ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ಗೆ ಪೊಲೀಸ್ ನೊಟೀಸ್
ಆಸ್ಪತ್ರೆ ಸಿಬ್ಬಂದಿ ಜೊತೆ ಮಾತನಾಡಿದ್ದಾಗಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಪೊಲೀಸರಿಗೆ ತಿಳಿಸಿದ್ದರು. ಆದರೆ ವೆಂಕಟೇಶ್ ಅವರ ಜತೆ ನಮ್ಮ ಸಿಬ್ಬಂದಿ ಮಾತನಾಡಿಲ್ಲ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ. ಹೀಗಾಗಿ ವೆಂಕಟೇಶ್ ಅವರು ಯಾವ ನಂಬರ್ಗೆ ಕರೆ ಮಾಡಿದ್ದರು? ಯಾವ ಆಸ್ಪತ್ರೆಗೆ ಕಾಲ್ ಮಾಡಿದ್ದರು? ಎಂಬ ಬಗ್ಗೆ ಮಾಹಿತಿ ಕೇಳಿ ಗಿರಿನಗರ ಪೊಲೀಸರು ನೊಟೀಸ್ ಜಾರಿಮಾಡಿದ್ದಾರೆ.
ಬೆಂಗಳೂರು: ಕೊವಿಡ್ ಲಸಿಕೆಗೆ ಕಮಿಷನ್ ಪಡೆಯುವ ಆರೋಪ ವಿಚಾರವಾಗಿ ಬಿಜೆಪಿ ರವಿ ಸುಬ್ರಹ್ಮಣ್ಯ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಹೆಚ್.ಎಂ. ವೆಂಕಟೇಶ್ರಿಗೆ ನಗರ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ವಿಚಾರಣೆಗೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿರುವ ಪೊಲೀಸರು, ಈ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ಜೊತೆ ಮಾತನಾಡಿದ್ದಾಗಿ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಪೊಲೀಸರಿಗೆ ತಿಳಿಸಿದ್ದರು. ಆದರೆ ವೆಂಕಟೇಶ್ ಅವರ ಜತೆ ನಮ್ಮ ಸಿಬ್ಬಂದಿ ಮಾತನಾಡಿಲ್ಲ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ. ಹೀಗಾಗಿ ವೆಂಕಟೇಶ್ ಅವರು ಯಾವ ನಂಬರ್ಗೆ ಕರೆ ಮಾಡಿದ್ದರು? ಯಾವ ಆಸ್ಪತ್ರೆಗೆ ಕಾಲ್ ಮಾಡಿದ್ದರು? ಎಂಬ ಬಗ್ಗೆ ಮಾಹಿತಿ ಕೇಳಿ ಗಿರಿನಗರ ಪೊಲೀಸರು ನೊಟೀಸ್ ಜಾರಿಮಾಡಿದ್ದಾರೆ.
ಈ ಮುನ್ನ ತಮ್ಮ ಮೇಲೆ ಕೇಳಿಬಂದಿರುವ ಲಸಿಕೆಗೆ ಕಮಿಶನ್ ಪಡೆದ ಆರೋಪವನ್ನು ಶಾಸಕ ರವಿ ಸುಬ್ರಹ್ಮಣ್ಯ ಅಲ್ಲಗಳೆದಿದ್ದರು. ಈ ಆರೋಪ ರಾಜಕೀಯ ಪ್ರೇರಿತವಾಗಿದೆ. ಇದರ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ. ಇಂತಹ ಸಮಯದಲ್ಲಿ ಹೊಲಸು ರಾಜಕೀಯ ಮಾಡಬಾರದು. ರಾಜಕೀಯವಾಗಿ ನನ್ನನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಳಿಕ ಬಸವನಗುಡಿ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಪ್ರತಿಕ್ರಿಯೆ ನೀಡಿದ್ದರು.
ಕೊವಿಡ್ ಲಸಿಕೆಗೆ ಕಮಿಷನ್ ಪಡೆಯುವ ಆರೋಪ ವಿಚಾರಕ್ಕೆ ಸಂಬಂಧಿಸಿ ನಗರದ ಹೊಸಕೆರೆಹಳ್ಳಿ ಬಳಿ ರಿಂಗ್ ರಸ್ತೆಯಲ್ಲಿರುವ ಅನುಗ್ರಹ ವಿಠ್ಠಲ ಆಸ್ಪತ್ರೆಗೆ ಶಾಸಕ ರವಿ ಸುಬ್ರಹ್ಮಣ್ಯ ಭೇಟಿ ನೀಡಿದ್ದಾರೆ. ನೀವು ನನಗೆ ಯಾವಾಗ ಹಣವನ್ನು ಕೊಟ್ಟಿದ್ದೀರಿ. ನೇರವಾಗಿ ಹಣ ಕೊಟ್ಟಿದ್ದೀರಾ, ಇಲ್ಲಾ ಮನೆಗೆ ಕಳಿಸಿದ್ದೀರಾ. ಹೇಗೆ ಹಣ ಕೊಟ್ಟಿದ್ದೀರಿ ಹೇಳಿ ಎಂದು ಆಸ್ಪತ್ರೆ ಆಡಳಿತ ಮಂಡಳಿಗೆ ಶಾಸಕ ರವಿ ಸುಬ್ರಹ್ಮಣ್ಯ ಪ್ರಶ್ನೆ ಕೇಳಿದ್ದಾರೆ.
ಇದನ್ನೂ ಓದಿ: ಅಹಮದ್ನಗರದ 8,000 ಮಕ್ಕಳಲ್ಲಿ ಕೊವಿಡ್-19 ಸೋಂಕು, ಮಹಾರಾಷ್ಟ್ರಕ್ಕೆ ಈಗಲೇ ಕೊರನಾ ಸೋಂಕಿನ 3ನೇ ಅಲೆ ಅಪ್ಪಳಿಸಿದೆಯೇ?
ಕೊವಿಡ್ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳ ಸಹಾಯಕ್ಕೆ ಮುಂದಾದ ಸೋನು ಸೂದ್
(Girinagar Police sent notice to Social Worker Venkatesh to provide information on Covid Vaccine commission by MLA Ravi Subramanya)