AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ ಪೀಡಿತ ತಾಲೂಕಿನಿಂದ ಮುಂಡರಗಿ ಕೈ ಬಿಟ್ಟಿದ್ದಕ್ಕೆ ಆಕ್ರೋಶ: ಹೋರಾಟದ ಎಚ್ಚರಿಕೆ ನೀಡಿದ ರೈತರು

ಅಕ್ಷರಶಃ ಈ ಬಾರಿ ಗದಗ ಜಿಲ್ಲೆ ಬರದಿಂದ ತತ್ತರಿಸಿ ಹೋಗಿದೆ. ಮುಂಗಾರು ಹಂಗಾಮಿನಲ್ಲಿ ಮಳೆ ಸಕಾಲಕ್ಕೆ ಆಗದೆ ಬೆಳೆದ ಬೆಳೆಗಳು ಸರ್ವ ನಾಶವಾಗಿವೆ. ಹೀಗಾಗಿ ಗದಗ ಜಿಲ್ಲೆ ಏಳು ತಾಲೂಕಿನ ಪೈಕಿ ಆರು ತಾಲೂಗಳನ್ನು ಬರ ಪೀಡಿತ ತಾಲೂಕು ಅಂತ ಸರ್ಕಾರ ಘೋಷಣೆ ಮಾಡಿದೆ. ಆದರೆ ಜಿಲ್ಲೆಯ ಮುಂಡರಗಿ ತಾಲೂಕನ್ನು ಮಾತ್ರ ಕೈಬಿಡಲಾಗಿದೆ. ಹೀಗಾಗಿ ಮುಂಡರಗಿ ತಾಲೂಕಿನ ರೈತರು ಕಂಗಾಲಾಗಿದ್ದಾರೆ.

ಬರ ಪೀಡಿತ ತಾಲೂಕಿನಿಂದ ಮುಂಡರಗಿ ಕೈ ಬಿಟ್ಟಿದ್ದಕ್ಕೆ ಆಕ್ರೋಶ: ಹೋರಾಟದ ಎಚ್ಚರಿಕೆ ನೀಡಿದ ರೈತರು
ರೈತರ ಆಕ್ರೋಶ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 16, 2023 | 9:38 PM

Share

ಗದಗ, ಸೆಪ್ಟೆಂಬರ್​ 16: ಮಳೆ ಇಲ್ಲದೆ ಅನ್ನದಾತರು (Farmers) ಭೀಕರ ಬರಗಾಲ ಎದುರಿಸುತ್ತಿದ್ದಾರೆ‌. ರೈತರ ಒತ್ತಾಯಕ್ಕೆ ಮಣಿದ ಸರ್ಕಾರ ಬರ ಪೀಡಿತ ತಾಲೂಗಳನ್ನು ಘೋಷಣೆ ಮಾಡಿದೆ. ಆದರೆ ಬರ ಆವರಿಸಿದರು ಕೂಡ ಬರ ಪೀಡಿತ ಪಟ್ಟಿಯಿಂದ ಈ ತಾಲೂಕು ಕೈ ಬಿಡಲಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರು ಹೋರಾಟ ಕಹಳೆ ಊದಿದ್ದಾರೆ. ನಮ್ಮ ತಾಲೂಕನ್ನು ಬರ ಪೀಡಿತ ತಾಲೂಕು ಅಂತಾ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಕ್ಷರಶಃ ಈ ಬಾರಿ ಗದಗ ಜಿಲ್ಲೆ ಬರದಿಂದ ತತ್ತರಿಸಿ ಹೋಗಿದೆ. ಮುಂಗಾರು ಹಂಗಾಮಿನಲ್ಲಿ ಮಳೆ ಸಕಾಲಕ್ಕೆ ಆಗದೆ ಬೆಳೆದ ಬೆಳೆಗಳು ಸರ್ವ ನಾಶವಾಗಿವೆ. ಹೀಗಾಗಿ ಗದಗ ಜಿಲ್ಲೆ ಏಳು ತಾಲೂಕಿನ ಪೈಕಿ ಆರು ತಾಲೂಗಳನ್ನು ಬರ ಪೀಡಿತ ತಾಲೂಕು ಅಂತ ಸರ್ಕಾರ ಘೋಷಣೆ ಮಾಡಿದೆ. ಆದರೆ ಜಿಲ್ಲೆಯ ಮುಂಡರಗಿ ತಾಲೂಕನ್ನು ಮಾತ್ರ ಕೈಬಿಡಲಾಗಿದೆ. ಹೀಗಾಗಿ ಮುಂಡರಗಿ ತಾಲೂಕಿನ ರೈತರು ಅಕ್ಷರಶಃ ಕಂಕಾಲಾಗಿದ್ದಾರೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ನೂರಾರು ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ನಮಗೆ ಅನ್ಯಾಯ ಮಾಡಿದೆ ಅಂತ ಕೆಂಡಕಾರಿದ್ದಾರೆ. ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ಹರಿಯುವದರಿಂದ ಹಾಗೂ ತೇವಾಂಶ ಹೆಚ್ಚಿಗೆ ಇರುವದರಿಂದ ನಮ್ಮ ತಾಲೂಕು ಕೈ ಬಿಟ್ಟಿದ್ದಾರೆ. ಆದರೆ ತುಂಗಭದ್ರಾ ನದಿ ತಡದಲ್ಲಿ ಕೆಲವು ಗ್ರಾಮದ ರೈತರು ಮಾತ್ರ ನೀರಾವರಿ ಮಾಡುತ್ತಾರೆ.

ಇದನ್ನೂ ಓದಿ: ಗದಗ: ಶಿರಹಟ್ಟಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಮಸ್ಯೆ ಒಂದಾ ಎರಡಾ?

ನಾವು ಒಣ ಬೇಸಾಯ ಮಾಡುತ್ತೇವೆ. ನಮ್ಮಲ್ಲಿ ಮಳೆಯಾಗದೆ ಬೆಳೆಗಳನ್ನು ಬೆಳೆದಿಲ್ಲ. ಸಾವಿರ ಅಡಿ ಬೊರ್ ವೆಲ್ ಕೊರೆಸಿದ್ರೂ ಹನಿ ನೀರು ಬರೊಲ್ಲ. ಹೀಗಾಗಿ ಬೆಳೆದ ಬೆಳೆಗಳು ಒಣಗಿ ಹೋಗಿವೆ. ಹೀಗಾಗಿ ಇಡೀ ಜಮೀನು ಬರಗಾಲದಿಂದ ಒಣಗಿ ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಅಧಿಕಾರಿಗಳು ಜಮೀನಿಗೆ ಬಂದು ಸರ್ವೆ ಮಾಡಿಲ್ಲ. ಈವರು ಹೇಗೆ ಬರ ಪೀಡಿತ ತಾಲೂಕು ಅಲ್ಲಾ ಅಂತಾ ಘೋಷಣೆ ಮಾಡ್ತಾರೆ ಎಂದು ಹಿರಿಯ ರೈತ ಸೋಮನಗೌಡ ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಎಲ್ಲ ರೈತರು ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಮುಂಗಾರು ಬೆಳೆಗಳಾದ ಹೆಸರು, ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ಮಳೆ ಇಲ್ಲದೇ ಒಣಗಿ ಹೋಗಿದ್ದವರು, ಹೀಗಾಗಿ ಎಲ್ಲರೂ ನಾಶ ಮಾಡಿದ್ದೇವೆ. ಹೀಗಿರುವಾಗಿ ಬರ ಇಲ್ಲಾ ಅಂತ ಯಾವ ಆಧಾರದಲ್ಲಿ ಅಧಿಕಾರಿಗಳು, ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದೆ ಅಂತ ರೈತರು ಪ್ರಶ್ನೆ ಮಾಡಿದ್ದಾರೆ. ನಮ್ಮ ಮುಂಡರಗಿ ತಾಲೂಕು ಅನಾಥವಾಗಿದ್ದು, ಇಬ್ಬರು ಶಾಸರಿಗೆ ಅರ್ಧ ಬಾಗ ಬರುತ್ತದೆ.

ಇದನ್ನೂ ಓದಿ: ಸರ್ಕಾರದ ನಿಯಮ ಗಾಳಿಗೆ ತೂರಿ ಲಕ್ಷ ಲಕ್ಷ ಲೂಟಿ, ಗದಗ-ಬೆಟಗೇರಿ ನಗರಸಭೆ ಬ್ರಹ್ಮಾಂಡ ಭ್ರಷ್ಟಾಚಾರ ಗೊತ್ತಿದ್ರೂ ಜಿಲ್ಲಾಡಳಿತ ಗಪ್ ಚುಪ್!

ರೋಣ ಕ್ಷೇತ್ರಕ್ಕೆ ಕೆಲ ಹಳ್ಳಿಗಳು, ಶಿರಹಟ್ಟಿ ತಾಲೂಕಿಗೆ ಕೆಲ ಹಳ್ಳಿಗಳು ಬರೋದ್ರಿಂದ ನಾವು ಅನಾಥವಾಗಿದ್ದೇವೆ. ನಮ್ಮ ಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ರು, ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್​ರಿಗೆ ನಮ್ಮ ಭಾಗದ ಹಳ್ಳಿಗಳ ಸ್ಥಿತಿ ಏನೂ ಅನ್ನೋದು ಗೋತ್ತಿದೆ. ಆದರೂ ಬರಪೀಡಿತ ತಾಲೂಕು ಘೋಷಣೆ ಆಗಿಲ್ಲ ಅಂತ ಶಾಸಕರು, ಸಚಿವರ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ಬಗ್ಗೆ ಅವರಿಗೆ ಕಾಳಜ ಇಲ್ಲಾ ಎಂದು ವಾಗ್ದಾಳಿ ನಡೆಸಿದ್ರು. ರೋಣ ಶಾಸಕ ಜಿ ಎಸ್ ಪಾಟೀಲ್ ಅವರ ಗಮನಕ್ಕೆ ತಂದಿದ್ದೇವೆ, ಆದ್ರೂ ಕೂಡಾ ಮುಂಡರಗಿ ತಾಲೂಕನ್ನು ಬರ ಪೀಡಿತ ತಾಲೂಕಿನಿಂದ ಕೈಬಿಟ್ಟಿದ್ದಾರೆ. ತೇವಾಂಶ ಹೆಚ್ವು ಇದೆ ಎಂದು ಕೈ ಬಿಟ್ಟಿದ್ದಾರೆ ಎಂದು ರೈತ ಮಲ್ಲಿಕಾರ್ಜುನ ಕಿಡಿ ಕಾರಿದ್ದಾರೆ.

ಸರ್ಕಾರದ ಸರಿಯಾಗಿ ಸರ್ವೆ ಮಾಡಬೇಕು. ನಮ್ಮೂರಿಗೆ ಬಂದು ವಾಸ್ತವಿಕ ಸ್ಥಿತಿ ನೋಡಿ ವರದಿ ಮಾಡಿಕೊಂಡು, ಬರ ಪೀಡಿತ ತಾಲೂಕು ಅಂತಾ ಘೋಷಣೆ ಮಾಡಬೇಕು.‌ ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ, ಮುಂಡರಗಿ ಬಂದ್, ಹೆದ್ದಾರಿ ಬಂದ್ ಮಾಡಿ ಹೋರಾಟಕ್ಕೆ ಇಳಿಯುತ್ತೇವೆ ಅಂತ ರೈತರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ