ಗದಗದಲ್ಲಿ ಬೀದಿ ನಾಯಿಗಳ ಹಾವಳಿ: ಮಕ್ಕಳು ಸೇರಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಇಂಜೆಕ್ಷನ್​ಗಾಗಿ ಪರದಾಟ

ಗದಗ-ಬೆಟಗೇಟಗಿ ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಒಂದೇ ದಿನ 10ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳ ದಾಳಿ ನಡೆದಿದೆ.

ಗದಗದಲ್ಲಿ ಬೀದಿ ನಾಯಿಗಳ ಹಾವಳಿ: ಮಕ್ಕಳು ಸೇರಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಇಂಜೆಕ್ಷನ್​ಗಾಗಿ ಪರದಾಟ
ನಾಯಿ ದಾಳಿ
Follow us
TV9 Web
| Updated By: ಆಯೇಷಾ ಬಾನು

Updated on: Dec 06, 2022 | 10:29 AM

ಗದಗ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಒಂದೇ ದಿನ 10ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ(Street Dogs Attack), ಮಾಡಿವೆ. ಓರ್ವ ಮಗುವಿನ ಗಂಟಲು ರಕ್ತ ಹರಿದಿದ್ದು ಸ್ವಲ್ಪದರಲ್ಲೇ ಮಗು ಬಚಾವ್ ಆಗಿದೆ. ಅಲ್ಲದೆ ನಾಯಿ ಕಡಿತದ ಇಂಜಕ್ಷನ್ ಸಿಗದೇ ಬಡ ಜನ್ರು ಒದ್ದಾಡುತ್ತಿದ್ದಾರೆ.

ಗದಗ-ಬೆಟಗೇಟಗಿ ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಗದಗ ನಗರದ ಹಮಾಲರ ಕಾಲೋನಿಯಲ್ಲಿ ನೂರಾರು ಬೀದಿ ನಾಯಿಗಳ ಹಾವಳಿಗೆ ಜನ್ರು ಗಲಿಬಿಲಿಗೊಂಡಿದ್ದಾರೆ. ನಿನ್ನೆ ಒಂದೇ ದಿನದಲ್ಲಿ ಮಕ್ಕಳು ಸೇರಿದಂತೆ 11 ಜನ್ರ ಮೇಲೆ ಬೇಕಾಬಿಟ್ಟಿ ದಾಳಿ ಮಾಡಿದ ನಾಯಿಗಳು ಮಕ್ಕಳ ಗಂಟಲಿಗೆ ಬಾಯಿ ಹಾಕಿ ರಕ್ತ ಹೀರಿವೆ. ಯುವಕರು, ಹಿರಿಯರು, ಮಹಿಳೆಯರ ಮೇಲೂ ಸರಣಿ ದಾಳಿ ಮಾಡಿವೆ. ನೂರಾರು ನಾಯಿಗಳು ಹಿಂಡಿನಲ್ಲಿ ಬಂದು ದಾಳಿ ಮಾಡುತ್ತದೆ. ಈ ದಾಳಿ ಮಾಡುವ ನಾಯಿಗಳಲ್ಲಿ ಎಷ್ಟಕ್ಕೆ ಹುಚ್ಚು ಹಿಡಿದಿದೆ ಎಂಬುವುದೂ ಸಹ ತಿಳಿದಿಲ್ಲ. ನಿನ್ನೆ ನಡೆದ ಕಂದನ ಮೇಲಿನ ದಾಳಿಯಲ್ಲಿ ಮಗುವಿನ ಕಂಟಲಿಗೆ ಗಂಭೀರ ಹಾನಿಯಾಗಿದ್ದು ಸುಮಾರು 15 ಹೊಲಿಗೆ ಹಾಕಲಾಗಿದೆ. ಮಗುವಿನ ನರಳಾಟ ಮಾತ್ರ ಕರುಳು ಹಿಂಡುವಂತಿದೆ.

ಇದನ್ನೂ ಓದಿ: ಶಿವಮೊಗ್ಗ, ಬಳ್ಳಾರಿಯಲ್ಲಿ ಬೀದಿನಾಯಿ ದಾಳಿಗೆ ಒಟ್ಟು ಮೂವರು ಮಕ್ಕಳ ಸಾವು: ಮತ್ತೆ ಗರಿಗೆದರಿದ ನಾಯಿ ನಿರ್ವಹಣೆ ಚರ್ಚೆ

ಅಷ್ಟೇ ಅಲ್ಲ ಇನ್ನೊಂದು ಮಗು ಉಮ್ಮೇ ಹಬೀಬಾ ಹೊಟ್ಟೆ ಭಾಗದಲ್ಲಿ ನಾಯಿ ಕಚ್ಚಿದ್ರೆ, ಕಸ್ತೂರಿ ಅನ್ನೋ ಮಹಿಳೆ ಕೈ ಭಾಗದಲ್ಲಿ ಕಚ್ಚಿದೆ. ವಿರೇಶ ಎಂಬ ಯುವಕನಿಗೆ ಬೆನ್ನಿಗೆ ಕಚ್ಚಿದೆ, ವೃದ್ಧ ಮಾಬುಸಾಬ್ ಹಾಗೂ ಕುಮಾರ ಅನ್ನೋ ಯುವಕನಿಗೆ ಕಾಲಿಗೆ ಕಚ್ಚಿದೆ. ಹಮಾಲರ ಕಾಲೋನಿ ಜನ್ರಿಗೆ ಈಗ ನೆಮ್ಮದಿ ಇಲ್ಲದಂತಾಗಿದೆ. ಮಕ್ಕಳು ಮನೆ ಬಿಟ್ಟು ಆಟವಾಡಲು ಭಯ ಪಡ್ತಾಯಿದ್ದಾರೆ. ಮಕ್ಕಳು ಮಾತ್ರ ಅಲ್ಲ ಯುವಕರು, ದೊಡ್ಡವರು ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಒಂದು, ಎರಡು ನಾಯಿಗಳಾದ್ರೆ ಹೊಡೆದು ಹೋಡಿಸಬಹುದು. 30-40 ಹಿಂಡುಗಳ ಸಮೇತ ದಾಂಗುಡಿ ಇಡೋ ಶ್ವಾನಗಳ ಗುಂಪುಗಳು ಜನ್ರನ್ನು ಭಯ ಹುಟ್ಟಿಸುತ್ತಿವೆ. ಬೀದಿ ನಾಯಿಗಳ ಹಾವಳಿಗೆ ಮುಕ್ತಿ ನೀಡಿ ಅಂತ ನಿವಾಸಿಗಳು ನಗರಸಭೆ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಆದ್ರೆ ಅಧಿಕಾರಿಗಳು ಅದಕ್ಕೆ ಕ್ಯಾರೇ ಎನ್ನುತ್ತಿಲ್ಲವಂತೆ. ಇಷ್ಟೊಂದು ಜನ್ರ ಮೇಲೆ ದಾಳಿ ಮಾಡಿದ ಮೇಲಾದ್ರೂ ನಗರಸಭೆ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.

ಉಚಿತ ಇಂಜೆಕ್ಷನ್ ಇಲ್ಲದೇ ಪರದಾಟ

ಹಮಾಲರ ಕಾಲನಿ ಅಂದ್ರೆ ದುಡಿದು ಜೀವನ ಮಾಡುವ ಜನ. ಹೀಗಾಗಿ ನಾಯಿಗಳ ದಾಳಿ ಬಳಿಕ ರಕ್ಷಣ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಾರೆ. ಅದ್ರೆ, ಅಲ್ಲಿನ ಸಿಬ್ಬಂದಿ ಇಲ್ಲಿ ನಾಯಿ ಕಚ್ಚಿದ ಇಂಜೆಕ್ಷನ್ ಇಲ್ಲ ಅಂತ ಗದಗ ಜಿಮ್ಸ್ ಆಸ್ಪತ್ರೆಗೆ ಕಳಿಸಿದ್ದಾರೆ. ಮೊದ್ಲೆ ಮಕ್ಕಳು ನರಳಾಟ ನೋಡಿ ಕಂಗಾಲಾದ ಜನ್ರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿಲ್ಲ ಅಂತ ಜನ್ರು ಕಿಡಿಕಾರಿದ್ದಾರೆ.

street dogs

ಇದನ್ನೂ ಓದಿ: ನಿಗದಿತ ಸಮಯಕ್ಕೆ ಕಬ್ಬು ಕಟಾವು ಮಾಡಿ ಸಾಗಣೆ ಮಾಡಿ: ಮೈಸೂರು ಜಿಲ್ಲಾಧಿಕಾರಿ ಆದೇಶ

ಜಿಮ್ಸ್ ಆಸ್ಪತ್ರೆಗೂ ಹೋದ್ರೂ ಸಿಗಲಿಲ್ಲ ಇಂಜೆಕ್ಷನ್

ಗದಗ ಜಿಮ್ಸ್ ಆಸ್ಪತ್ರೆಗೆ ಹೋದ್ರೂ ಇಂಜೆಕ್ಷನ್ ಇಲ್ಲ ವೈದ್ಯರು ಇಂಜೆಕ್ಷನ್ ಇಲ್ಲ ಅಂತ 2 ಸಾವಿರ ಹಣ ಕೊಟ್ರೆ ಮಾತ್ರ ಇಂಜೆಕ್ಷನ್ ಮಾಡ್ತೀವಿ ಅಂದಿದ್ದಾರೆ. ಇಲ್ಲಾಂದ್ರೆ ಹೊರಗಡೆ ತಗೊಂಡು ಬನ್ನಿ ಅಂದಿದ್ದಾರೆ ಅಂತ ಗಾಯಾಳು ಕುಟುಂಬಸ್ಥರು ಆರೋಪಿಸಿದ್ದಾರೆ. ಹಣ ಅಂದ್ರೆ ಸರ್ಕಾರಿ ಆಸ್ಪತ್ರೆ ಯಾಕೇ ಬೇಕು ಅಂತ ನಾಯಿ ಕೊಚ್ಚಿಸಿಕೊಂಡ ಬಡ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೊನೆಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ಕೊಟ್ಟು ಚಿಕಿತ್ಸೆ ಪಡೆದು ಬಂದಿದ್ದೇವೆ ಅಂತ ಜನ್ರ ಗೋಳು ತೋಡಿಕೊಂಡಿದ್ದಾರೆ.

Dog Attack

ನಾಯಿ ದಾಳಿಯಿಂದ ತಮ್ಮ ಮಕ್ಕಳಿಗಾದ ಸಮಸ್ಯೆ ಹೇಳಿಕೊಳ್ಳುತ್ತಿರುವ ಜನ

11 ಬಡ ಕುಟುಂಬಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದೇ ನರಳಾಡುತ್ತಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ. ಯಾಕಂದ್ರೆ ದುಬಾರಿ ಇಂಜೆಕ್ಷನ್ ಮಾಡಿಸುವ ಶಕ್ತಿ ಈ ಬಡ ಕುಟುಂಬಗಳಿಗೆ ಇಲ್ಲ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್