ಗದಗ, ಮಾರ್ಚ್ 8: ಆಕೆ ಓದಿದ್ದು ಎಂಟನೇ ತರಗತಿ. ಆದರೆ ಯಾವುದೇ ಡಿಪ್ಲೊಮಾ, ಐಟಿಐ ಮಾಡಿದವರಿಂತ ಏನೂ ಕಡಿಮೆ ಇಲ್ಲ. ಕಷ್ಟದ ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಕೆಲಸವನ್ನ ಸುಲಭವಾಗಿ ಮಾಡಿಬಿಡುತ್ತಾರೆ. ಕಳೆದ 13 ವರ್ಷಗಳಿಂದ ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಮಾಡುತ್ತಿದ್ದಾರೆ. ತಾಯಿಯ ಸಾಕಿ ಸಲಹಬೇಕೆಂಬ ಹಂಬಲದಿಂದ ಸ್ವಾವಲಂಬನೆಯ ಜೀವನ ಸಾಗಿಸುತ್ತಿರುವ ಮಹಿಳೆಯ ಹೆಸರು ಬೀಬಿಜಾನ್ ನಧಾಪ್ ಎ. ಇವರು ಇದು ಗದಗ (Gadag) ನಗರದ ಉಷಾ ಎಲೆಕ್ಟ್ರಿಕ್ಸ್ ಆ್ಯಂಡ್ ಸರ್ವಿಸ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 13 ವರ್ಷಗಳಿಂದ ಉಷಾ ಎಲೆಕ್ಟ್ರಿಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಗದಗ ತಾಲೂಕಿನ ಅಡವಿಸೋಮಾಪೂರದ ನಿವಾಸಿಯಾಗಿರುವ ಬೀಬಿಜಾನ್ ನಧಾಪ್ ಬಡತನ ಕುಟುಂಬದಲ್ಲಿ ಜನಿಸಿದವರಾಗಿದ್ದು, ಕುಟುಂಬಕ್ಕೆ ಆಸರೆಯಾಗಬೇಕಿದ್ದ ತಂದೆಯನ್ನೂ ಸಹ ಕಳೆದುಕೊಂಡು, ಸದ್ಯ ಆತ್ಮವಿಶ್ವಾಸದ ಜೀವನವನ್ನು ಸಾಗಿಸುತ್ತಿದ್ದಾರೆ.
ಬೇಬಿಜಾನ್ನ ನಾಲ್ಕು ಜನ ಸಹೋದರಿಯರು ಮದುವೆಯಾಗಿದ್ದಾರೆ. ಇನ್ನು ಬೀಬಿಜಾನ್ ತಾಯಿ ವೃಷ್ಣಬಿಗೆ ಈಗಾಗಲೇ 80 ಕ್ಕೂ ಹೆಚ್ಚು ವಯಸ್ಸು ಆಗಿದೆ. ಹೀಗಾಗಿ ಇಡೀ ಮನೆತನದ ಜವಾಬ್ದಾರಿ ಹೊತ್ತಿರುವ ಬೀಬಿಜಾನ್, ಜೀವನ ಸಾಗಿಸಲು ಏನಾದರೂ ಕೆಲಸ ಮಾಡಬೇಕೆಂದು ಅಂದುಕೊಂಡಾಗ ಗದಗದ ಉಷಾ ಎಲೆಕ್ಟ್ರಿಕ್ ಸರ್ವಿನ್ ಮಾಲೀಕರು ಕೆಲಸ ಕೊಟ್ಟಿದ್ದಾರೆ. ಶ್ರದ್ಧೆಯಿಂದ ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಮಾಡೋದನ್ನು ಕಲಿತ್ತಿದ್ದಾರೆ. ಇಲೆಕ್ಟ್ರಿಕ್ ವಸ್ತುಗಳಾದ ಫ್ಯಾನ್, ಪಂಪ್ ಮೋಟರ್, ರಿವೈಂಡಿಗ್ ಅಷ್ಟೇ ಅಲ್ದೆ ಎಂತಹದೇ ಎಲೆಕ್ಟ್ರಿಕ್ ವಸ್ತುಗಳು ಇರಲಿ, ಎಲ್ಲವನ್ನೂ ಥಟ್ಟ ಅಂತ ರಿಪೇರಿ ಮಾಡುತ್ತಾರೆ.
ಇತರ ಅನೇಕ ಮಹಿಳೆಯರಂತೆ ಬೀಬಿಜಾನ್ ಸಹ ತನ್ನ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಬೀಬಿಜಾನ್ಗೆ ಎಲೆಕ್ಟ್ರಿಕ್ ಕೆಲಸವು ಸ್ವಾವಲಂಬನೆಯ ಜೀವನ ಸಾಗಿಸಲು ಅನುವು ಮಾಡಿಕೊಟ್ಟಿದೆ.
ಇಂದು (ಮಾರ್ಚ್ 8) ವಿಶ್ವದಾದ್ಯಂತ ಮಹಿಳಾ ದಿನ ಆಚರಿಸಲಾಗುತ್ತಿದೆ. ಇದು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸುವ ಜಾಗತಿಕ ದಿನವಾಗಿದೆ. ಈ ದಿನವು ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಆರಂಭವಾಗಿದೆ. ಈ ದಿನ ಮಹಿಳೆಯರು ಮಾಡಿದ ಸಾಧನೆಗಳು ಮತ್ತು ಅವರ ಪ್ರಗತಿಯ ಸಂಭ್ರಮವನ್ನು ಆಚರಿಸುವುದಲ್ಲದೆ, ಸಮಾನತೆಗಾಗಿ ನಡೆಯುತ್ತಿರುವ ಹೋರಾಟಗಳನ್ನು ಮತ್ತು ಆ ಕುರಿತ ಅಗತ್ಯವನ್ನು ಎತ್ತಿ ತೋರಿಸುತ್ತದೆ.
2024 ರ ಮಹಿಳಾ ದಿನಾಚರಣೆಗೆ ‘ಮಹಿಳೆಯರಲ್ಲಿ ಹೂಡಿಕೆ ಮಾಡಿ: ಪ್ರಗತಿಯನ್ನು ವೇಗಗೊಳಿಸಿ’ ಎಂಬ ಧ್ಯೇಯವಾಕ್ಯವನ್ನು ವಿಶ್ವಸಂಸ್ಥೆಯು ಗೊತ್ತುಪಡಿಸಿದೆ. ಈ ವರ್ಷದ ಅಭಿಯಾನದ ಧ್ಯೇಯ ‘ಇನ್‌ಸ್ಪೈರ್ ಇನ್‌ಕ್ಲೂಷನ್’ ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ