ವಿಧಾನಸೌಧದಲ್ಲಿ ದೊಡ್ಡಣ್ಣರನ್ನು 2 ಗಂಟೆ ಕೂರಿಸಿ, ಅವರ ಮುಖದ ಮೇಲೆ ಅರ್ಜಿ ಪತ್ರ ಬಿಸಾಕಿದ್ದಿರಿ: ಕುಮಾರಸ್ವಾಮಿ ವಿರುದ್ಧ ರಾಕ್‌ಲೈನ್ ವೆಂಕಟೇಶ್ ಗುಟುರು

ವಿಧಾನಸೌಧದಲ್ಲಿ ದೊಡ್ಡಣ್ಣರನ್ನು 2 ಗಂಟೆ ಕೂರಿಸಿ, ಅವರ ಮುಖದ ಮೇಲೆ ಅರ್ಜಿ ಪತ್ರ ಬಿಸಾಕಿದ್ದಿರಿ: ಕುಮಾರಸ್ವಾಮಿ ವಿರುದ್ಧ ರಾಕ್‌ಲೈನ್ ವೆಂಕಟೇಶ್ ಗುಟುರು
ವಿಧಾನಸೌಧದಲ್ಲಿ ಹಿರಿಯ ನಟ ದೊಡ್ಡಣ್ಣ ಅವರನ್ನು 2 ಗಂಟೆ ಕೂರಿಸಿ, ಅವರ ಮುಖದ ಮೇಲೆ ಅರ್ಜಿ ಪತ್ರ ಬಿಸಾಕಿದ್ದಿರಿ: ಕುಮಾರಸ್ವಾಮಿ ವಿರುದ್ಧ ರಾಕ್‌ಲೈನ್ ವೆಂಕಟೇಶ್ ಗುಟುರು

Rockline venkatesh criticises hd kumaraswamy: ಅಂಬರೀಶ್ ಇದ್ದಾಗ ಕುಮಾರಸ್ವಾಮಿ ಯಾವ ಟೋನ್‌ನಲ್ಲಿ ಮಾತಾಡುತ್ತಿದ್ರು. ಈಗ ಅವರು ಧ್ವನಿಯನ್ನು ಹೆಚ್ಚು ಮಾಡುವುದು ಬೇಡ. ಸತ್ತ ವ್ಯಕ್ತಿಯ ಬಗ್ಗೆ ಮಾತನಾಡುವುದು ಬೇಡ. ಅವರು ನಿಧನರಾದ ಬಳಿಕ ತಾವು ಮುಖ್ಯಮಂತ್ರಿಯಾಗಿ ವಿಧಾನಸೌಧದಲ್ಲಿ ಹೇಗೆ ನಡೆದುಕೊಂಡಿರಿ ಎಂಬುದನ್ನೂ ಬಲ್ಲೆ - ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್

TV9kannada Web Team

| Edited By: sadhu srinath

Jul 09, 2021 | 1:24 PM

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಅಂಬರೀಷ್​ ಕುಟುಂಬದವರ ಮೇಲೆ ಇತ್ತೀಚೆಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಸಿಟ್ಟಿಗೆದ್ದಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮತ್ತು ಸುಮಲತಾ ಅಂಬರೀಷ್​ ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು ಎಂಬ ಗಂಭೀರ ಆರೋಪದ ಬಳಿಕ ಹಿರಿಯ ನಟ ದೊಡ್ಡಣ್ಣ ಅವರ ಬಳಿ ವಿಧಾನಸೌಧದಲ್ಲಿ ಕುಮಾರಸ್ವಾಮಿ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ.

ಅಂಬರೀಶ್ ಇದ್ದಾಗ ಹೆಚ್​ ಡಿ ಕುಮಾರಸ್ವಾಮಿ ಯಾವ ಟೋನ್‌ನಲ್ಲಿ ಮಾತಾಡುತ್ತಿದ್ರು. ಈಗ ಅವರು ಧ್ವನಿಯನ್ನು ಹೆಚ್ಚು ಮಾಡುವುದು ಬೇಡ. ಸತ್ತ ವ್ಯಕ್ತಿಯ ಬಗ್ಗೆ ಮಾತನಾಡುವುದು ಬೇಡ. ಅಂಬರೀಶ್‌ರಿಂದ ನೀವು ಸಾಕಷ್ಟು ಲಾಭ ಪಡೆದಿದ್ದೀರಿ. ಒಂದ್ಕಡೆ ಅಂಬರೀಶ್ ನನ್ನ ಪ್ರಾಣ ಎನ್ನುತ್ತೀರಿ. ಆದರೆ ಅವರು ನಿಧನರಾದ ಬಳಿಕ ತಾವು ಮುಖ್ಯಮಂತ್ರಿಯಾಗಿ ವಿಧಾನಸೌಧದಲ್ಲಿ ಹೇಗೆ ನಡೆದುಕೊಂಡಿರಿ ಎಂಬುದನ್ನೂ ಬಲ್ಲೆ.

ಅಂಬರೀಷ್​ ಸ್ಮಾರಕ ವಿಚಾರವಾಗಿ ಮಾತನಾಡಲು ಬಂದಾಗ ಹಿರಿಯ ನಟ ದೊಡ್ಡಣ್ಣ ಅವರನ್ನು ವಿಧಾನಸೌಧದಲ್ಲಿ 2 ಗಂಟೆ ಕೂರಿಸಿ, ಕಾಯಿಸಿದ್ದಿರಿ. ಸ್ಮಾರಕದ ಬಗ್ಗೆ ಕೊಟ್ಟ ಪತ್ರವನ್ನು ದೊಡ್ಡಣ್ಣ ಅವರ ಮುಖಕ್ಕೆ ಬಿಸಾಕಿದ್ದಿರಿ. ಅಂಬರೀಷ್ ಏನು ಮಾಡಿದ್ದೀರಾ ಅಂತಾ ಸ್ಮಾರಕಕ್ಕೆ ನೆರವಾಗಬೇಕು? ಎಂದು ಹೇಳಿ ಕಳಿಸಿದಿರಿ ಎಂದು ಕುಮಾರಸ್ವಾಮಿ ವಿರುದ್ಧ ಬೆಂಗಳೂರಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ.

 ಇದನ್ನೂ ಓದಿ:

ನನ್ನ- ಸುಮಲತಾ ಮಧ್ಯೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು: ಅಂಬರೀಷ್ ಕುಟುಂಬದ ಅತ್ಯಾಪ್ತ ರಾಕ್​ಲೈನ್ ವೆಂಕಟೇಶ್ ರಾಕ್​ಲೈನ್ ವೆಂಕಟೇಶ್ ರಂಗಪ್ರವೇಶ: ಕುಮಾರಸ್ವಾಮಿ ಬಗ್ಗೆ ದಾರಿಯಲ್ಲಿ ಹೋಗ್ತಿದ್ದ ದಾಸಪ್ಪ ಸಿಎಂ ಆಗಿದ್ರೂ ಕೆಲಸ ಮಾಡ್ತಿದ್ದರು ಅಂದ್ರು (Rockline venkatesh criticises hd kumaraswamy over sumalatha ambareesh and actor doddanna)

Follow us on

Related Stories

Most Read Stories

Click on your DTH Provider to Add TV9 Kannada