ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲೆಯನ್ನು ಖಾಲಿ ಮಾಡಿಸಲು ಮುಂದಾದ ಹುಬ್ಬಳ್ಳಿಯ ಗಾಂಧಿವಾಡ ಸೊಸೈಟಿ

ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯಿಂದ ಜಾಗ ಖರೀದಿಸಿದ್ದು, ನಂತರ ಅದನ್ನು ಲೇಔಟ್ ಮಾಡಿ ಜಾಗ ಮಾರಾಟ ಮಾಡಲಾಗಿತ್ತು. ಈ ಜಾಗವನ್ನು ಶಾಲಾ ಕಟ್ಟಡಕ್ಕೆ ನೀಡಿದ್ದ ಗಾಂಧಿವಾಡ ಸೊಸೈಟಿ ಈಗ ಜಾಗ ಖಾಲಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ.

ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲೆಯನ್ನು ಖಾಲಿ ಮಾಡಿಸಲು ಮುಂದಾದ ಹುಬ್ಬಳ್ಳಿಯ ಗಾಂಧಿವಾಡ ಸೊಸೈಟಿ
ಶಾಲೆ ಖಾಲಿ ಮಾಡುತ್ತಿರುವ ದೃಶ್ಯ

Updated on: Mar 10, 2021 | 5:57 PM

ಹುಬ್ಬಳ್ಳಿ: ನಗರದ ಹರಿಜನ ಸರ್ಕಾರಿ ಅನುದಾನಿತ ಶಾಲೆ ಎದುರು ಗಾಂಧಿವಾಡ ಸೊಸೈಟಿ ಮತ್ತು ಸ್ಥಳೀಯ ನಿವಾಸಿಗಳ ಮಧ್ಯೆ ವಾಗ್ವಾದ ನಡೆದಿದೆ. ಗಾಂಧಿವಾಡ ಸೊಸೈಟಿಯ ಜನರು ಶಾಲೆ ಖಾಲಿ ಮಾಡಿಸಲು ಮುಂದಾಗಿದ್ದು, 1956 ರಲ್ಲಿ ಆರಂಭವಾಗಿದ್ದ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆಗೆ ಈಗ ಕಂಟಕ ಎದುರಾಗಿದೆ.

ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯಿಂದ ಜಾಗ ಖರೀದಿಸಿದ್ದು, ನಂತರ ಅದನ್ನು ಲೇಔಟ್ ಮಾಡಿ ಜಾಗ ಮಾರಾಟ ಮಾಡಲಾಗಿತ್ತು. ಈ ಜಾಗವನ್ನು ಶಾಲಾ ಕಟ್ಟಡಕ್ಕೆ ನೀಡಿದ್ದ ಗಾಂಧಿವಾಡ ಸೊಸೈಟಿ ಈಗ ಜಾಗ ಖಾಲಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಕೋರ್ಟ್‌ನಲ್ಲಿ ದಾವೆ ಹಾಕಿದ್ದ ಗಾಂಧಿವಾಡ ಸೊಸೈಟಿಯವರು ಜಾಗವನ್ನು ಶಾಲೆಯವರು ಖಾಲಿ ಮಾಡುವಂತೆ ನ್ಯಾಯಾಲಯ‌ ಹೇಳಿದೆ ಎಂದು ತಿಳಿಸದ್ದಾರೆ. ಇನ್ನು ಕೋರ್ಟ್‌‌ ಹೇಳಿದೆ ಎಂದು ಹೇಳುತ್ತಿರುವ ಸೊಸೈಟಿಯವರು ಒಂದು ಕಡೆಯಾದರೆ, ಕೋರ್ಟ್‌ ಆದೇಶದಲ್ಲಿ ಕಟ್ಟಡ ಖಾಲಿ ಮಾಡಿಸುವಂತೆ ಹೇಳಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಶಾಲೆಯಲ್ಲಿನ ಮೇಜು ಹಾಗೂ ಬೆಂಚ್​ಗಳನ್ನು ಹೊರಗಡೆ ಹಾಕಿದರೆ ನಾವು ಎಲ್ಲಿ ಕುಳಿತು ಪಾಠ ಕೇಳಬೇಕು. ನಮ್ಮನ್ನು ಓದಲು ಬಿಡಿ. ನಾನು ಚೆನ್ನಾಗಿ ಓದಿ ಪೋಲೀಸ್ ಆಗಬೇಕು ಎಂದು ಇದ್ದೇನೆ ಹೇಗಾದರು ಮಾಡಿ ನಮ್ಮ ಶಾಲೆಯನ್ನು ನಮಗೆ ಉಳಿಸಿಕೊಡಿ ಎಂದು ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಸಂಜನಾ ತಮ್ಮ ಅಳಲು ತೋಡಿಕೊಂಡಿದ್ದಾಳೆ.

ಗಾಂಧಿವಾಡ ಸಿಬ್ಬಂದಿಗಳು ಶಾಲಾ ಪೀಠೋಪಕರಣಗಳನ್ನು ಹೊರಗಡೆ ಹಾಕಿದ್ದಾರೆ. ಇನ್ನು ಇದೆಲ್ಲವನ್ನು ಶಾಲೆಯ ಆವರಣದಲ್ಲಿ ನಿಂತು ನೋಡುತ್ತಿದ್ದ ಶಾಲೆಯಲ್ಲಿ ಓದುತ್ತಿದ್ದ ಹೆಣ್ಣು ಮಕ್ಕಳು ಕಣ್ಣಿರು ಸುರಿಸಿದ್ದಾರೆ. ಈ ವಿಚಾರ ವಿಕೋಪಕ್ಕೆ ಹೋದಾಗ ಗಾಂಧಿವಾಡ ಸೊಸೈಟಿ ಜನರು ಪೊಲೀಸರನ್ನು ಕರೆತಂದಿದ್ದಾರೆ. ಸದ್ಯ ಎಸಿಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಹಾಕಲಾಗಿದೆ.

ಇದನ್ನೂ ಓದಿ: Private School Fees: ಶುಲ್ಕ ಕಡಿತ ಆದೇಶ ಖಂಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೃಹತ್ ಸಮಾವೇಶ

ಇದನ್ನೂ ಓದಿ: Schools Reopen: ಇಂದಿನಿಂದ 6, 7, 8 ನೇ ತರಗತಿಗಳು ಆರಂಭ, ಹೊಸ ಗೈಡ್‌ಲೈನ್ಸ್‌ನೊಂದಿಗೆ ಕ್ಲಾಸ್ ಆರಂಭಕ್ಕೆ ತಯಾರಿ