೇ ಸ್ಥಳ ಪರಿಶೀಲನೆ ಮಾಡಲು ಸಿಬ್ಬಂದಿಗೆ ಹೇಳುತ್ತೇನೆ, ನಿರ್ಲಕ್ಷ್ಯ ಮಾಡಿದವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳುತ್ತೇವೆ ಅಂತಾ ತಿಳಿಸಿದ್ದಾರೆ.