AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ; ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಗಂಭೀರ ಆರೋಪ

ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಅವರು ನಿನ್ನೆ(ಏ.17) ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ಎಸಿ ಕಚೇರಿಗೆ ಹೋಗಿದ್ದ ವೇಳೆ, ದುಷ್ಕರ್ಮಿಗಳು ನನ್ನ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನನ್ನ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ; ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಗಂಭೀರ ಆರೋಪ
ಅನಿಲ್​ ಮೆಣಸಿನಕಾಯಿ
ಕಿರಣ್ ಹನುಮಂತ್​ ಮಾದಾರ್
|

Updated on: Apr 18, 2023 | 9:30 AM

Share

ಗದಗ: ‘ನಾನು ನಿನ್ನೆ(.17) ಸಾಂಕೇತಿಕವಾಗಿ ನಾಮಪತ್ರ( (Nomination) ಸಲ್ಲಿಸಲು ಎಸಿ ಕಚೇರಿಗೆ ಹೋಗಿದ್ದೇ, ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ ಪಾಟೀಲ್(H. K. Patil) ಕೂಡ ಒಳಗೆ ಬಂದ್ರು, ಶುಭ ಕೋರಿದೇವು. ಈ ವೇಳೆ ನಾಮಪತ್ರ ಸಲ್ಲಿಸಿ ವಾಪಸ್ ಬರುವಾಗ ಕಾಂಗ್ರೆಸ್ ಮೆರವಣಿಗೆ ಬಂತು. ನನ್ನ ಕಾರ್ ಮುಂದೆ ಬಂದು ಘೋಷಣೆ ಕೂಗಿದ್ರು, ನಾನು ಗ್ಲಾಸ್ ಇಳಿಸಿ ಯಾಕೆ ಎಂದು ಪ್ರಶ್ನೆ ಮಾಡಿದೆ, ನನ್ನ ಕಾರ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಜ್ಜಿಗೆ‌ ಕುಡಿದು‌ ಉಗುಳಿದ್ರು, ಆಗ ಯಾರೋ ನನ್ನ ಕಾರ್ ಮೇಲೆ ಚಪ್ಪಲಿ, ಕಲ್ಲು ಎಸೆದ್ರು. ಕೂಡಲೇ ನಾನು ಕಾರ್​ನಿಂದ ಇಳಿದು ಹೊರ ಬಂದೇ ಎಂದು ಅನಿಲ್ ಮೆಣಸಿನಕಾಯಿ  (Anil Menasinakai) ಹೇಳಿದ್ದಾರೆ.

ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ

ಜಿಲ್ಲೆಯಲ್ಲಿ ರೌಡಿಶೀಟರ್​ಗಳ ವರ್ತನೆ‌ ಮಿತಿಮೀರಿದ್ದು, ಅಲ್ಲೇ ಪಕ್ಕದಲ್ಲಿ ಪೆಟ್ರೋಲ್ ಬಂಕ್ ಇತ್ತು. ಪೆಟ್ರೊಲ್ ತಂದು ಕಾರ್ ಸುಟ್ಟು‌ಬಿಡಿ ಎಂದು ಹೇಳಿದ್ರು, ಅಲ್ಲೇ ಇದ್ದ ನಮ್ಮ ಕಾರ್ಯಕರ್ತ ಪೆಟ್ರೊಲ್ ಬಾಟಲ್ ಕಸಿದುಕೊಂಡ. ಶಾಸಕ ಎಚ್ ಕೆ ಪಾಟೀಲ್ ಸೋಲಿನ ಭೀತಿಯಿಂದ ಈ ರೀತಿ‌ ಮಾಡುತ್ತಿದ್ದಾರೆ. ಪ್ರಾಮಾಣಿಕ, ಪಾರದರ್ಶಕ ಚುನಾವಣೆಗೆ ಎಚ್ ಕೆ ಪಾಟೀಲರಿಗೆ ಮನವಿ‌ ಮಾಡಿದ್ದೇವೆ. ಕಳೆದ ಬಾರಿ ಚುನಾವಣೆಯಲ್ಲೂ ಹುಲಕೋಟಿ ಗ್ರಾಮದಲ್ಲಿ ಕರಪತ್ರ ಹಂಚಲು ಬಿಡಲಿಲ್ಲ. ಬಿಜೆಪಿ ಶಕ್ತಿಯನ್ನ ಕಾಂಗ್ರೆಸ್ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಎಚ್​.ಕೆ ಪಾಟೀಲ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:Kichcha Sudeep: ಗೊಂದಲದಲ್ಲಿದೆಯಾ ಸುದೀಪ್ ಕ್ಯಾಂಪೇನ್ ಪ್ಲಾನ್? ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ಇಳಿಯೋದು ಯಾವಾಗ?

ನನ್ನ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಾಗ ಎಚ್ ಕೆ ಪಾಟೀಲ್ ಎಸಿ ಕಚೇರಿಯಲ್ಲೇ ಇದ್ರು ಘಟನೆ ತಡೆಯಬಹುದಿತ್ತು. ಆದರೆ ಗಲಾಟೆ ತಡೆಯುವ ಕೆಲಸ ಮಾಡಲಿಲ್ಲಿ. ಇದರ ಉದ್ದೇಶ ನನ್ನ ಕಾರ್ ಸುಟ್ಟರೆ ನನ್ನ ಸ್ಥಿತಿ ಏನಾಗುತ್ತಿತ್ತು. ಈ ದಬ್ಬಾಳಿಕೆ ನಡೆಯಲ್ಲ ಎಚ್ಚರಿಕೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಿನ್ನೆ(.17)ದುಷ್ಕರ್ಮಿಗಳಿಂದ ಅನಿಲ್ ಮೆಣಸಿನಕಾಯಿ ಕಾರಿನ ಮೇಲೆ ಕಲ್ಲುತೂರಾಟ

ನಿನ್ನೆ(.17)ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಕಾರಿನ ಮೇಲೆ ದುಷ್ಕರ್ಮಿಗಳಿಂದ ಕಲ್ಲುತೂರಾಟ ಮಾಡಿದ್ದರು. ಅನಿಲ್ ಮೆಣಸಿನಕಾಯಿ ಅವರು ಗದಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ನಾಮಪತ್ರಸಲ್ಲಿಸಿ ಹೊರ ಬರುತ್ತಿದ್ದ ವೇಳೆ ಕಾರಿನ ಮೇಲೆ ಕಲ್ಲುತೂರಾಟ ಮಾಡಿದ್ದರು. ಈ ವೇಳೆ ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ರೋಡ್​ ಶೋ ಮೂಲಕ H.K.ಪಾಟೀಲ್​ ಕೂಡ ನಾಮಪತ್ರ ಸಲ್ಲಿಕೆಗೆ ಬಂದಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಅನಿಲ್‌‌‌‌ ಜೊತೆಗೆ ಮಾತಿನ ಚಕಮಕಿ ಉಂಟಾಗಿ, ಪರಿಸ್ಥಿತಿ ತಿಳಿಗೊಳಿಸಲು ಗದಗ ಪೊಲೀಸರು ಪರದಾಟ ನಡೆಸಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ