ಪ್ರವಾಸಿಗರೇ ಗಮನಿಸಿ, ಗೋಕರ್ಣ ಸಮುದ್ರ ತೀರದಲ್ಲಿ 144 ಸೆಕ್ಷನ್ ಜಾರಿ, ಮುಂದಿನ 1ತಿಂಗಳು ಬೀಚ್ ಪ್ರವೇಶಕ್ಕೆ ನಿರ್ಬಂಧ

| Updated By: guruganesh bhat

Updated on: Sep 13, 2021 | 10:20 PM

ಅನುಮತಿ ಪಡೆಯದೇ ಇನ್ನು ಮುಂದೆ ಯಾರೂ ಗೋಕರ್ಣ ಬೀಚ್‌ಗೆ ತೆರಳುವಂತಿಲ್ಲ.

ಪ್ರವಾಸಿಗರೇ ಗಮನಿಸಿ, ಗೋಕರ್ಣ ಸಮುದ್ರ ತೀರದಲ್ಲಿ 144 ಸೆಕ್ಷನ್ ಜಾರಿ, ಮುಂದಿನ 1ತಿಂಗಳು ಬೀಚ್ ಪ್ರವೇಶಕ್ಕೆ ನಿರ್ಬಂಧ
Follow us on

ಗೋಕರ್ಣ: ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಎಲ್ಲಾ ಬೀಚ್​ಗಳ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಒಂದು ತಿಂಗಳ ಕಾಲ ಗೋಕರ್ಣದ ಎಲ್ಲಾ ಸಮುದ್ರ ತೀರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿಲಾಗಿದ್ದು, ಪ್ರವಾಸಿಗರು ಮುಂದಿನ ಒಂದು ತಿಂಗಳ ಕಾಲ ಸಮುದ್ರ ತೀರಗಳನ್ನು ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಆದೇಶ ಹೊರಡಿಸಿದಿದ್ದಾರೆ.

ಗೋಕರ್ಣ ಬೀಚ್‌ಗಳಲ್ಲಿ ಪ್ರವಾಸಿಗರು ಸಾವನ್ನಪ್ಪುವುದನ್ನು ತಪ್ಪಿಸಲು 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅನುಮತಿ ಪಡೆಯದೇ ಇನ್ನು ಮುಂದೆ ಯಾರೂ ಗೋಕರ್ಣ ಬೀಚ್‌ಗೆ ತೆರಳುವಂತಿಲ್ಲ. ಈಗಾಗಲೇ ರಾಜ್ಯ ಹಾಗೂ ಹೊರ ರಾಜ್ಯದ ಹಲವು ಪ್ರವಾಸಿಗರು ಗೋಕರ್ಣದಲ್ಲಿ ಸಮುದ್ರಕ್ಕಿಳಿದು ಜೀವ ಕಳೆದುಕೊಂಡಿದ್ದರು. ಪೊಲೀಸರು ಹಾಗೂ ಲೈಫ್‌ ಗಾರ್ಡ್ಸ್ ಸಿಬ್ಬಂದಿ ತಡೆದರೂ ಬೇರೆಡೆಯಿಂದ ಕಣ್ಣು ತಪ್ಪಿಸಿ ಸಮುದ್ರಕ್ಕಿಳಿದು ನೀರು ಪಾಲಾಗುತ್ತಿದ್ದರು. ಈ ಕಾರಣದಿಂದ ಸೇಫ್ ಬೀಚ್ ಹಾಗೂ ಡೇಂಜರ್ ಬೀಚ್ ಎಂದು ಎರಡು ವಿಭಾಗವನ್ನಾಗಿ ಪೊಲೀಸರು ಸಮುದ್ರ ತೀರವನ್ನು ವಿಂಗಡಿಸಿದ್ದಾರೆ. ಆದರೂ ಸದ್ಯದ ಮಟ್ಟಿಗೆ ಯಾರೂ ಸಮುದ್ರಕ್ಕಿಳಿಯದಂತೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ವಾರಾಂತ್ಯಗಳಂದು ಬೆಂಗಳೂರು ಮತ್ತಿತರ ನಗರಗಳು ಮತ್ತು ಉತ್ತರ ಕರ್ನಾಟಕದ ಭಾಗದಿಂದ ನೂರಾರು ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸುತ್ತಾರೆ. ಇತ್ತೀಚಿನ ಕೆಲವು ದಿನಗಳಲ್ಲಿ ಹಲವು ಪ್ರವಾಸಿಗರು ಸಮುದ್ರ ಪಾಲಾದ ಘಟನೆ ನಡೆದಿದೆ. ಅಲ್ಲದೇ ಇತ್ತೀಚಿಗಷ್ಟೇ ಸೆಲ್ಪಿ ತೆಗೆಯಲು ಹೋದ ಪ್ರವಾಸಿಗನೋರ್ವ ಸಮುದ್ರದಲ್ಲಿ ಎಲ್ಲರ ಎದುರೇ ಕೊಚ್ಚಿಕೊಂಡು ಹೋದ ಘಟನೆಯೂ ನಡೆದಿತ್ತು.

ಇದನ್ನೂ ಓದಿ: 

CA Success Story: ಸಿಎ ಪರೀಕ್ಷೆಯಲ್ಲಿ 800ಕ್ಕೆ 614 ಅಂಕ ಗಳಿಸಿ ದೇಶಕ್ಕೇ ಮೊದಲ ಸ್ಥಾನ ಪಡೆದ ನಂದಿನಿ; ಈಕೆಯ ಅಣ್ಣನೂ 18ನೇ ರ‍್ಯಾಂಕ್

ಅಮೆರಿಕದ ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಆಯ್ಕೆಯಾದ ಉತ್ತರ ಕನ್ನಡದ ದಿನೇಶ್ ವಸಂತ ಹೆಗಡೆ

(Gokarna Beach 144 section announced for next 1 month)