ಐತಿಹಾಸಿಕ ಕೆರೆ ಅಂಗಳದಲ್ಲಿ ಬೃಹತ್ ಕಟ್ಟಡಗಳ ನಿರ್ಮಿಸಿದ ಪ್ರಭಾವಿಗಳು, ಕೋರ್ಟ್ ಆದೇಶದ ನಂತರ ಬುಲ್ಡೋಜರ್ ಭಯಕ್ಕೆ ತುತ್ತಾಗಿದ್ದಾರೆ!
ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗದಲ್ಲಿ ಐತಿಹಾಸಿಕ ಭೀಷ್ಮ ಕೆರೆ ಇದ್ದು 103 ಎಕರೆ ವಿಸ್ತೀರ್ಣ ಹೊಂದಿರೋ ಕೆರೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಆ ಜಾಗದಲ್ಲಿ ಬೃಹತ್ ಕಟ್ಟಡಗಳು ತಲೆ ಎತ್ತಿ ನಿಂತಿವೆ. 103 ಎಕರೆ ಪ್ರದೇಶ ಹೊಂದಿರೋ ಈ ಕೆರೆ ಈಗ ಕೇವಲ 33 ಎಕರೆ ಪ್ರದೇಶದಷ್ಟು ಮಾತ್ರ ಉಳಿದಿದ್ದು, ಕಂಡವರು ಅಕ್ರಮವಾಗಿ ಕಬಳಿಕೆ ಮಾಡಿಕೊಂಡಿದ್ದಾರೆ.
ಗದಗ: ಐತಿಹಾಸಿಕ ಭೀಷ್ಮ ಕೆರೆಯ ಅಂಗಳವನ್ನು ಪ್ರಭಾವಿಗಳು ನುಂಗಿ ನೀರು ಕುಡಿದಿದ್ದಾರೆ. ಭೀಷ್ಮ ಕೆರೆ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದ್ರೆ ಈಗ ಒತ್ತುವರಿ ಮಾಡಿಕೊಂಡವರಿಗೆ ಬುಲ್ಡೋಜರ್ ಭಯ ಶುರುವಾಗಿದೆ. ಕೋರ್ಟ್ ಆದೇಶದಂತೆ ತೆರವು ಮಾಡಬೇಕು ಎಂದು ನಗರಸಭೆ ನೋಟಿಸ್ ನೀಡಿದ್ದು, ಒತ್ತುವರಿ ಮಾಡಿಕೊಂಡ ಕುಳಗಳಿಗೆ ಢವ ಢವ ಆರಂಭವಾಗಿದೆ.
ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗದಲ್ಲಿ ಐತಿಹಾಸಿಕ ಭೀಷ್ಮ ಕೆರೆ ಇದ್ದು 103 ಎಕರೆ ವಿಸ್ತೀರ್ಣ ಹೊಂದಿರೋ ಕೆರೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಆ ಜಾಗದಲ್ಲಿ ಬೃಹತ್ ಕಟ್ಟಡಗಳು ತಲೆ ಎತ್ತಿ ನಿಂತಿವೆ. 103 ಎಕರೆ ಪ್ರದೇಶ ಹೊಂದಿರೋ ಈ ಕೆರೆ ಈಗ ಕೇವಲ 33 ಎಕರೆ ಪ್ರದೇಶದಷ್ಟು ಮಾತ್ರ ಉಳಿದಿದ್ದು, ಕಂಡವರು ಅಕ್ರಮವಾಗಿ ಕಬಳಿಕೆ ಮಾಡಿಕೊಂಡಿದ್ದಾರೆ. ಕೆರೆ ಜಾಗದಲ್ಲಿ ಅಕ್ರಮವಾಗಿ ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ವಾಣಿಜ್ಯ ಕಟ್ಟಡಗಳು ಹಾಗೂ ನಿವೇಶಗಳನ್ನು ನಿರ್ಮಾಣ ಮಾಡಿಕೊಂಡು ಪ್ರಭಾವಿಗಳು ಕೆರೆಯ ಜಾಗವನ್ನು ನುಂಗಿದ್ದಾರೆ ಅಂತ ಆರೋಪಿಸಿದ್ದಾರೆ. ಆದ್ರೆ, ಈಗ ಕೆರೆ ಒತ್ತುವರಿ ಮಾಡಿಕೊಂಡ ಪ್ರಭಾವಿಗಳಿಗೆ ಕಾನೂನಿನ ಭಯ ಆರಂಭವಾಗಿದೆ. ಕೋರ್ಟ್ ಆದೇಶದಂತೆ ಭೀಷ್ಮ ಕೆರೆಯ ಬಫರ್ ಝೋನ್ನಲ್ಲಿ ನಿರ್ಮಾಣವಾದ ಕಟ್ಟಡಗಳ ಮಾಲೀಕರಿಗೆ ನಗರಸಭೆ ನೋಟಿಸ್ ನೀಡಿದೆ. ಕೆರೆ ಸಂರಕ್ಷಣೆ ಮಾಡಬೇಕು, ಕೆರೆಯನ್ನು ಉಳಿಸಬೇಕು, ಕೆರೆಯಿಂದ ಅಂತರ್ಜಲ ಹೆಚ್ಚಳ ಮಾಡಬೇಕು ಎಂದು ಪರಿಸರ ವಾದಿಗಳು ಹಠ ಹಿಡಿದಿದ್ದಾರೆ. ಆದ್ರೆ, ಪ್ರಭಾವಿಗಳು ಕೆರೆ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು, ಆಸ್ಪತ್ರೆ, ಹೋಟೆಲ್ ಸೇರಿದಂತೆ ದೊಡ್ಡ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಆದ್ರೆ ಈಗ ನಗರಸಭೆ ಅಧಿಕಾರಿಗಳು ಬುಲ್ಡೋಜರ್ ಹಚ್ಚಿ ತೆರವು ಮಾಡಬೇಕು ಎಂದು ಪರಿಸರ ಪ್ರೇಮಿಗಳು ಹಾಗೂ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಪರಮೇಶ್ವರನ್ ಅಯ್ಯರ್ ನೀತಿ ಆಯೋಗದ ಸಿಇಒ, ಐಬಿ ಮುಖ್ಯಸ್ಥರಾಗಿ ತಪನ್ ಕುಮಾರ್ ದೇಕಾ ನೇಮಕ
ಕಟ್ಟಡದ ಮಾಲೀಕರಿಗೆ ಬುಲ್ಡೋಜರ್ ಭಯ ಇನ್ನೂ ಕೋಟ್ಯಾಂತರ ರೂಪಾಯಿ ಇನ್ವೆಸ್ಟ್ ಮಾಡಿ ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಆ ಎಲ್ಲಾ ಕಟ್ಟಡಗಳು ಕೆರೆಯ ಬಫರ್ ಝೋನ್ನಲ್ಲಿ ಬರ್ತಾಯಿದ್ದು, ಅಕ್ರಮ ಕಟ್ಟಡದ ಮಾಲೀಕರಿಗೆ ಬುಲ್ಡೋಜರ್ ಭಯ ಆರಂಭವಾಗಿದೆ. ಪರಿಸರ ಪ್ರೇಮಿಗಳು ನೋಟಿಸ್ ಗೆ ಉತ್ತರ ನೀಡಿದಿದ್ರೆ ಬುಲ್ಡೋಜರ್ ಹಚ್ಚಿ ಕಟ್ಟಡಗಳು ಯಾವುದೇ ಮುಲಾಜಿಲ್ಲದೇ ತೆರವು ಮಾಡಬೇಕು ಎಂದು ಒತ್ತಾಯ ಮಾಡ್ತಾಯಿದ್ದಾರೆ. ಇನ್ನೂ ಭೀಷ್ಮ ಕೆರೆಯ ಬಫರ್ ಝೋನ್ ನಲ್ಲಿ ಅಕ್ರಮವಾಗಿ ಕಟ್ಟಡ ಹಾಗೂ ಮನೆಗಳನ್ನು ನಿರ್ಮಾಣ ಮಾಡಿರೋ ಜಾಗವನ್ನು ಗದಗ ಬೆಟಗೇರಿ ನಗರಸಭೆ ಗುರುತು ಮಾಡಿದೆ. ಉಚ್ಛ ನ್ಯಾಯಾಲಯದ ಆದೇಶದಂತೆ ಗದಗ ಬೆಟಗೇರಿ ನಗರಸಭೆಯಿಂದ 87 ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. 87 ಕಟ್ಟಡ ಮಾಲೀಕರ ಹಾಗೂ ನಿವೇಶನ ಹೊಂದಿರೋ ಮಾಲೀಕರಿಗೆ ನೋಟಿಸ್ ನೀಡಿದೆ. ನಾವು ಈಗ ನೋಟಿಸ್ ನೀಡಿದ್ದು, ಅವರಿಂದ ಉತ್ತರ ಬಂದ್ ಕೂಡಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ. ನ್ಯಾಯಾಲಯದ ಆದೇಶ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ಟಿವಿ9ಗೆ ಗದಗ-ಬೆಟಗೇರಿ ನಗರಸಭೆ ಆಯುಕ್ತ ರಮೇಶ ಸುಣಗಾರ ತಿಳಿಸಿದ್ದಾರೆ.
ಐತಿಹಾಸಿಕ ಭೀಷ್ಮ ಕೆರೆ ಒತ್ತುವರಿ ಮಾಡಿರೋದರಿಂದ ಅಭಿವೃದ್ಧಿ ಕೆಲಸವನ್ನು ಮಾಡಲು ನಗರಸಭೆಗೆ ಆಗ್ತಾಯಿಲ್ಲ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಾಗವನ್ನು ನಯಪೈಸೆ ಖರ್ಚು ಮಾಡದೆ, ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದ್ದು, ನಗರಸಭೆ ಯಾವುದೇ ಮುಲಾಜಿಲ್ಲದೇ ಕಟ್ಟಡಗಳು ನೆಲಸಮ ಮಾಡಬೇಕು ಅಂತ ಅವಳಿ ನಗರದ ಜನ್ರು ಒತ್ತಾಯ ಮಾಡಿದ್ದಾರೆ. ಹೀಗಾಗಿ ಈಗ ಕಟ್ಟಡ ಮಾಲೀಕರಿಗೆ ಬುಲ್ಡೋಜರ್ ಭಯ ಆರಂಭವಾಗಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
Published On - 7:04 pm, Fri, 24 June 22