ಕೃಷಿ ಸಚಿವ ಬಿ.ಸಿ. ಪಾಟೀಲ್ ಕ್ಷೇತ್ರದ ರೈತರಿಗೆ ಮಹಾ ಮೋಸ; ಲಕ್ಷಾಂತರ ಮೌಲ್ಯದ ಟೊಮೆಟೊ ಸೀಡ್ಸ್ ಖರೀದಿಸಿ ರೈತರಿಗೆ ಹಣ ನೀಡದೆ ಎಸ್ಕೇಪ್ ಆದ ಕಂಪನಿ ಮಾಲೀಕರು

| Updated By: ಆಯೇಷಾ ಬಾನು

Updated on: Jun 23, 2022 | 7:06 PM

ಹಣ ವಸೂಲಿಗಾಗಿ ಸೋಮನಾಥ್ ಕ್ರಾಪ್ ಸೈನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ವಿರುದ್ಧ ರೈತರು ಹೋರಾಟ ನಡೆಸಿದ್ದಾರೆ. ಬೀಜ ನೀಡಿದ ದಾಖಲೆ ಪ್ರದರ್ಶನ ಮಾಡಿ ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅನ್ನದಾತರ ಹಣಕ್ಕಾಗಿ ಬಂದ್ರೆ ಕಂಪನಿ ಮಾಲೀಕರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್ ಕ್ಷೇತ್ರದ ರೈತರಿಗೆ ಮಹಾ ಮೋಸ; ಲಕ್ಷಾಂತರ ಮೌಲ್ಯದ ಟೊಮೆಟೊ ಸೀಡ್ಸ್ ಖರೀದಿಸಿ ರೈತರಿಗೆ ಹಣ ನೀಡದೆ ಎಸ್ಕೇಪ್ ಆದ ಕಂಪನಿ ಮಾಲೀಕರು
ಧರಣಿ ಕುಳಿತ ರೈತರು
Follow us on

ಗದಗ: ಅನ್ನದಾತರ ಹಣೆ ಬರಹವೇ ಸರಿಯಿಲ್ವಂತೆ ಕಾಣ್ತಾಯಿದೆ. ಬೆಳೆ ಹಾನಿಯಾದ್ರೂ ಕಷ್ಟ. ಉತ್ತಮ ಬೆಳೆ ಬಂದ್ರೂ ಇನ್ನೂ ಕಷ್ಟ ಎನ್ನುವಂತಾಗಿದೆ. ಟೊಮೆಟೊ ಬೀಜೋತ್ಪಾದನೆ(Tomato Seeds) ಮಾಡಿದ್ರೆ ಒಳ್ಳೆಯ ಲಾಭ ಸಿಗುತ್ತೆ ಅಂದ್ಕೊಂಡು ಕಷ್ಟಪಟ್ಟು ಬೆಳೆದಿದ್ದಾರೆ. ಆದ್ರೆ, ಸೀಡ್ಸ್ ಪಡೆದ ಸೋಮನಾಥ್ ಸೀಡ್ಸ್ ಕಂಪನಿ(Somanath Seeds Company) ಅನ್ನದಾತರಿಗೆ ಮಹಾ ಮೋಸ ಮಾಡಿದೆ. ಹೀಗಾಗಿ ರೈತರು ಮಧ್ಯವರ್ತಿಯನ್ನು ಹಿಡಿದು ತಂದು ಹಣಕ್ಕಾಗಿ ಕಂಪನಿ ಎದರು ಧರಣಿ ನಡೆಸಿದ್ದಾರೆ. ಆದ್ರೆ, ಕಂಪನಿ ಮಾಲೀಕ್ರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾರೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣ ವಸೂಲಿಗಾಗಿ ಸೋಮನಾಥ್ ಕ್ರಾಪ್ ಸೈನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ವಿರುದ್ಧ ರೈತರು ಹೋರಾಟ ನಡೆಸಿದ್ದಾರೆ. ಬೀಜ ನೀಡಿದ ದಾಖಲೆ ಪ್ರದರ್ಶನ ಮಾಡಿ ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅನ್ನದಾತರ ಹಣಕ್ಕಾಗಿ ಬಂದ್ರೆ ಕಂಪನಿ ಮಾಲೀಕರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ. ಗದಗ ನಗರದ ನರಸಾಪೂರ‌ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಇರೋ ಸೋಮನಾಥ್ ಕ್ರಾಪ್ ಸೈನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮಾಲೀಕರಾದ ವಾಗೀಶಗೌಡ ಪಾಟೀಲ್, ಪ್ರವೀಣಗೌಡ ಪಾಟೀಲ್ ಸಹೋದರರ ವಿರುದ್ಧ ಹಾವೇರಿ ಜಿಲ್ಲೆಯ ರೈತರು ಗಂಭೀರ ಆರೋಪ ಮಾಡಿದ್ದಾರೆ.

ಸೋಮನಾಥ್ ಕ್ರಾಪ್ ಸೈನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್

ಏಜೆಂಟ್ ಮಲ್ಲನಗೌಡ ಮರೆಕನ್ನವರ ಮೂಲಕ ಗದಗ ಜಿಲ್ಲೆಯ ಸೋಮನಾಥ್ ಕ್ರಾಪ್ ಸೈನ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ರೈತರು ಟೊಮೆಟೊ ಬೀಜ ಬೆಳೆದು ನೀಡಿದ್ದಾರೆ. ಆರಂಭದಲ್ಲಿ ರೈತರಿಗೆ ಚೆನ್ನಾಗಿ ಹಣ ನೀಡಿ ನಂಬಿಸಿದ್ದಾರೆ. ಆದ್ರೆ, ಕಳೆದ ಎರಡ್ಮೂರು ವರ್ಷಗಳಿಂದ ಲಕ್ಷಾಂತರ ಮೌಲ್ಯದ ಟೊಮೆಟೊ ಬೀಜ ನೀಡಿದ ರೈತರಿಗೆ ಹಣ ನೀಡದೇ ಸತಾಯಿಸುತ್ತಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ. ನಂಬಿಸಿ ನಮಗೆ ಕಂಪನಿ ಸಹೋದರರು ಮಹಾ ಮೋಸ ಮಾಡಿದ್ದಾರೆ ಅಂತ ಕಿಡಿಕಾರಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆ ಗಮನಕ್ಕೆ ಬಂದ್ರೂ ಪ್ರಯೋಜವಾಗಿಲ್ಲ ಅಂತ ಅನ್ನದಾತ ಶಿವಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ, ರೈಲು ಪ್ರಯಾಣ ಸುಗಮವಾಗಿಸಲು ಭಾರತೀಯ ರೈಲ್ವೆ ತಂತ್ರಜ್ಞಾನವನ್ನು ಹೇಗೆ ಬಳಸುತ್ತಿದೆ ಎಂಬುದು ತಿಳಿದಿದೆಯೇ?

ಲಕ್ಷಾಂತರ ಸಾಲಸೋಲ ಮಾಡಿ ಬೆಳೆದು ಸೀಡ್ಸ್ ಕಂಪನಿಗೆ ಬೀಜ ನೀಡಿದ್ದ ರೈತರು ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಹೀಗಾಗಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ, ಕುಂಚೂರ, ಲಿಂಗದೇವರಕೊಪ್ಪ, ರಾಣೆಬೆಣ್ಣೂರ ತಾಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮದ ರೈತರು ಆಗಮಿಸಿದ ಕಂಪನಿ ಎದುರು ಧರಣಿ ಕುಳಿತಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಕ್ಷೇತ್ರದ ರೈತರಿಗೆ ಮೋಸ ಮಾಡಿ ಸೋಮನಾಥ್ ಸೀಡ್ಸ್ ಕಂಪನಿ ಮಾಲೀಕರು ಎಸ್ಕೇಪ್ ಆಗಿದ್ದಾರೆ. ಈಗ ಮಧ್ಯವರ್ತಿ ಮಲ್ಲನಗೌಡ ವಾಹನದಲ್ಲಿ ಹಾಕೊಂಡು ಬಂದು ಗದಗ ಸೀಡ್ಸ್ ಕಂಪನಿ ಬಳಿ ಧರಣಿ ಮಾಡ್ತಾಯಿದ್ದಾರೆ. ಕಂಪನಿ ಮಾಡಿದ ಮಹಾಮೋಸಕ್ಕೆ ಮಧ್ಯವರ್ತಿ ಒದ್ದಾಡುತ್ತಿದ್ದಾನೆ. ನಾನು ಸುಮಾರು ವರ್ಷಗಳಿಂದ ಮಧ್ಯವರ್ತಿಯಾಗಿ ಕೆಲಸ ಮಾಡ್ತಾಯಿದ್ದೆ. ವಾಗೀಶಗೌಡ ಪಾಟೀಲ್ ಜೊತೆ ಡೀಲ್ ಮಾಡಿದ್ದೇವೆ. ಆದ್ರೆ, ಸರಿಯಾಗಿ ಹಣ ನೀಡ್ತಾಯಿಲ್ಲ. ಆದ್ರೆ, ರೈತರು ನಾನೇ ನುಂಗಿದ್ದೇನೆ ಅಂತ ದುಂಬಾಲು ಬಿದ್ರು. ಆದ್ರೆ, ರೈತರ ಸಮೇತ ಇಲ್ಲಿಗೆ ಬಂದಿದ್ದೇನೆ. ಅದ್ರೆ, ಫೋನ್ ರೀಸಿವ್ ಮಾಡ್ತಾಯಿಲ್ಲ. ಈಗ ನಾನು ರೈತರ ಕೈಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ ಅಂತ ಮಧ್ಯವರ್ತಿ ಮಲ್ಲನಗೌಡ ಹೇಳ್ತಾಯಿದ್ದಾನೆ.

ಗೋಡಾನ್ನಲ್ಲಿ ರೈತರಿಂದ ಖರೀದಿ ಮಾಡಿದ ಅಪಾರ ಪ್ರಮಾಣದ ಸೀಡ್ಸ್

ಬೃಹತ್ ಗೋಡಾನ್ನಲ್ಲಿ ರೈತರಿಂದ ಖರೀದಿ ಮಾಡಿದ ಅಪಾರ ಪ್ರಮಾಣದ ಸೀಡ್ಸ್ ಇದೆ. ಆದ್ರೆ, ರೈತರ ಬೆವರಿನಲ್ಲಿ ಬೃಹತ್ ಕಂಪನಿ ಕಟ್ಟಡ ನಿರ್ಮಾಣ ಮಾಡಿ ನಮಗೆ ಮೋಸ ಮಾಡಿದ್ದಾನೆ ಅಂತ ರೈತರು ಆರೋಪಿಸಿದ್ದಾರೆ. ಇನ್ನೂ ಅದೆಷ್ಟು ರೈತರಿಗೆ ಸೋಮನಾಥ್ ಸೀಡ್ಸ್ ಕಂಪನಿ ಪಂಗನಾಮ ಹಾಕಿದೆಯೋ ಗೊತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮೋಸ ಮಾಡುವ ಇಂಥ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ಹಣ ಕೊಡಿಸುವ ಕೆಲಸ ಮಾಡಬೇಕಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

Published On - 7:06 pm, Thu, 23 June 22