Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ದುಲ್ ಕಲಾಂ ವಸತಿ ಶಾಲೆ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು, ತಂದೆಯ ದುಃಖಕ್ಕೆ ಎಣೆಯಿಲ್ಲ

ಅಬ್ದುಲ್ ಕಲಾಂ ವಸತಿ ಶಾಲೆ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು, ತಂದೆಯ ದುಃಖಕ್ಕೆ ಎಣೆಯಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 14, 2025 | 10:22 AM

ಶಾಲೆಯ ಸಿಬ್ಬಂದಿ ಹೇಳುವ ಪ್ರಕಾರ ನಿನ್ನೆ ಮಧ್ಯಾಹ್ನ ಬಾಲಕಿ ಅನಾರೋಗ್ಯದ ಬಗ್ಗೆ ದೂರಿದ್ದಾಳೆ ಮತ್ತು ಆಕೆಯನ್ನು ಅಟೋವೊಂದರಲ್ಲಿ ಕೊಡ್ಲಿಪೇಟೆಯ ಆಸ್ಪತ್ರೆಗೆ ಕಳಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆಗೆ ಪ್ರಜ್ಞೆ ಇರಲಿಲ್ಲವಂತೆ. ಕೊಡ್ಲಿಪೇಟೆಯಿಂದ ಅಂಬ್ಯುಲೆನ್ಸ್ ಒಂದರಲ್ಲಿ ಆಕೆಯನ್ನು ಹಾಸನಕ್ಕೆ ಕಳಿಸಲಾಗಿದೆಯಾದರೂ ಅಲ್ಲಿಗೆ ತಲುಪುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿದೆ.

ಹಾಸನ, 14 ಮಾರ್ಚ್: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕ್ಯಾತೆ ಗ್ರಾಮದಲ್ಲಿರುವ ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ (Dr APJ Abdul Kalam Residential School) ಓದುತ್ತಿದ್ದ 13-ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ನಿನ್ನೆ ಮಧ್ಯಾಹ್ನ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಮಗುವಿನ ತಂದೆ ಶಿವಕುಮಾರ್ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ್ದು ಮಗಳನ್ನು ಕಳೆದುಕೊಂಡು ಅವರು ಅನುಭವಿಸುತ್ತಿರುವ ದುಃಖ, ನೋವು ಅಪಾರ. ಅಳುತ್ತಾ, ಬಿಕ್ಕುತ್ತಾ ಮಾತಾಡುವ ಅವರು ಮಗಳಿಗೆ ಹೊಟ್ಟೆನೋವಿನ ಸಮಸ್ಯೆ ಕಾಡುತ್ತಿತ್ತು ಮತ್ತು ಅದಕ್ಕೋಸ್ಕರ ಮಾತ್ರೆ ಕೂಡ ತೆಗೆದುಕೊಳ್ಳುತ್ತಿದ್ದಳು ಎನ್ನುತ್ತಾರೆ. ಮರಣೋತ್ತರ ಪರೀಕ್ಷೆಯ ನಂತರವೇ ಬಾಲಕಿಯ ಆಕಸ್ಮಿಕ ಸಾವಿನ ಕಾರಣ ಗೊತ್ತಾಗಬಹುದು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಶಾಲೆಯ ವಿದ್ಯುತ್ ವೈರ್ ತಗುಲಿ ವಿದ್ಯಾರ್ಥಿನಿ ಸಾವು