Benefits of Medicinal Plants: ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತನ್ನು ಮರೆಯಿರಿ; ಮನೆಯಲ್ಲೇ ಇರುವ ಗಿಡಗಳ ಔಷಧೀಯ ಗುಣಗಳ ಬಗ್ಗೆ ತಿಳಿಯಿರಿ

ಲಾಕ್​ಡೌನ್ ಜಾರಿಯಾಗಿರುವುದರಿಂದ ಹತ್ತಿರದ ಅಂಗಡಿಗಳು ಕೂಡ ಬಂದ್ ಅಗಿವೆ. ಆದರೆ ಶೀತ, ನೆಗಡಿ, ಕೆಮ್ಮು ವಿಪರೀತವಾಗಿದ್ದರೆ. ಹೆದರುವುದು ಬೇಡ ಮನೆಯಲ್ಲಿಯೇ ಇರುವ ಒಂದಷ್ಟು ಗಿಡಮೂಲಿಕೆಗಳನ್ನು ಬಳಸಿ.

Benefits of Medicinal Plants: ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತನ್ನು ಮರೆಯಿರಿ; ಮನೆಯಲ್ಲೇ ಇರುವ ಗಿಡಗಳ ಔಷಧೀಯ ಗುಣಗಳ ಬಗ್ಗೆ ತಿಳಿಯಿರಿ
ಅಮೃತಬಳ್ಳಿ
Follow us
preethi shettigar
|

Updated on: Jun 01, 2021 | 8:56 AM

ಮನೆ ಮದ್ದಿನ ವಿಶೇಷತೆಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಬಹುಶಃ ಅವುಗಳನ್ನು ತೆಗೆದುಕೊಳ್ಳುವಲ್ಲಿ ಸ್ವಲ್ಪ ಹಿಂಜರಿಕೆ ಇದೆ. ಆದರೆ ಕೊರೊನಾದಂತಹ ಈ ಕಾಲಘಟ್ಟದಲ್ಲಿ ಮೆಡಿಕಲ್ ಅಥವಾ ಆಸ್ಪತ್ರೆಗಳಿಗೆ ಕೊರೊನಾ ಹೊರತುಪಡಿಸಿ ಇನ್ನಿತರ ಕಾಯಿಲೆಗಳ ಔಷಧಿಗಾಗಿ ಹೋಗುವುದು ಕಷ್ಟ ಸಾಧ್ಯವಾಗಬಹುದು. ಅದರಲ್ಲೂ ಲಾಕ್​ಡೌನ್ ಜಾರಿಯಾಗಿರುವುದರಿಂದ ಹತ್ತಿರದ ಅಂಗಡಿಗಳು ಕೂಡ ಬಂದ್ ಅಗಿವೆ. ಆದರೆ ಶೀತ, ನೆಗಡಿ, ಕೆಮ್ಮು ವಿಪರೀತವಾಗಿದ್ದರೆ. ಹೆದರುವುದು ಬೇಡ ಮನೆಯಲ್ಲಿಯೇ ಇರುವ ಒಂದಷ್ಟು ಗಿಡಮೂಲಿಕೆಗಳನ್ನು ಬಳಸಿ. ಮೊದಲು ನಾವು ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಮುನ್ನ ನಂಬಿಕೆ ಮುಖ್ಯ. ಹೀಗಾಗಿ ಹಿಂದಿನ ಆಯುರ್ವೇದದ ಔಷಧಿ ಇಂದಿಗೂ ತನ್ನ ಆರೋಗ್ಯಯುತ ಗುಣಗಳನ್ನು ಕಳೆದುಕೊಂಡಿಲ್ಲ. ಹಾಗಿದ್ದರೆ ಮನೆಯಲ್ಲಿಯೇ ಸಿಗುವ ಔಷಧಿಯುತ ಸಸ್ಯಗಳು ಯಾವುದು? ಅದರಿಂದ ಏನು ಉಪಯೋಗ ಎಂದು ತಿಳಿದುಕೊಳ್ಳೋಣ.

ಸಂಬಾರ ಗಿಡ ಸಂಬಾರ ಎಲೆಯನ್ನು ಸಾಮಾನ್ಯವಾಗಿ ಕಫ, ಶೀತ, ಕೆಮ್ಮಿಗೆ ಬಳಸಲಾಗುತ್ತದೆ. ಸಂಬಾರ ಎಲೆಯನ್ನು ದೊಡ್ಡಪತ್ರೆ ಎಂದು ಕೂಡ ಕೆಲವರು ಕರೆಯುದುಂಟು. ಇದನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಶೀತ, ಕೆಮ್ಮು ಕಡಿಮೆಯಾಗುತ್ತದೆ. ಇನ್ನು ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಕಂಡುಬಂದರೆ ಸಂಬಾರ ಗಿಡದ ಒಂದು ಎಲೆಯನ್ನು ಕುಕ್ಕರ್ ಅಥವಾ ಇನ್ನಿತರ ಬಿಸಿ ಪಾತ್ರದ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿ ನಂತರ ಅದನ್ನು ಮಕ್ಕಳ ನೆತ್ತಿ ಭಾಗ ಅಥವಾ ಎದೆಯ ಭಾಗದಲ್ಲಿ ಇಡಿ ಆಗ ಶೀತದಂತಹ ಸಮಸ್ಯೆ ದೂರವಾಗುತ್ತದೆ. ಇನ್ನು ಕೊರೊನಾ ಇರುವುದರಿಂದ ಶುಂಠಿ ಜತೆಗೆ ಇದನ್ನು ನೀರಿನಲ್ಲಿ ಹಾಕಿ ಬಿಸಿ ಮಾಡಿ ಸ್ಟಿಮ್ ತೆಗೆದುಕೊಳ್ಳುವುದು ಉತ್ತಮ.

sambar balli

ಸಂಬಾರ ಗಿಡ

ಕಹಿ ಬೇವು ಕಹಿ ಬೇವಿನ ಸೊಪ್ಪಿನಲ್ಲಿ ಕ್ರಿಮಿನಾಶಕ ಗುಣ ಇದೆ. ಇದನ್ನು ನೀರಿಗೆ ಹಾಕಿ ಕಷಾಯ ಮಾಡಿ ಕುಡಿಯುವುದರಿಂದ ಹೊಟ್ಟೆ ಹುಳುವಿನ ಸಮಸ್ಯೆ ದೂರವಾಗುತ್ತದೆ. ಇನ್ನು ಬೇವಿನ ಕಡ್ಡಿಯಿಂದ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆ ಮತ್ತು ಒಸಡಿನ ಸಮಸ್ಯೆ ದೂರವಾಗುತ್ತದೆ. ಇನ್ನು ಬೇವಿನ ಎಲೆಯಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಮೊಡವೆ ಮುಖದಲ್ಲಿ ಹೆಚ್ಚಾಗಿದ್ದರೆ ಇದನ್ನು ರುಬ್ಬಿ ಹಚ್ಚಿಕೊಂಡರೆ ಒಳ್ಳೆಯದು. ಮಧುಮೇಹ, ನಿಶ್ಶಕ್ತಿಯಂತಹ ಕಾಯಿಲೆಗೂ ಕೂಡ ಇದು ರಾಮಬಾಣ.

 Neem

ಕಹಿ ಬೇವು

ತುಂಬೆ ಹೂವು ತುಂಬೆ ಹೂವು ಎಂದರೆ ಶಿವನಿಗೆ ಪ್ರಿಯವಾದದ್ದು ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಆದರೆ ಇದರಲ್ಲಿ ಇರುವ ಆರೋಗ್ಯ ಗುಣಗಳ ಬಗ್ಗೆ ಕೂಡ ತಿಳಿದುಕೊಳ್ಳುವುದು ಸೂಕ್ತ. ತುಂಬೆ ಗಿಡವನ್ನು ಚೆನ್ನಾಗಿ ಒಣಗಿಸಿ ಗಾಯ ಇರುವ ಭಾಗಕ್ಕೆ ಹಚ್ಚುವುದರಿಂದ ಗಾಯಬೇಗ ಗುಣವಾಗುತ್ತದೆ. ಇನ್ನು ಕೆಪ್ಪಟ್ರಾಯದಂತ ಸಮಸ್ಯೆ ಇದ್ದವರು ಈ ತುಂಬೆ ಗಿಡದ ಎಲೆಯನ್ನು ರುಬ್ಬಿ ಹಚ್ಚುವುದರಿಂದ ಬೇಗ ವಾಸಿಯಾಗುತ್ತದೆ. ಇನ್ನು ಬೆಯಿಸಿದ ತುಂಬೆ ಹೂವನ್ನು ಅನ್ನದ ಜೊತೆ ಸೇವಿಸಿದರೆ ಮಹಿಳೆಯರಲ್ಲಿ ಉಂಟಾಗುವ ಬಿಳಿ ಲೋಳೆ ಸಮಸ್ಯೆ ದೂರವಾಗುತ್ತದೆ.

tumbe huvu

ತುಂಬೆ ಹೂವು

 ಒಂದೆಲಗದ ಎಲೆ ಬ್ಯಾಕ್ಟೀರಿಯಾ ಅಥವಾ ಸೋಂಕಿನಂತಹ ಸಮಸ್ಯೆಯನ್ನು ಒಂದೆಲಗ ದೂರ ಮಾಡುತ್ತದೆ. ಸರ್ಪಸುತ್ತು, ಮೂತ್ರನಾಳದಲ್ಲಿ ಉಂಟಾಗು ಸೋಂಕು, ಭೇದಿ, ಕಾಲರಾ ಈ ರೀತಿಯ ರೋಗಕ್ಕೂ ಕೂಡ ಇದು ರಾಮಬಾಣವಾಗಿದೆ. ಇನ್ನು ಒಂದೆಲಗದ ಎಲೆಯನ್ನು ಬೆಳಿಗ್ಗೆ ಕಾಲಿ ಹೊಟ್ಟೆಗೆ ಸೇವಿಸುವುದರಿಂದ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ. ಓದುವ ಮಕ್ಕಳು ಬೆಳಿಗ್ಗೆ 2 ರಿಂದ 3 ಎಲೆ ಸೇವಿಸುವುದು ಉತ್ತಮ.

brahmi leaves

ಒಂದೆಲಗ ಎಲೆ

ಅಮೃತಬಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಮೃತಬಳ್ಳಿ ಹೆಚ್ಚು ಉಪಯುಕ್ತಕಾರಿಯಾಗಿದೆ. ಅದರಲ್ಲೂ ಕೊರೊನಾ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಅಮೃತಬಳ್ಳಿಯ ಉಪಯೋಗವನ್ನು ತಿಳಿದುಕೊಳ್ಳಬೇಕಾಗುತ್ತದೆ. ಅಮೃತ ಬಳ್ಳಿ ತಾಮ್ರ, ಕಬ್ಬಿಣ, ರಂಜಕ, ಸತು, ಕ್ಯಾಲ್ಸಿಯಂ ಅಂಶವನ್ನು ಹೊಂದಿದೆ. ಇದರ ಎಲೆಗಳನ್ನು ತಿನ್ನುವುದರಿಂದ ಉರಿಯೂತ, ಕ್ಯಾನ್ಸರ್​ನಂತಹ ಸಮಸ್ಯೆಗಳು ದೂರವಾಗುತ್ತದೆ.

tinospora

ಅಮೃತಬಳ್ಳಿ

ಇದನ್ನೂ ಓದಿ:

ಒಂದೇ ತೆರನಾದ ಅಭ್ಯಾಸ ಬಿಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇರಲಿ