ಪರಮೇಶ್ವರನ್ ಅಯ್ಯರ್ ನೀತಿ ಆಯೋಗದ ಸಿಇಒ, ಐಬಿ ಮುಖ್ಯಸ್ಥರಾಗಿ ತಪನ್ ಕುಮಾರ್ ದೇಕಾ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ತಪನ್ ಕುಮಾರ್ ದೇಕಾ ಅವರನ್ನು ಶುಕ್ರವಾರ ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ಹಿಂದೆ  ಮುಖ್ಯಸ್ಥರಾಗಿದ್ದ ಅರವಿಂದ್ ಕುಮಾರ್ ಅವರ ಅಧಿಕಾರಾವಧಿ ಜೂನ್ 30 ರಂದು ಕೊನೆಗೊಳ್ಳುತ್ತದೆ.

ಪರಮೇಶ್ವರನ್ ಅಯ್ಯರ್ ನೀತಿ ಆಯೋಗದ ಸಿಇಒ, ಐಬಿ ಮುಖ್ಯಸ್ಥರಾಗಿ ತಪನ್ ಕುಮಾರ್ ದೇಕಾ ನೇಮಕ
ಪರಮೇಶ್ವರನ್ ಅಯ್ಯರ್- ತಪನ್ ಕುಮಾರ್ ದೇಕಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 24, 2022 | 6:56 PM

ದೆಹಲಿ: ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ (Amitabh Kant) ಅವರು ಆರು ವರ್ಷಗಳ ಸುದೀರ್ಘ ಅವಧಿಯ ನಂತರ ಸಂಸ್ಥೆಯ ಮುಖ್ಯಸ್ಥರಾಗಿ ಜೂನ್ ಅಂತ್ಯದಲ್ಲಿ ಸರ್ಕಾರಿ ಚಿಂತಕರ ಚಾವಡಿಯನ್ನು ತೊರೆಯಲಿದ್ದಾರೆ. ಅವರ ಬದಲಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಮಾಜಿ ಕಾರ್ಯದರ್ಶಿ ಮತ್ತು ಸರ್ಕಾರದ ಸ್ವಚ್ಛ ಭಾರತ್ ಮಿಷನ್‌ನ (Swachh Bharat Mission)ಹಿಂದಿನ ಶಕ್ತಿಯಾಗಿರುವ ಪರಮೇಶ್ವರನ್ ಅಯ್ಯರ್ (Parameswaran Iyer) ಅವರನ್ನು ನೇಮಕ ಮಾಡಲಾಗುತ್ತದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಅಧಿಸೂಚನೆಯ ಪ್ರಕಾರ ಅಯ್ಯರ್ ಅವರ ಆರಂಭಿಕ ಅಧಿಕಾರಾವಧಿಯು ಎರಡು ವರ್ಷಗಳವರೆಗೆ ಇರುತ್ತದೆ.  ಕಾಂತ್ ಅವರ ಅಧಿಕಾರಾವಧಿಯನ್ನು ಜೂನ್ 2021 ರಲ್ಲಿ ಒಂದು ವರ್ಷಕ್ಕೆ ವಿಸ್ತರಿಸಲಾಗಿತ್ತು. ಕೇರಳ ಕೇಡರ್‌ನ 1980 ರ ಬ್ಯಾಚ್‌ನ ನಿವೃತ್ತ IAS ಅಧಿಕಾರಿ ಆಗಿದ್ದ ಕಾಂತ್ ಅವರು 2016 ರಿಂದ ನೀತಿ ಆಯೋಗದ CEO ಆಗಿದ್ದಾರೆ. ಅಯ್ಯರ್ ಅವರು 17 ವರ್ಷಗಳ ಸೇವೆಯ ನಂತರ 2009 ರಲ್ಲಿ ಭಾರತೀಯ ಆಡಳಿತ ಸೇವೆಗೆ (IAS) ರಾಜೀನಾಮೆ ನೀಡಿದ್ದರು, 2016 ರಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ (D0DWS) ಕಾರ್ಯದರ್ಶಿಯಾಗಿದ್ದು, ಸ್ವಚ್ಛ್ ಭಾರತದ ಹಿಂದಿನ ಶಕ್ತಿಯಾಗಿದ್ದರು. ಜುಲೈ 2020 ರಲ್ಲಿ, ಅವರು ತಮ್ಮ DoDWS ನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅಮೆರಿಕದಲ್ಲಿ ವಿಶ್ವ ಬ್ಯಾಂಕ್ ನಲ್ಲಿ ಕೆಲಸ ಮಾಡಿದರು.

63ರ ಹರೆಯದ ಅಯ್ಯರ್, ಏಪ್ರಿಲ್ 1998 ಮತ್ತು ಫೆಬ್ರವರಿ 2006 ರ ನಡುವೆ ವಿಶ್ವಸಂಸ್ಥೆಯಲ್ಲಿ ಹಿರಿಯ ಗ್ರಾಮೀಣ ನೀರು ನೈರ್ಮಲ್ಯ ತಜ್ಞರಾಗಿ ಕೆಲಸ ಮಾಡಿದ್ದಾರೆ. ಅಯ್ಯರ್ ಅವರು ಉತ್ತರ ಪ್ರದೇಶದ ಮಾಯಾವತಿ ಸರ್ಕಾರದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.

ಐಬಿ ಮುಖ್ಯಸ್ಥರಾಗಿ ತಪನ್ ಕುಮಾರ್ ದೇಕಾ , R&AW ಮುಖ್ಯಸ್ಥರಾಗಿ ಸಮಂತ್ ಗೋಯೆಲ್ ಅಧಿಕಾರವಧಿ ಒಂದು ವರ್ಷ ವಿಸ್ತರಣೆ

ಹಿರಿಯ ಐಪಿಎಸ್ ಅಧಿಕಾರಿ ತಪನ್ ಕುಮಾರ್ ದೇಕಾ ಅವರನ್ನು ಶುಕ್ರವಾರ ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ಹಿಂದೆ  ಮುಖ್ಯಸ್ಥರಾಗಿದ್ದ ಅರವಿಂದ್ ಕುಮಾರ್ ಅವರ ಅಧಿಕಾರಾವಧಿ ಜೂನ್ 30 ರಂದು ಕೊನೆಗೊಳ್ಳುತ್ತದೆ.

ಸಿಬ್ಬಂದಿ ಸಚಿವಾಲಯ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ಐಬಿಯ ಕಾರ್ಯಾಚರಣೆ ವಿಭಾಗವನ್ನು ನಿರ್ವಹಿಸುತ್ತಿರುವ ದೇಕಾ ಅವರು ಎರಡು ವರ್ಷಗಳ ಕಾಲ ಹೊಸ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅವರು ಹಿಮಾಚಲ ಪ್ರದೇಶ ಕೇಡರ್‌ನ 1988 ರ ಬ್ಯಾಚ್ ಅಧಿಕಾರಿ.  ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (R&AW) ಮುಖ್ಯಸ್ಥರಾಗಿರುವ ಸಮಂತ್ ಗೋಯೆಲ್ ಅವರ ಅಧಿಕಾರಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ ಎಂದು ಸಚಿವಾಲಯವು ಮತ್ತೊಂದು ಆದೇಶದಲ್ಲಿ ತಿಳಿಸಿದೆ.

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ