ಲಡಾಖ್‌ನಲ್ಲಿ ಸೇನಾಪಡೆಗೆ ಮೇಡ್ ಇನ್ ಇಂಡಿಯಾ ಯುದ್ಧವಾಹನಗಳ ಸೇರ್ಪಡೆ
ಇನ್‌ಫ್ಯಾಂಟ್ರಿ ಪ್ರೊಟೆಕ್ಟೆಡ್ ಮೊಬಿಲಿಟಿ ವೆಹಿಕಲ್ಸ್ (ಐಪಿಎಂವಿ) ಹೆಸರಿನ ವಾಹನಗಳನ್ನು ಈ ವರ್ಷದ ಏಪ್ರಿಲ್‌ನಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿತ್ತು. ಇದನ್ನು ಲಡಾಖ್ ಪ್ರದೇಶದಲ್ಲಿ ಪರ್ವತ ಭೂಪ್ರದೇಶದಲ್ಲಿ...
ಲೇಹ್(ಲಡಾಖ್): ಲಡಾಖ್‌ನಲ್ಲಿ (Ladakh)ನಿಯೋಜಿಸಲಾದ ಸೈನಿಕರ ಸಾಮರ್ಥ್ಯವನ್ನು ಹೆಚ್ಚಿಸಲು ಮೇಡ್ ಇನ್ ಇಂಡಿಯಾ ಪದಾತಿಸೈನ್ಯದ ಯುದ್ಧ ವಾಹನಗಳನ್ನು( Made In India Infantry Combat Vehicles) ಸೇರ್ಪಡೆ ಮಾಡಲಾಗಿದೆ. ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ(Northern Army Commander Lt General Upendra Dwivedi) ಅವರು ಹೊಸ ವಾಹನವನ್ನು ಖುದ್ದಾಗಿ ಚಾಲನೆ ಮಾಡಿದ್ದು ಈ ಯುದ್ಧ ವಾಹನಗಳೊಂದಿಗೆ ಪ್ರದೇಶದ ಕಠಿಣ ಭೂಪ್ರದೇಶದಲ್ಲಿ ಸುಲಭವಾಗಿ ಓಡಿಸಬಹುದು ಎಂದು ಹೇಳಿದ್ದಾರೆ. ಒಬ್ಬರು ಸುಲಭವಾಗಿ ವಾಹನವನ್ನು ಓಡಿಸಬಹುದು ಮತ್ತು ಚಾಲಕನು ಅದರಿಂದ 1,800 ಮೀಟರ್ ದೂರವನ್ನು ನೋಡಬಹುದು. ಅದರ ಮೇಲೆ ಅಳವಡಿಸಲಾಗಿರುವ ಆಯುಧವನ್ನು ಒಳಗಿನಿಂದ ನಿಯಂತ್ರಿಸಬಹುದು ಎಂದು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಎಎನ್‌ಐಗೆ ತಿಳಿಸಿದ್ದಾರೆ.
#WATCH | Northern Army Commander Lt General Upendra Dwivedi drives the Made in India Infantry Combat Vehicle in Leh.
The vehicle was inducted into the force some time ago and has been developed jointly by DRDO and Tata Group pic.twitter.com/qrl1sfv7hW
— ANI (@ANI) June 24, 2022
ಇನ್‌ಫ್ಯಾಂಟ್ರಿ ಪ್ರೊಟೆಕ್ಟೆಡ್ ಮೊಬಿಲಿಟಿ ವೆಹಿಕಲ್ಸ್ (ಐಪಿಎಂವಿ) ಹೆಸರಿನ ವಾಹನಗಳನ್ನು ಈ ವರ್ಷದ ಏಪ್ರಿಲ್‌ನಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿತ್ತು. ಇದನ್ನು ಲಡಾಖ್ ಪ್ರದೇಶದಲ್ಲಿ ಪರ್ವತ ಭೂಪ್ರದೇಶದಲ್ಲಿ ಪರೀಕ್ಷಿಸಲಾಗಿದೆ. ಈ ಪದಾತಿಸೈನ್ಯದ ಸಂರಕ್ಷಿತ ಮೊಬಿಲಿಟಿ ವೆಹಿಕಲ್ಸ್ (IPMV )ಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಟಾಟಾ ಸಮೂಹದಿಂದ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ.
Published On - 7:31 pm, Fri, 24 June 22