ಜಮೀನಿಗೆ ಟಿಸಿ ಅಳವಡಿಸಲು 45,000 ರೂ. ಲಂಚಕ್ಕೆ ಬೇಡಿಕೆ: ಜೆಸ್ಕಾಂ AEE, ಪವರ್​ಮ್ಯಾನ್​ ACB ಬಲೆಗೆ

| Updated By: Digi Tech Desk

Updated on: Jun 23, 2021 | 1:38 PM

ಹೂವಿನಹಡಗಲಿಯಲ್ಲಿ ಜೆಸ್ಕಾಂ ಎಇಇ ಭಾಸ್ಕರ್​​ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಹೂವಿನಹಡಗಲಿರುವ ಜೆಸ್ಕಾಂ ಕಚೇರಿಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಂದ ಹಾಗೆ, ಭಾಸ್ಕರ್ ರೈತರೊಬ್ಬರ​ ಜಮೀನಿಗೆ ಟಿಸಿ ಅಳವಡಿಸಲು 45,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಹೇಳಲಾಗಿದೆ.

ಜಮೀನಿಗೆ ಟಿಸಿ ಅಳವಡಿಸಲು 45,000 ರೂ. ಲಂಚಕ್ಕೆ ಬೇಡಿಕೆ: ಜೆಸ್ಕಾಂ AEE, ಪವರ್​ಮ್ಯಾನ್​ ACB ಬಲೆಗೆ
ACB ಕಚೇರಿ
Follow us on

ವಿಜಯನಗರ: ಹೂವಿನಹಡಗಲಿಯಲ್ಲಿ ಜೆಸ್ಕಾಂ ಎಇಇ ಭಾಸ್ಕರ್​​ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಹೂವಿನಹಡಗಲಿಯಲ್ಲಿರುವ ಜೆಸ್ಕಾಂ ಕಚೇರಿಯಲ್ಲಿ ಭಾಸ್ಕರ್​ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಂದ ಹಾಗೆ, ಭಾಸ್ಕರ್ ರೈತರೊಬ್ಬರ​ ಜಮೀನಿಗೆ ಟಿಸಿ ಅಳವಡಿಸಲು 45,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಹೇಳಲಾಗಿದೆ. ಜೊತೆಗೆ, ಮುಂಗಡವಾಗಿ 25 ಸಾವಿರ ರೂ. ಲಂಚ ಸಹ ಪಡೆದಿದ್ದರಂತೆ.

ಇಂದು ಬಾಕಿ ಉಳಿದಿದ್ದ 20,000 ರೂಪಾಯಿ ಲಂಚವನ್ನು ಎಇಇ ಪರವಾಗಿ ಪವರ್​ಮ್ಯಾನ್ ಒಬ್ಬರು ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇದೀಗ, ಜಿಲ್ಲೆಯ ಬಸರಹಳ್ಳಿತಾಂಡಾದ ರೈತ ಉಮೇಶ್​ನಿಂದ ಲಂಚ ಸ್ವೀಕಾರ ಮಾಡಿದ ಎಇಇ ಭಾಸ್ಕರ್ ಹಾಗೂ ಪವರ್​ಮ್ಯಾನ್​ ಮಾರುತಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ DySP ಎಂ.ಸಿ.ಶಿವಕುಮಾರ್​ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

Published On - 6:37 pm, Fri, 19 March 21