Schools Reopen: ಇಂದಿನಿಂದ 6, 7, 8 ನೇ ತರಗತಿಗಳು ಆರಂಭ, ಹೊಸ ಗೈಡ್‌ಲೈನ್ಸ್‌ನೊಂದಿಗೆ ಕ್ಲಾಸ್ ಆರಂಭಕ್ಕೆ ತಯಾರಿ

9, 10ಮತ್ತು ಪಿಯು ಕ್ಲಾಸಸ್ ಶುರು ಆದ್ವು. ವಿದ್ಯಾರ್ಥಿಗಳು ಶಾಲೆಗೂ ಹೋಗ್ತಿದ್ದಾರೆ. ಆದ್ರೆ, 6, 7, 8 ನೇ ತರಗತಿ ಯಾವಾಗ ಶುರು ಆಗುತ್ತೋ? ನಮ್ಮ ಮಕ್ಕಳು ಯಾವಾಗ ಶಾಲೆಗೆ ಹೋಗಿ ಪಾಠ ಕೇಳ್ತಾರೋ ಅಂತಾ ಫುಲ್ ಟೆನ್ಷನ್​ನಲ್ಲಿದ್ದ ಪೋಷಕರಿಗೀಗ ಗುಡ್​ನ್ಯೂಸ್. ಅದೇನಂದ್ರೆ, 6, 7, 8 ನೇ ತರಗತಿ ಓಪನ್ ಮಾಡೋಕೆ ಮುಹೂರ್ತ ಫಿಕ್ಸ್ ಆಗಿದೆ. ಜೊತೆಗೆ ಗೈಡ್‌ಲೈನ್ಸ್ ಕೂಡ ರಿಲೀಸ್ ಆಗಿದೆ.

Schools Reopen: ಇಂದಿನಿಂದ 6, 7, 8 ನೇ ತರಗತಿಗಳು ಆರಂಭ, ಹೊಸ ಗೈಡ್‌ಲೈನ್ಸ್‌ನೊಂದಿಗೆ ಕ್ಲಾಸ್ ಆರಂಭಕ್ಕೆ ತಯಾರಿ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
| Updated By: Digi Tech Desk

Updated on:Feb 22, 2021 | 8:59 AM

ಬೆಂಗಳೂರು: ಕೊರೊನಾ ಮತ್ತು ಲಾಕ್​ಡೌನ್​ನಿಂದಾಗಿ ಶಾಲೆಗಳ ಬಾಗಿಲು ಬಂದ್ ಆಗಿತ್ತು. ಬರೋಬ್ಬರಿ 1 ವರ್ಷ ಸ್ಕೂಲ್​ಗಳು ಬಂದ್ ಆಗಿದ್ವು. ಆದ್ರೀಗ ಕೊರೊನಾ ಕಡಿಮೆ ಆಗಿದ್ರಿಂದ ಹಂತ ಹಂತವಾಗಿ ಶಾಲೆ ಬಾಗಿಲು ತೆರೆಯಲಾಗುತ್ತಿದೆ. ಈಗಾಗ್ಲೇ 9, 10, ಪ್ರಥಮ ಮತ್ತು ದ್ವಿತೀಯ ಪಿಯು ಕ್ಲಾಸ್ ಓಪನ್ ಆಗಿದೆ. ಇಂದಿನಿಂದ 6, 7, 8ನೇ ತರಗತಿಗಳು ಪ್ರಾರಂಭವಾಗಲಿವೆ. 6, 7, 8ನೇ ತರಗತಿಗಳನ್ನ ಆರಂಭಿಸಲು ನಿರ್ಧರಿಸಿರೋ ಶಿಕ್ಷಣ ಇಲಾಖೆ, ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಆ ಗೈಡ್​ಲೈನ್ಸ್​ನ್ನು ಕಡ್ಡಾಯವಾಗಿ ಪಾಲಿಸಬೇಕು ಅಂತಾ ಖಡಕ್ ಆಗಿ ಹೇಳಿದೆ.

ಕ್ಲಾಸ್​ಗೆ ಗೈಡ್​ಲೈನ್ಸ್ ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲ ಅಂತಾ ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ಹೇಳಿದೆ. ಅಲ್ದೆ, ಕೊವಿಡ್ ನೆಗೆಟಿವ್ ರಿಪೋರ್ಟ್ ಇದ್ರಷ್ಟೇ ವಿದ್ಯಾರ್ಥಿಗಳಿಗೆ ತರಗತಿಗೆ ಬರಲು ಅವಕಾಶ ಇರುತ್ತೆ. ಆದ್ರೆ, ಕೊರೊನಾ ಲಕ್ಷಣಗಳಿದ್ರೆ ಅವಕಾಶ ಇರಲ್ಲ. ಇದ್ರ ಜೊತೆಗೆ ವಿದ್ಯಾರ್ಥಿಗಳು ಆನ್​ಲೈನ್​ನಲ್ಲೂ ಪಾಠ ಕೇಳಬಹುದು. ಆದ್ರೆ, ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯವಾಗಿರಬೇಕು ಅಂತಾ ಶಿಕ್ಷಣ ಇಲಾಖೆ ಗೈಡ್​ಲೈನ್ಸ್​ನಲ್ಲಿ ತಿಳಿಸಿದೆ.

ರಾಜ್ಯದಲ್ಲೇನೋ 6ರಿಂದ 8ನೇ ತರಗತಿ ಶುರು ಆಗ್ತಿವೆ. ಆದ್ರೆ, ಬೆಂಗಳೂರಿಗೆ ಮಾತ್ರ ಈ ಆದೇಶ ಅನ್ವಯ ಆಗಲ್ಲ. ಯಾಕಂದ್ರೆ, ಬೆಂಗಳೂರು ನಗರವನ್ನ ವಿಶೇಷವಾಗಿ ಪರಿಗಣಿಸಲಾಗ್ತಿದೆ. ಹೀಗಾಗೇ, ರಾಜಧಾನಿಯಲ್ಲಿ 6 ಮತ್ತು 7ನೇ ತರಗತಿ ಆರಂಭ ಆಗಲ್ಲ. ಕೇವಲ 8ನೇ ತರಗತಿ ಮಾತ್ರ ಶುರು ಆಗುತ್ತಿದೆ.

ಬೆಂಗಳೂರಲ್ಲಿ ಶುರುವಾಗಲ್ಲ 6 ಮತ್ತು 7ನೇ ತರಗತಿ! ಹೌದು.. ಬೆಂಗಳೂರು ನಗರವನ್ನು ಸರ್ಕಾರ ವಿಶೇಷವಾಗಿ ಪರಿಗಣಿಸಿದೆ. ಯಾಕಂದ್ರೆ, ಬೆಂಗಳೂರಿನ ನೆತ್ತಿ ಮೇಲೆ ಕೊರೊನಾ 2ನೇ ಅಲೆಯ ತೂಗುಗತ್ತಿ ನೇತಾಡುತ್ತಿರೋ ಅನುಮಾನ ಇದೆ. ಇದೇ ಕಾರಣಕ್ಕಾಗಿ ಬೆಂಗಳೂರು ನಗರ, ಕೇರಳ ಗಡಿ ಭಾಗದಲ್ಲಿ 6, 7ನೇ ತರಗತಿ ಶುರು ಮಾಡದಿರಲು ಸರ್ಕಾರ ನಿರ್ಧರಿಸಿದ್ದು, 8ನೇ ಕ್ಲಾಸ್ ಮಾತ್ರ ಶುರು ಮಾಡಲಾಗುತ್ತೆ ಅಂತಾ ಶಿಕ್ಷಣ ಸಚಿವ ಸುರೇಶ್​ಕುಮಾರ್ ತಿಳಿಸಿದ್ದಾರೆ. ಒಟ್ನಲ್ಲಿ ಇಂದಿನಿಂದ 6ರಿಂದ 8ನೇ ಕ್ಲಾಸಸ್ ಆರಂಭಿಸಲು ನಿರ್ಧಾರ ಮಾಡಿದೆ. ಆದ್ರೆ, ಕೊರೊನಾ ಮಧ್ಯೆ ಸರ್ಕಾರದ ಗೈಡ್​ಲೈನ್ಸ್ ಎಷ್ಟರ ಮಟ್ಟಿಗೆ ಪಾಲನೆ ಆಗುತ್ತೆ ಅನ್ನೋದೇ ಸದ್ಯದ ಕುತೂಹಲ.

ಇದನ್ನೂ ಓದಿ: School Reopen: ಫೆ. 22ರಿಂದ 6-8 ತರಗತಿಗಳಿಗೆ ಪೂರ್ಣ ಶಾಲೆ ಆರಂಭ -ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ

ಶಾಲೆ ಆರಂಭಿಸಿದರೆ ಮಕ್ಕಳೇ Super Spreaders.. ಹಾಗಾದ್ರೆ ತಜ್ಞರ ಪ್ರಕಾರ ಶಾಲೆ ರಿಓಪನ್ ಯಾವಾಗ ಗೊತ್ತಾ?

Published On - 6:49 am, Mon, 22 February 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್