ಗಾಳಿಯಲ್ಲಿರುವ ಆಕ್ಸಿಜನ್ ಪಡೆದು ರೋಗಿಗೆ ಸರಬರಾಜು ಮಾಡಬಲ್ಲ ಜನರೇಟರ್ ಸದ್ಯವೇ ಲಭ್ಯವಾಗಲಿದೆ: ಸಚಿವ ಡಾ.ಸುಧಾಕರ್

ತುರ್ತು ಲಸಿಕೆ ಉತ್ಪಾದನೆ ತಯಾರಿ ಸುಲಭವಲ್ಲ. ಲಸಿಕೆ ವಿತರಣೆಯಲ್ಲಿ ಸವಾಲುಗಳಿವೆ. ಮೊದಲು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಈಗ ಲಸಿಕೆ ಪಡೆಯಲು ಡಿಮ್ಯಾಂಡ್ ಇದೆ. ಈ ವಿಷಯದಲ್ಲೂ ವಿಪಕ್ಷಗಳು ಎಲ್ಲದರಲ್ಲೂ ರಾಜಕೀಯ ಮಾಡುತ್ತಿವೆ ಎಂದು ಅವರು ದೂರಿದರು.

ಗಾಳಿಯಲ್ಲಿರುವ ಆಕ್ಸಿಜನ್ ಪಡೆದು ರೋಗಿಗೆ ಸರಬರಾಜು ಮಾಡಬಲ್ಲ ಜನರೇಟರ್ ಸದ್ಯವೇ ಲಭ್ಯವಾಗಲಿದೆ: ಸಚಿವ ಡಾ.ಸುಧಾಕರ್
ಡಾ.ಕೆ. ಸುಧಾಕರ್​
Follow us
guruganesh bhat
|

Updated on: May 14, 2021 | 7:32 PM

ಚಿಕ್ಕಬಳ್ಳಾಪುರ: ಗಾಳಿಯಲ್ಲಿರುವ ಆಕ್ಸಿಜನ್ ಪಡೆದು ರೋಗಿಗೆ ಸರಬರಾಜು ಮಾಡಬಲ್ಲ ಡಿಆರ್​ಡಿಓ ಅಭಿವೃದ್ಧಿಪಡಿಸಿದ ಆಕ್ಸಿಜನ್ ಜನರೇಟರ್​ನ್ನು ಕೆಲವೇ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳ ಬಳಕೆಗಾಗಿ ನೀಡಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದರು. ಡಿಆರ್​ಡಿಓ ಮತ್ತು ಡಾ.ರೆಡ್ಡಿಸ್ ಲ್ಯಾಬ್ ಜೊತೆಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಬೆಂಗಳೂರಿನ ಸಿ.ವಿ.ರಾಮನ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಾಳೆ ಅಥವಾ ನಾಡಿದ್ದು ಈ ಸೇವೆಯನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಆಸ್ಪತ್ರೆಗೆ ಸಚಿವ ಡಾ.ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊವಿಡ್ ಕೆಲಸ ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಕಾರಣದಿಂದ ಬಾಗೇಪಲ್ಲಿ ತಹಶೀಲ್ದಾರ್ ದಿವಾಕರ್ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ನಿಮ್ಮ ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಇಲ್ಲವಾದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದರು. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಅವರಿಗೆ ಸೂಚಿಸಿದರು.

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಸ್ಥಗಿತ ನಿರ್ಧಾರ ಬಗ್ಗೆ ಗೊಂದಲ ಬೇಡ. ಈ ನಿರ್ಧಾರದಿಂದ ಹಿನ್ನೆಡೆಯಾಗಿಲ್ಲ. ತುರ್ತು ಲಸಿಕೆ ಉತ್ಪಾದನೆ ತಯಾರಿ ಸುಲಭವಲ್ಲ. ಲಸಿಕೆ ವಿತರಣೆಯಲ್ಲಿ ಸವಾಲುಗಳಿವೆ. ಮೊದಲು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಈಗ ಲಸಿಕೆ ಪಡೆಯಲು ಡಿಮ್ಯಾಂಡ್ ಇದೆ. ಈ ವಿಷಯದಲ್ಲೂ ವಿಪಕ್ಷಗಳು ಎಲ್ಲದರಲ್ಲೂ ರಾಜಕೀಯ ಮಾಡುತ್ತಿವೆ ಎಂದು ಅವರು ದೂರಿದರು.

ಇದನ್ನೂ ಓದಿ: Mahadev Prakash: ಸಿಎಂ ಯಡಿಯೂರಪ್ಪರ ಮಾಜಿ ಮಾಧ್ಯಮ ಸಲಹೆಗಾರ ಮಹಾದೇವ​ ಪ್ರಕಾಶ್ ಕೊವಿಡ್​ನಿಂದ ನಿಧನ 

ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

(Generator that can supply oxygen direct from the air to patient developed by DRDO will be available soon says Karnataka Health Minister Dr Sudhakar)