ಬಾಡಿಗೆದಾರರಿಗೆ ಸಿಹಿ ಸುದ್ದಿ; ಮಾದರಿ ಬಾಡಿಗೆ ಕಾಯ್ದೆಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಚಿಂತನೆ
ಮಾದರಿ ಬಾಡಿಗೆ ಕಾಯ್ದೆಯನ್ನು ಕೇಂದ್ರ ಸಚಿವ ಸಂಪುಣ ಅನುಮೋದನೆ ಮಾಡಿದ ಬಳಿಕ ಒಂದು ತಿಂಗಳ ನಂತರ ಈ ಕಾಯ್ದೆಯನ್ನು ಅಳವಡಿಸಿಕೊಳ್ಳಲಾಗುತ್ತೆ. ರಾಜ್ಯದಲ್ಲಿ ಹಾಲಿ ಇರುವ ಬಾಡಿಗೆ ಕಾಯಿದೆಯನ್ನು ಸರಳೀಕರಿಸುತ್ತಿದ್ದೇವೆ ಎಂದು ಆರ್.ಅಶೋಕ ತಿಳಿಸಿದರು.
ಬಾಡಿಗೆ ದಾರ ಮತ್ತು ಮಾಲೀಕರ ವಿವಾದಗಳನ್ನು ಕೊನೆಗೊಳಿಸಲು ಮತ್ತು ಬಾಡಿಗೆ ವಸತಿ ವಲಯವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಾದರಿ ಬಾಡಿಗೆ ಕಾಯ್ದೆಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕರ್ನಾಟಕ ಕಂದಾಯ ಸಚಿವ ಆರ್.ಅಶೋಕ ಗುರುವಾರ ತಿಳಿಸಿದ್ದಾರೆ.
ಮಾದರಿ ಬಾಡಿಗೆ ಕಾಯ್ದೆಯನ್ನು ಕೇಂದ್ರ ಸಚಿವ ಸಂಪುಣ ಅನುಮೋದನೆ ಮಾಡಿದ ಬಳಿಕ ಒಂದು ತಿಂಗಳ ನಂತರ ಈ ಕಾಯ್ದೆಯನ್ನು ಅಳವಡಿಸಿಕೊಳ್ಳಲಾಗುತ್ತೆ. ರಾಜ್ಯದಲ್ಲಿ ಹಾಲಿ ಇರುವ ಬಾಡಿಗೆ ಕಾಯಿದೆಯನ್ನು ಸರಳೀಕರಿಸುತ್ತಿದ್ದೇವೆ ಎಂದು ಆರ್.ಅಶೋಕ ತಿಳಿಸಿದರು. ಈ ಮೊದಲು, ಬಾಡಿಗೆಯನ್ನು ನಿಗದಿಪಡಿಸುವಲ್ಲಿ ಸರ್ಕಾರದ ಪಾತ್ರವಿತ್ತು. ಈಗ ಬಾಡಿಗೆಯನ್ನು ಮಾಲೀಕರು ಮತ್ತು ಬಾಡಿಗೆದಾರರು ಇಬ್ಬರೂ ಸೇರಿ ನಿಗದಿಪಡಿಸಬೇಕು ಎಂಬ ನಿಯಮ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದ್ರು.
ಬಾಡಿಗೆದಾರರು ಮತ್ತು ಮಾಲೀಕರ ನಡುವೆ ಒಪ್ಪಂದವಾದರೆ ಅದನ್ನು ಕಾನೂನುಬದ್ದವಾಗಿ ಅಂತಿಮಗೊಳಿಸಬೇಕು. ಮತ್ತು ಅದನ್ನು ಸರ್ಕಾರದ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಯಾವುದೇ ವಿವಾದವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅದನ್ನು 60 ದಿನಗಳೊಳಗೆ ಪರಿಹರಿಸುತ್ತಾರೆ. ವಿವಾದಗಳನ್ನು 60 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಮತ್ತು ವಿಚಾರಣೆಯನ್ನು ಮುಂದೂಡಲು ಯಾರಾದರೂ ಯೋಜಿಸಿದರೆ, ಮೂರು ಅವಕಾಶಗಳಿಗಿಂತ ಹೆಚ್ಚು ಸಮಯ ಇರುವುದಿಲ್ಲ ಎಂದು ತಿಳಿಸಿದರು.
ಪ್ರಸ್ತುತ ಬೆಂಗಳೂರಿನಲ್ಲಿ ಸುಮಾರು ಎರಡರಿಂದ ಮೂರು ಲಕ್ಷ ಮನೆಗಳು ಖಾಲಿ ಇವೆ. ಒಮ್ಮೆ ಈ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೆ ತಂದ ಮೇಲೆ ಮಾಲೀಕರು ತಮ್ಮ ಬಾಡಿಗೆದಾರರನ್ನು ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ. ಅದರಂತೆಯೇ ಬಾಡಿಗೆ ದರ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಜನಸಾಮಾನ್ಯರಿಗೆ ಖಂಡಿತ ಅನುಕೂಲವಾಗುತ್ತದೆ. ಇದು ಕೇವಲ ಪ್ರಸ್ತಾಪವಾಗಿದೆ ಮತ್ತು ನಾವು ಇದನ್ನು ಕರ್ನಾಟಕದಲ್ಲಿ ಅಧಿಕೃತವಾಗಿ ಪರಿಚಯಿಸುವ ಮೊದಲು ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: Model Tenancy Act ಮಾದರಿ ಬಾಡಿಗೆ ಕಾಯ್ದೆಗೆ ಕೇಂದ್ರ ಅನುಮೋದನೆ: ಏನಿದು ಕಾಯ್ದೆ?