ಯಡಿಯೂರಪ್ಪ ₹ 2,500 ಕೋಟಿ ಕೊಟ್ಟು ಮುಖ್ಯಮಂತ್ರಿಯಾಗಿದ್ದು ಅಂತ ನಾನು ಹೇಳಿಲ್ಲ: ಬಸನಗೌಡ ಯತ್ನಾಳ್
ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿವೈ ವಿಜಯೇಂದ್ರ ಪೋರ್ಜರಿ ಮಾಡಿದ ಸಂಗತಿ ಸತ್ಯ, ಅದನ್ನು ಹಿಂದೆಯೂ ಹೇಳಿದ್ದೆ ಮತ್ತು ಈಗಲೂ ಹೇಳುತ್ತೇನೆ, ಹೇಳೋದನ್ನು ಹೇಳಿ ನಂತರ ಹೇಳಿದ್ದಕ್ಕೆ ಕ್ಷಮಾಪಣೆ ಕೇಳುವ ಅಥವಾ ವಿಷಾದ ವ್ಯಕ್ತಪಡಿಸುವ ಜಾಯಮಾನ ತನ್ನದಲ್ಲ ಎಂದು ಬಸನಗೌಡ ಯತ್ನಾಳ್ ಹೇಳಿದರು.
ಬೆಂಗಳೂರು, 14 ಮಾರ್ಚ್: ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಾನ್ಯಾವತ್ತೂ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಶನ್ (40% commission) ಪಡೆದು ಕೆಲಸ ಮಾಡುತ್ತಿದೆ ಎಂದು ಹೇಳಿಲ್ಲ ಮತ್ತ್ತು ರಾಮದುರ್ಗದಲ್ಲಿ ಯಡಿಯೂರಪ್ಪ (BS Yediyurappa) ಎರಡೂವರೆ ಸಾವಿರ ಕೋಟಿ ರೂ. ಕೊಟ್ಟು ಸಿಎಂ ಆಗಿದ್ದಾರೆಂದು ತಾನು ಹೇಳಲಿಲ್ಲ, ಅದನ್ನು ದಲ್ಲಾಳಿಗಳ ವಿಷಯದಲ್ಲಿ ಹೇಳಿದ್ದು ಎಂದರು. ದೆಹಲಿಯಲ್ಲಿರುವ ವರಿಷ್ಠರು ತನಗೆ ಆಪ್ತರು ಸಿಎಂ ಮಾಡಿಸುತ್ತೇನೆ, ಬಿಜೆಪಿ ರಾಜ್ಯಾಧ್ಯಕ್ಷ ಮಾಡಿಸುತ್ತೇನೆ ಅಂತ ದಲಾಳಿಗಳು ಫೋನ್ ಮಾಡುತ್ತಾರೆ, ಅವರ ಬಗ್ಗೆ ಎಚ್ಚರದಿಂದಿರಬೇಕು, ತನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಟಾಪಟಿ ನಡೆದಿದ್ದು ಎಂದು ಯತ್ನಾಳ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸ್ಪೀಕರ್ ತಮ್ಮ ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್