ವಿಜಯಪುರ: ಬಬಲೇಶ್ವರ ತಾಲೂಕಿನ ಹಲಗಣಿ ಗ್ರಾಮದಲ್ಲಿ 2 ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ. 2 ಮನೆಗಳಲ್ಲಿದ್ದ ನಗದು, ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಗ್ರಾಮದ ರಾಮನಗೌಡ ಬಿರಾದಾರ್ ಮತ್ತು ಲಕ್ಷ್ಮೀ ಗುಣದಾಳ ಮನೆಗಳು ಎಂದು ತಿಳಿದು ಬಂದಿದೆ. ಹಾಗೆಯೇ ಸಿಂದಗಿ ತಾಲೂಕಿನಲ್ಲಿನ ಬ್ಯಾಂಕ್ಗೆ ಕನ್ನ ಹಾಕಲು ಹೊರಟಿದ್ದ ಕಳ್ಳರ ಪ್ರಯತ್ನ ವಿಫಲಗೊಂಡಿದೆ.
ರಾಮನಗೌಡ ಬಿರಾದಾರ್ ಮತ್ತು ಲಕ್ಷ್ಮೀ ಗುಣದಾಳ ಅವರ ಮನೆ ಒಳಗಿಂದ ಬೀಗ ಹಾಕಲಾಗಿತ್ತು. ಮನೆಯವರು ಮಲಗಿದ್ದನ್ನು ಗಮನಿಸಿದ ಕಳ್ಳರು ಮೇಲ್ಛಾವಣಿ ಮೇಲೆ ಹತ್ತಿ ಕಳ್ಳತನ ಎಸಗಿದ್ದಾರೆ. ಮನೆಯಲ್ಲಿದ್ದ 60 ಸಾವಿರ ನಗದು, 10 ಗ್ರಾಂ ಚಿನ್ನ ಕಳುವಾಗಿದೆ. ಸ್ಥಳಕ್ಕೆ ಇಆರ್ಎಸ್ಎಸ್ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮ ಬ್ಯಾಂಕ್‌ನಲ್ಲಿ ದರೋಡೆಗೆ ಯತ್ನ:
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಕಳ್ಳತನ ಮಾಡಲು ಕಿಡಿಗೇಡಿಗಳು ಯತ್ನಿಸಿದ್ದಾರೆ. ಮೂವರು ಕಳ್ಳರು ಗ್ರಿಲ್ ಕಟ್ ಮಾಡಿ ಬ್ಯಾಂಕ್ ಪ್ರವೇಶಿಸಿದ್ದಾರೆ. ಲಾಕರ್ ಓಪನ್ ಮಾಡುವಾಗ ಸೈರನ್ ಶಬ್ದವಾದ ಹಿನ್ನೆಲೆಯಲ್ಲಿ ಹೆದರಿ ಸ್ಥಳದಿಂದ ಪರಾರಿಯಾಗಿದ್ದಾರೆ. ದೃಶ್ಯವನ್ನು ಬ್ಯಾಂಕ್ಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಸೆರೆ ಹಿಡಿದಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಗಿಯದ ಕಳ್ಳರ ಕಾಟ:
ಎರಡು ದಿನಗಳ ಹಿಂದೆಯಷ್ಟೇ ಚಡಚಣ ತಾಲೂಕಿನ ರೇವತಗಾಂವ ಗ್ರಾಮದ 2 ಅಂಗಡಿ ಹಾಗೂ 4 ಮನೆಗಳಲ್ಲಿ ಕಳ್ಳತನ ನಡೆದಿತ್ತು. ಬೈಕ್, ನಗದು, ಚಿನ್ನಾಭರಣ ಮತ್ತು ಬಟ್ಟೆಗಳನ್ನು ಕಳ್ಳರು ಕದ್ದೊಯ್ದಿದ್ದರು. ಸ್ಥಳಕ್ಕೆ ಚಡಚಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಸುಭಾಷ ದಾಭೆ, ಸೂರಪ್ಪ ದಾಭೆ, ಅನ್ನಪೂರ್ಣ ಖಾತೆ, ಸಿದ್ದಪ್ಪ ಜಾಬಗೊಂಡೆ, ಸಿದ್ದರಾಯ ಬಿರಾದಾರ ಎಂಬುವವರಿಗೆ ಸೇರಿದ ಮನೆಗಳು ಹಾಗೂ ಅಂಗಡಿಗಳಲ್ಲಿ ಕಳ್ಳತನ ನಡೆದಿತ್ತು. ಮನೆಗೆ ಬೀಗ ಹಾಕಿ ಮನೆಯ ಮೇಲ್ಛಾವಣಿಯ ಮೇಲೆ ಮಲಗಿದ್ದ ವೇಳೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿತ್ತು.
ಇದನ್ನೂ ಓದಿ : Serial theft: ಮೇಲ್ಚಾವಣಿ ಮೇಲೆ ಮಲಗಿದ್ದ ಮನೆಯವರು! ಅಂಗಡಿ, ಮನೆಗಳ ಸರಣಿ ಕಳ್ಳತನ: ಬೈಕ್, ನಗದು, ಚಿನ್ನಾಭರಣ ದೋಚಿ ಪರಾರಿ
ಇದನ್ನೂ ಓದಿ: ವಿಜಯಪುರ ಸರಣಿ ಮನೆ, ದೇವಸ್ಥಾನಗಳ ಕಳ್ಳತನ ಮುಂದುವರಿಕೆ: ಫಿನಾಯಿಲ್ ಮಾರಾಟ ನೆಪದಲ್ಲಿ ಬಂದವರಿಂದ ಕುಕೃತ್ಯ